ದರೂರ ಕೃಷಿ ಸಹಕಾರ ಸಂಘ ಆರ್ಥಿಕ ಅಭಿವೃದ್ಧಿಯಲ್ಲಿ ಮುನ್ನಡೆ, ಅಧ್ಯಕ್ಷ ಶಿವಗೌಡ ಬಸಗೌಡರ
Darura Agricultural Cooperative Society is making progress in economic development, says President S
ಅಥಣಿ 25: ದರೂರ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ 2024-25 ನೇ ಸಾಲಿನಲ್ಲಿ 18 ಲಕ್ಷ 57 ಸಾವಿರ 405 ರೂ.ಗಳಷ್ಟು ಲಾಭ ಮಾಡಿಕೊಂಡಿದ್ದು, ಸದಸ್ಯರಿಗೆ ಶೇ.5 ರಷ್ಟು ಲಾಭಾಂಶ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಶಿವಗೌಡ ಬಸಗೌಡರ ಹೇಳಿದರು.
ಅವರು ಸಹಕಾರ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಪ್ರಸಕ್ತ ಸಾಲಿನಲ್ಲಿ 1292 ಸದಸ್ಯರಿದ್ದು, 83, 06, 357 ರೂ.ಗಳಷ್ಟು ಶೇರು ಬಂಡವಾಳ, 8 ಕೋಟಿ 34 ಲಕ್ಷ 80 ಸಾವಿರದಷ್ಟು ದುಡಿಯುವ ಬಂಡವಾಳ ಹೊಂದಿದೆ ಎಂದ ಅವರು ಸಹಕಾರ ಭೀಷ್ಮ, ಶಾಸಕ ಲಕ್ಷ್ಮಣ ಸವದಿ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಸಹಕಾರ ಸಂಘವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ ಎಂದರು. ಪ್ರಸಕ್ತ ಸಾಲಿನಲ್ಲಿ ಶೂನ್ಯ ಬಡ್ಡಿ ದರ ಮತ್ತು ಶೇ.3ರ ಬಡ್ಡಿದರದಲ್ಲಿ ಟ್ರ್ಯಕ್ಟರ ಸಾಲ ಸಹಿತ ಒಟ್ಟು 6 ಕೋಟಿ 30 ಲಕ್ಷ 21 ಸಾವಿರಗಳಷ್ಟು ಸಾಲವನ್ನು ಸದಸ್ಯರಿಗೆ ಹಂಚಿಕೆ ಮಾಡಲಾಗಿದೆ ಎಂದ ಅವರು 99.50ಅ ರಷ್ಟು ಸಾಲ ವಸೂಲಾತಿಯಾಗಿರುವುದು ನಮ್ಮ ಸಂಘದ ಆರ್ಥಿಕ ಸ್ಥಿತಿಯನ್ನು ಭದ್ರಗೊಳಿಸಿದ್ದು, ಸಾಲ ವಸೂಲಾತಿಗೆ ಸಹಕರಿಸಿದ ಸದಸ್ಯರೆಲ್ಲರನ್ನು ಅಭಿನಂದಿಸುವೆ ಎಂದರು. ನಮ್ಮ ಸಹಕಾರಿ ಸಂಘ ಅಡಿಟನಲ್ಲಿ ’ಅ’ ವರ್ಗದಲ್ಲಿ ಬಂದಿದ್ದು, ನಮ್ಮ ಸಂಘದ ಮೂಲಭೂತ ಸೌಲಭ್ಯಕ್ಕಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ನಮ್ಮ ಸಂಘಕ್ಕೆ 1 ಲಕ್ಷ ರೂ.ಗಳನ್ನು ಸಹಾಯ ಧನ ನೀಡಿದೆ ಮತ್ತು ಸಂಘದ ಹೊಸ ಕಛೇರಿ ಹಾಗೂ ಗೋಡವನ್ ನಿರ್ಮಾಣದ ಅವಶ್ಯ ಇದ್ದು, ಇವುಗಳ ನಿರ್ಮಾಣಕ್ಕೆ ಸಭೆಯಲ್ಲಿ ಸದಸ್ಯರು ಅನುಮೋದನೆ ಕೊಟ್ಟಿದ್ದಾರೆ ಎಂದ ಅವರು ಸದಸ್ಯರು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ನಿರ್ದೇಶಕ ಮಂಡಳಿಯ ಹಿರಿಯ ಸದಸ್ಯ ಶ್ರೀಕಾಂತ ಅಸ್ಕಿ ಮಾತನಾಡಿ, ನಮ್ಮ ಸಹಕಾರ ಸಂಘ 81 ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸದ್ಯದ ಅಧ್ಯಕ್ಷ ಶಿವಗೌಡ ಬಸಗೌಡರ ಮತ್ತು ಆಡಳಿತ ಮಂಡಳಿ ಸದಸ್ಯರ ನೇತೃತ್ವದಲ್ಲಿ ಅತ್ಯತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದ ಅವರು ಸಂಘದ ಬೆಳವಣಿಗೆಗೆ ಸರ್ವ ಸದಸ್ಯರು ಕೈ ಜೋಡಿಸಬೇಕು ಆಗ ಮಾತ್ರ ಸಂಘದ ಬೆಳವಣಿಗೆಯಾಗಲು ಸಾಧ್ಯ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರುಣ ಅಥಣಿ ವಾರ್ಷಿಕ ವರದಿ ಓದಿ ಅನುಮೋದನೆ ಪಡೆದುಕೊಂಡರು. ಜಹಾಂಗೀರ ಅವಟಿ ಕಾರ್ಯಕ್ರಮ ನಿರೂಪಿಸಿದರು, ಉಪಾಧ್ಯಕ್ಷ ಸಿದಗೌಡ ಪಾಟೀಲ ವಂದಿಸಿದರು.
ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ರವೀಂದ್ರ ಕಲ್ಲೋಳಿ, ಶಶಿಕಾಂತ ಮಾಯಣ್ಣವರ, ಸಂಜಯ ಮದಭಾಂವಿ, ಶ್ರೀಮತಿ ಕಸ್ತೂರಿ ಗುಮತಾಜ, ಶ್ರೀಮತಿ ಸುರೇಖಾ ಸವದತ್ತಿ, ಮಲ್ಲೇಶ ದಳವಾಯಿ, ಭೂಪಾಲ ಕಾಂಬಳೆ, ಅಶೋಕ ಖೆಮಲಾಪುರ, ಶಂಕರ ತರಗಿ, ಗ್ರಾಮದ ಮುಖಂಡರಾದ ಬಸವರಾಜ ಮಠದ, ಮಹೇಶ ಚೌಗಲಾ, ರಾಮಗೌಡ ಗುಮತಾಜ, ದುಂಡಪ್ಪಾ ಅಸ್ಕಿ, ವಿಠ್ಠಲ್ ಚಾವಡಿಮನಿ, ಗುರುಲಿಂಗ ಗುಮತಾಜ, ಬಾಳಗೌಡ ಪಾಟೀಲ, ಮಲ್ಲಪ್ಪಾ ಕೋರಿ ಸೇರಿದಂತೆ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 