ಧೈರ್ಯದಿಂದ ಬೆಂಕಿ ದುರಂತ ನಿಭಾಯಿಸಿ: ಆರ್.ಆರ್. ಚಾಳಣ್ಣವರ
Deal with the fire disaster with courage: R.R. Chalannavara
ಲೋಕದರ್ಶನ ವರದಿ
ಕಾಗವಾಡ 21 : ಆಕಷ್ಮಿವಾಗಿ ಉಂಟಾಗುವ ಬೆಂಕಿ ಅವಘಡಗಳನ್ನು ಧೈರ್ಯದಿಂದ ನಿಭಾಯಿಸಿ, ಹಾನಿ ಪ್ರಮಾಣ ಕಡಿಮೆಯಾಗುವುವಂತೆ ನೋಡಿಕೊಂಡು, ಬೆಂಕಿ ನಂದಿಸಸು ಪ್ರಯತ್ನ ಮಾಡಬೇಕು. ಜೊತೆಗೆ ಬೆಂಕಿ ಅವಘಢಗಳ ಕುರಿತು ಮುಂಜಾಗೃತೆ ಕ್ರಮಗಳನ್ನು ವಿದ್ಯಾರ್ಥಿಗಳು ತಿಳಿದಕೊಳ್ಳಬೇಕೆಂದು ರಾಯಬಾಗ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಆರ್.ಆರ್. ಚಾಳಣ್ಣವರ ತಿಳಿಸಿದ್ದಾರೆ.
ಅವರು ಶನಿವಾರ ದಿ. 20 ರಂದು ತಾಲೂಕಿನ ಜುಗೂಳ ಗ್ರಾಮದ ಕರ್ನಾಟಕ ಶಿಕ್ಷಣ ಸಮಿತಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಅಗ್ನಿ ಅವಘದ ಕುರಿತು ಅಣುಕು ಪ್ರದರ್ಶನ ಹಾಗೂ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಅಗ್ನಿ ಅವಘಡಗಳು ಸಂಭಿವಿಸದ ಸಂದರ್ಭದಲ್ಲಿ ಧೈರ್ಯ ಕಳೆದುಕೊಳ್ಳದೇ ಪರಿಸ್ಥಿತಿಯನ್ನು ನಿಭಾಯಿಸಿಬೇಕು. ಮತ್ತು ಬೆಂಕಿ ನಂದಿಸುವ ಮಾರ್ಗಗಳನ್ನು ಅನುಸರಿಸಬೇಕು.
ಇಂದಿನ ತಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರಿಗೂ ಅಗ್ನಿ ಅವಘಡಗಳನ್ನು ತಪ್ಪಿಸಲು ಕೈಕೊಳ್ಳಬೇಕಾಗ ಮುಂಜಾಗ್ರತೆ ಕ್ರಮಗಳು, ಅಗ್ನಿ ಅವಘಢಗಳನ್ನು ನಿಭಾಯಿಸುವ ಕುರಿತು ಮಾಹಿತಿ ಇರಬೇಕಾಗಿರುವುದು ಆಧ್ಯೆತೆಯಾಗಬೇಕು ಎಂದರು. ಈ ವೇಳೆ ವಿದ್ಯಾರ್ಥಿಗಳಿಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಅಗ್ನಿ ಅವಘಡಗಳ ಕುರಿತು ಅಣುಕು ಪ್ರದರ್ಶನ ಮಾಡಿ, ತೋರಿಸಿದರು. ಹಳೆಯ ವಿದ್ಯಾರ್ಥಿ ಅನೀಲ ಜಮದಾಡೆ ಅಥಣಿ ಅಗ್ನಿಶಾಮಕ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 