ಲಂಡನ್, ಆ 10 ಇಂಗ್ಲೀಷ್ ಪ್ರೀಮಿಯರ್ ಲೀಗ್ನ ಪ್ರಮುಖ ಕ್ಲಬ್ ಆದ ಮ್ಯಾಂಚೆಸ್ಟರ್ ಸಿಟಿಗೆ ನೂತನ ನಾಯಕನಾಗಿ ಡೇವಿಡ್ ಸಿಲ್ವಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕ್ಲಬ್ನ ಮುಖ್ಯಕೋಚ್ ಪೆಪ್ ಗಾಡರ್ಿಯೊಲಾ ಸ್ಪಷ್ಟಪಡಿಸಿದ್ದಾರೆ.
" ಡೇವಿಡ್ ಸಿಲ್ವಾ ಅವರು ಮ್ಯಾಂಚೆಸ್ಟರ್ ಸಿಟಿ ತಂಡದ ಮುಂದಿನ ನಾಯಕ. ಒಂದು ದಶಕದಿಂದಲೂ ತಂಡದ ಪರ ಆಡುತ್ತಿದ್ದಾರೆ. ಕ್ಲಬ್ ಹಾಗೂ ಪ್ರೀಮಿಯರ್ ಲೀಗ್ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದಾರೆ. ಹಾಗಾಗಿ, ಅವರಿಗೆ ಈ ಜವಾಬ್ದಾರಿ ನೀಡಲಾಗುತ್ತಿದೆ ಎಂದು ತಂಡದ ಮ್ಯಾನೇಜರ್ ಸ್ಪಷ್ಟಪಡಿಸಿರುವುದನ್ನು ಗೋಲ್. ಕಾಮ್ ವರದಿ ಮಾಡಿದೆ.
"ಡೇವಿಡ್ ಸಿಲ್ವಾ ಅವರು ಲಾಕರ್ ಕೊಠಡಿ ಬಗ್ಗೆ ತುಂಬಾ ತಿಳಿದಿದ್ದಾರೆ. ತಂಡದ ಎಲ್ಲ ಆಟಗಾರರ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಸಾಧಿಸಿದ್ದಾರ. ಹಾಗಾಗಿ. ಇವರಿಗೆ ನಾಯಕನ ಜವಾಬ್ದಾರಿ ನೀಡಲಾಗಿದೆ. ಇದರಿಂದ, ಯಾವುದೇ ಸಮಸ್ಯೆ ಎದುರಾಗುವುದಿಲ್ಲ" ಎಂದು ತಿಳಿಸಿದ್ದಾರೆ.
33ರ ಪ್ರಾಯದ ಸಿಲ್ವಾ ಅವರ ಪಾಲಿಗೆ ಈ ಬಾರಿ ಕೊನೆಯ ಆವೃತ್ತಿಯಾಗಿದೆ. ಇವರು 2010ರಲ್ಲಿ ವ್ಯಾಲೆನ್ಸಿಯಾದಿಂದ ಮ್ಯಾಂಚೆಸ್ಟರ್ ಸಿಟಿ ತಂಡಕ್ಕೆ ಸೇರ್ಪಡೆಯಾಗಿದ್ದರು. ಇಂಗ್ಲಿಷ್ ಕ್ಲಬ್ ಪರ 397 ಪಂದ್ಯಗಳಾಡಿರುವ ಅವರು 71 ಗೋಲು, 130 ಪಾಸ್ಗಳನ್ನು ನೀಡಿದ್ದಾರೆ.