ಟೆಹರಾನ್, ಫೆ 25, ಕೊರೋನ ವೈರಸ್ ಸೋಂಕಿಗೆ ಇರಾನ್ ಕೂಡಾ ತತ್ತರಿಸಿದ್ದು, ಈವರೆಗೆ 50 ಮಂದಿ ಈ ಮಾರಕ ಸೋಂಕಿನಿಂದ ಸಾವನ್ನಪ್ಪಿದ್ದಾರೆಂದು ಅರೆಸರಕಾರಿ ಸುದ್ದಿಸಂಸ್ಥೆ ವರದಿ ಮಾಡಿದೆ. ಅದರೆ ಸರಕಾರವು ಅಧಿಕೃತವಾಗಿ ಇದನ್ನು ದೃಢಪಡಿಸಿಲ್ಲ. ಇರಾನಿನ ಕ್ವಾಮ್ ನಗರದಲ್ಲಿ ಕೊರೋನಸೊಂಕು ವ್ಯಾಪಕವಾಗಿ ಹರಡುತ್ತಿದ್ದು ಅಲ್ಲಿ ರೋಗದ ಶಂಕೆಯ ಕಾರಣ 250ಕ್ಕೂ ಅಧಿಕ ಮಂದಿಯನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದೂ ಖೊಮ್ ನಗರದ ಅಧಿಕಾರಿ ಅಹ್ಮದ್ ಅಮಿರಿಯಾಬಾದಿ ಫರ್ಹಾನಿ ಹೇಳಿದ್ದಾರೆ. ಇದೇ 13ರಿಂದ ಇರಾನಿ ನಲ್ಲಿ ಈವರೆಗೆ 50 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆಂದು ಅವರು ತಿಳಿಸಿದ್ದಾರೆ. ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಚೀನಾ ದೇಶಗಳಿಂದ ಅಕ್ರಮವಾಗಿ ದೇಶ ಪ್ರವೇಶಿಸಿದ ವ್ಯಕ್ತಿಗಳಿಂದ ದೇಶದಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡಲು ಮೂಲ ಕಾರಣ ಎನ್ನಲಾಗಿದೆ .