ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ

ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ Day and night sit-in demanding fulfillment of various demands of workers

ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ 

ಕೊಪ್ಪಳ 11: ಸಾಮಾಜಿತ ತಾರತಮ್ಯ, ದೌರ್ಜನ್ಯ, ಬಹಿಷ್ಕಾರಕ್ಕೆ ಒಳಗಾದ ಮತ್ತು ಆರ್ಥಿಕವಾಗಿ ಪರಾವಲಂಬಿಗಳಾದ ದಲಿತರು, ದಲಿತ ಮಹಿಳೆಯರು, ಒಂಟಿ ಮಹಿಳೆಯರು, ವಿಮುಕ್ತ ದೇವದಾಸಿ ಮಹಿಳೆಯರು ಮತ್ತು ಬಿಟ್ಟಿ ಚಾಕರಿಯಲ್ಲಿ ತೊಡಗಿರುವ ಮಸಣ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಡಿ. 20ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ.ಈ ಕುರೊತು ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಸಂಚಾಲಕ ಯು.ಬಸವರಾಜ ಸಂಬಂದ ಪಟ್ಟ ಕಾರ್ಮಿಕರೆಲ್ಲರೂ ಪಾಲ್ಗೊಳ್ಳಬೇಕು ಎಂದು ಹೇಳಿದರು. ಮಸಣ ಕಾರ್ಮಿಕರು ಎಷ್ಟು ಜನರಿದ್ದಾರೆ ಎಂಬುದನ್ನು ಸಮೀಕ್ಷೆ ಮಾಡಬೇಕು. ಅವರಿಗೆ ಪುನರ್ವಸತಿ ಕಲ್ಪಿಸಬೇಕು. ಇದರಿಂದ ಮಸಣ ಕಾರ್ಮಿಕರನ್ನು ಸಾಮಾಜಿಕವಾಗಿ ಮುಂದೆ ತರಲು ಸಾಧ್ಯವಿದೆ. 1982ರ ಪೂರ್ವದಲ್ಲಿ ಜನಿಸಿದವರನ್ನು ಮಾತ್ರ ಸಮೀಕ್ಷೆಗೆ ಪರಿಗಣಿಸಬೇಕು ಎಂದು ನಿಯಮ ಇದೆ. ಇದು ತಪ್ಪು. ಈ ನಿಯಮ ತೆಗೆಯಬೇಕು. 1984ರಲ್ಲಿ ದೇವದಾಸಿ ಪದ್ಧತಿ ನಿಷೇಧ ಕಾಯ್ದೆ ತರಲಾಯಿತು.  

ಹಾಗಾಗಿ ಅಲ್ಲಿಂದ ದೇವದಾಸಿ ಪದ್ಧತಿ ಆಚರಣೆ ಮಾಡಿಲ್ಲ ಎಂಬುದು ಅಧಿಕಾರಿಗಳ ವಾದ. ಆದರೆ ಬ್ರಿಟಿಷರ ಕಾಲದಲ್ಲಿಯೇ ದೇವದಾಸಿ ಪದ್ಧತಿ ನಿಷೇಧವಾಗಿದೆ. ಆದರೂ ಕೂಡಾ ಸಮಾಜದಲ್ಲಿ ಪಿಡುಗು ಜೀವಂತವಾಗಿದೆ. ಹಾಗಾಗಿ ಈ ನಿಯಮ ಸಮಂಜಸವಲ್ಲ. ಅಲ್ಲದೇ ಕಾಯ್ದೆಯ ಮೂಲಕ ದೇವದಾಸಿ ಮಹಿಳೆಯರ ಜತೆ ಸಂಸಾರ ಮಾಡಿದವರಿಗೆ ಹೊಣೆಗಾರಿಕೆ ನೀಡಿರುವುದು ಸ್ವಾಗತಾರ್ಹ ಎಂದರು.ಸಾಮಾಜಿತ ತಾರತಮ್ಯ, ದೌರ್ಜನ್ಯ, ಬಹಿಷ್ಕಾರಕ್ಕೆ ಒಳಗಾದ ಮತ್ತು ಆರ್ಥಿಕವಾಗಿ ಪರಾವಲಂಬಿಗಳಾಗಿ ಬದುಕುತ್ತಿರುವ ದಲಿತರು, ದಲಿತ ಮಹಿಳೆಯರು, ಒಂಟಿ ಮಹಿಳೆಯರು, ವಿಮುಕ್ತ ದೇವದಾಸಿ ಮಹಿಳೆಯರು ಮತ್ತು ಬಿಟ್ಟಿ ಚಾಕರಿಯಲ್ಲಿ ತೊಡಗಿರುವ ಮಸಣ ಕಾರ್ಮಿಕರ ಗಣತಿ ಮಾಡಬೇಕು. ಬಳಿಕ ಇವರೆಲ್ಲರಿಗೂ ಪುನವರ್ಸತಿ ಕಲ್ಪಿಸಬೇಕು. ಇವರಿಗೆ ಮಾಸಿಕವಾಗಿ 6 ಸಾವಿರ ರೂ. ಸಾಮಾಹಿಕ ಪಿಂಚಣಿ ನೀಡಬೇಕು. 60*40  ನಿವೇಶನ ನೀಡಿ, 10 ಲಕ್ಷ ರೂ. ಸಹಾಯಧನ ವಸತಿ ಸೌಲಭ್ಯ ಒದಗಿಸಬೇಕು. ವ್ಯವಸಾಯದಲ್ಲಿ ತೊಡಗುವವರಿಗೆ 5 ಎಕರೆ ನೀರಾವರಿ ಜಮೀನು ನೀಡಿ, ಸೌಲಭ್ಯ ಒದಗಿಸಬೇಕು. ಉದ್ಯೋಗ, ಶಿಕ್ಷಣ ಮತ್ತು ರಾಜಕೀಯ ಮೀಸಲಾತಿ ನೀಡಬೇಕು. ಇವರ ಮಕ್ಕಳ ಮದುವೆಗೆ ಪ್ರೋತ್ಸಾಹ ಧನ 10 ಲಕ್ಷ ರೂ.ಗೆ ಹೆಚ್ಚಿಸಬೇಕು. ಮದುವೆಯಾಗದವರಿಗೆ ಅವರ ಖಾತೆ 10 ಲಕ್ಷ ರೂ. ಜಮೆ ಮಾಡಬೇಕು ಎಂದರು.ಸಂಘದ ಅಧ್ಯಕ್ಷ ಜಿ.ಹುಲಿಗೆಮ್ಮ, ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ, ಜಿಲ್ಲಾ ಮುಖಂಡ ಸುಂಕಪ್ಪ, ಮಕ್ಕಳ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ ಡಗ್ಹಿ ಇದ್ದರು.