ಸಾಲ ಬಾಧೆ: ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ
Debt-ridden farmer commits suicide by hanging himself
ಸಾಲ ಬಾಧೆ: ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ
ಸಂಕೇಶ್ವರ 03: ಸಾಲ ಬಾಧೆ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡ ರೈತನೋರ್ವ ತನ್ನ ಮನೆ ಲೀಲಾವು ಮಾಡುತ್ತಾರೆಂದು ಹೆದರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮದಲ್ಲಿ ನಡೆದಿದೆ.
ನಿಡಸೋಸಿ ಗ್ರಾಮದ ವೀರಭದ್ರ ಮಾದನ್ನವರ (42) ಆತ್ಮಹತ್ಯೆಗೆ ಶರಣಾದ ರೈತನಾಗಿದ್ದಾನೆ. ಸಾಲಬಾಧೆಯಿಂದ ಜಿಗುಪ್ಸೆ ಗೊಂಡು ತನ್ನ ಪತಿ ಆತ್ಮಹತ್ಯೆ ಗೆ ಶರಣಾಗಿರುವದಾಗಿ ರೈತನ ಪತ್ನಿ ಸಂಕೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಗಂಡನಾದ ವೀರಭದ್ರ ಮಾದನ್ನವರ ಇವರು ಜಮೀನು ಸಾಗುವಳಿ ಹಾಗೂ ಹೈನುಗಾರಿಗೆ ಮಾಡಲು ವಿವಿಧ ಬ್ಯಾಂಕುಗಳಲ್ಲಿ ಅಂದರೆ ದಿ. ಕಮುನಿಟಿ ಫೈನಾನ್ಸ್ ಪ್ರವೇಟ ಅಮಿಟೆಡ್ ಆಫೀಸ ಠಾಣಿ, ಮುಂಬೈ ಬ್ರಾಂಚ ಚಿಕ್ಕೋಡಿ ಹೆಡ್ ಆಫೀಸ ಬೆಳಗಾವಿ ಬ್ಯಾಂಕಿನಲ್ಲಿ 8,00,000 ರೂಪಾಯಿ, ಶ್ರೀ ದುರದುಂಡೇಶ್ವರ ಅರ್ಬನ್ ಕ್ರೆಡಿಟ್ಸೌಹಾರ್ದ ಸಹಕಾರಿ ಸಂಘ ನಿಯಮಿತ ನಿಡಸೋಸಿಯಲ್ಲಿ 1,50,000 ರೂಪಾಯಿ, ಕರ್ನಾಟಕ ವಿಕಾಸ ಗ್ರಾಮೀಣಬ್ಯಾಂಕ ನಿಡಸೋಸಿಯಲ್ಲಿ 80,000 ರೂಪಾಯಿ, ಐ.ಡಿ.ಎಪ್.ಸಿ ಬ್ಯಾಂಕ ಚಿಕ್ಕೋಡಿಯಲ್ಲಿ 30,000 ರೂಪಾಯಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ನಿಡಸೋಸಿಯಲ್ಲಿ 90,000 ಸಾವಿರ ರೂಪಾಯಿ ಹೀಗೆ ಒಟ್ಟು 11 ಲಕ್ಷ 50 ಸಾವಿರ ರೂಪಾಯಿ ಸಾಲ ಮಾಡಿ ಈ ವರ್ಷ ಜಮೀನದಲ್ಲಿ ಸರಿಯಾಗಿ ಬೆಳೆ ಬಾರದೇ ಇದ್ದುದರಿಂದ ಹಾಗೂ ಹೈನುಗಾರಿಕೆ ಮಾಡಲು ಖರೀದಿ ಮಾಡಿದ್ದ 05 ಆಕಳುಗಳು ತೀರಿಕೊಂಡಿದ್ದರಿಂದ ನಷ್ಟ ಅನುಭವಿಸಿ ಮಾಡಿದ ಸಾಲವನ್ನು ಹೇಗೆತೀರಿಸುವುದು ಅಂತಾ ಜೀವನದಲ್ಲಿ ಜಿಗುಪ್ಪೆ ಹೊಂದಿ ದಿ: 1ರಂದು ರಾತ್ರಿ ನಿಡಸೋಸಿ ಗ್ರಾಮ ಹದ್ದಿಯ ತನ್ನ ಜಮೀನದಲ್ಲಿರುವ ಮನೆಯಲ್ಲಿ ಹಗ್ಗದಿಂದ ನೇಣುಹಾಕಿಕೊಂಡು ತೀರಿಕೊಂಡಿರುವದಾಗಿ ಪತ್ನಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ದೂರು ದಾಖಲಿಸಿ ಕೊಂಡಿರುವ ಸಿಪಿಐ ಶಿವಶರಣ ಅವಜಿ ಅವರು ಪರೀಶೀಲನೆ ನಡೆಸಿದ್ದಾರೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 