ಅಬುಜಾ,
ಏ 18, ನೈಜಿರಿಯಾ ಅಧ್ಯಕ್ಷ ಕಚೇರಿಯ ಮುಖ್ಯಸ್ಥ ಮಲ್ಲಂ ಅಬ್ಬಾ ಕ್ಯಾರಿ ಕೊರೊನಾ
ಸೋಂಕಿಗೆ ಚಿಕಿತ್ಸೆ ಪಡೆಯತ್ತಿರುವ ವೇಳೆ ಮೃತಪಟ್ಟಿದ್ದಾರೆ ಎಂದು ಅಧ್ಯಕ್ಷ ಮುಹಮುದು
ಬುಹಾರಿ ಕಚೇರಿ ಶನಿವಾರ ತಿಳಿಸಿದೆ.ಕ್ಯಾರಿ ಅವರಿಗೆ 70 ವರ್ಷ ವಯಸ್ಸಾಗಿತ್ತು. ಅವರು
ಸಕ್ಕರೆ ಕಾಯಿಲೆ ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರು.ಕ್ಯಾರಿ ಅವರು 77
ವರ್ಷದ ಅಧ್ಯಕ್ಷ ಮುಹಮುದು ಬುಹಾರಿ ಅವರ ಕಚೇರಿಯ ಉನ್ನತ ಅಧಿಕಾರಿಯಾಗಿದ್ದರು.