ಬಸವನಬಾಗೇವಾಡಿ 18: ಜಮೀನದಲ್ಲಿ ಭಾವಿ ತೆಗೆಸಲು ಹಾಗೂ ಜಮೀನ ಅಭಿವೃದ್ದಿಗಾಗಿ ಸಾಲ ಮಾಡಿದ ತಾಲೂಕಿನ ತಡಲಗಿ ಗ್ರಾಮದ ರೈತನೋರ್ವ ಸಾಲಬಾಧೆಗೆ ಬಸಪ್ಪ ಚಂದ್ರಪ್ಪ ಮಧಕವಿ (60) ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ರೈತ ಬಸಪ್ಪ ಮಧಕವಿ ಕೆನರಾ ಬ್ಯಾಂಕಿನಲ್ಲಿ 2ಲಕ್ಷ ಸೇರಿದಂತೆ ವಿವಿಧೆಡೆ ಕೈಗಡ ಸಾಲವನ್ನು ಮಾಡಿ ಜಮೀನದಲ್ಲಿ ಭಾವಿ ತೆಗೆಸಲು ಹಾಗೂ ಜಮೀನ ಅಭಿವೃದ್ದಿ ಮಾಡುತ್ತಿದ್ದ ಎನ್ನಲಾಗಿದ್ದು ಹೆಂಡತಿಯೊಂದಿಗೆ ವಾಸುತ್ತಿದ್ದ ರೈತ ಬಸಪ್ಪ ಮಧಕವಿ ಭಾನುವಾರ ಏತ್ಮಧ್ಯೆ ಕಣ್ಮರೆಯಾಗಿದ್ದ ನಂತರ ಹುಡುಕಾಟ ನಡೆಸಿದರೂ ಕಾಣಸಿಗದಾಗಿದ್ದನು ಆದರೇ ತನ್ನದೆ ಜಮೀನದಲ್ಲಿನ ಭಾವಿಯ ಸಮೀಪದಲ್ಲಿ ಹುಡಕಾಡುವಾಗ ಭಾವಿ ಪಕ್ಕದಲ್ಲಿ ಕೃಷಿ ಸಾಮಗ್ರಿ ಮೃತನು ಬಳಸುವ ಇತರೆ ವಸ್ತುಗಳು ಕಂಡು ಬಂದಾಗ ಭಾವಿಯಲ್ಲಿ ಮೃತ ರೈತನ ಶವ ಪತ್ತೆಯಾಗಿದೆ ಎನ್ನಲಾಗಿದ್ದು ಈ ಕುರಿತಾಗಿ ಕೋಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತನ ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು.