ದಲಿತ ಸ್ವರಾಜ್ಯ ಸೇನೆ - ಕರ್ನಾಟಕ ಕೊಳಗೇರಿ ಮಂಡಳಿ ಎಇಇ ಅಧಿಕಾರ ಬೇಜವಾಬ್ದಾರಿ ಽ ಶಿಸ್ತು ಕ್ರಮಕ್ಕೆ ಆಗ್ರಹ

ದಲಿತ ಸ್ವರಾಜ್ಯ ಸೇನೆ - ಕರ್ನಾಟಕ ಕೊಳಗೇರಿ ಮಂಡಳಿ ಎಇಇ ಅಧಿಕಾರ ಬೇಜವಾಬ್ದಾರಿ ಽ ಶಿಸ್ತು ಕ್ರಮಕ್ಕೆ ಆಗ್ರಹ Dalit Swarajya Sene - Karnataka Slum Board AEE authority irresponsible and demands disciplinary acti

ಲೋಕದರ್ಶನ ವರದಿ 

ವಿಜಯಪುರ 27 :  ನಗರದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ಶಿವಾನಂದ ರಾಠೋಡ್ ಅವರಿಗೆ ನಗರದ ವಿವಿಧ ಕೊಳಚೆ ಪ್ರದೇಶಗಳಲ್ಲಿನ ಸಮಸ್ಯೆಗಳ ಪಟ್ಟಿ ಸಲ್ಲಿಸಿದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಸಂಘಟನೆಯ ಅಧ್ಯಕ್ಷ ಗೌಡಪ್ಪ ಬಡಿಗೇರ ಹೇಳಿದರು. ಸಮಸ್ಯೆಗಳು ಕೇಳಲು ತಿಂಗಳಿಗಿಂತಲೂ ಹೆಚ್ಚಿನ ಅವಧಿ ಬೇಕು ಮತ್ತು ಕೊಳಚೆ ಪ್ರದೇಶಗಳಲ್ಲಿನ ಸಮಸ್ಯೆಗಳೆಲ್ಲವೂ ಆಲಿಸಿದ್ದೇನೆ, ಎಲ್ಲವೂ ಸುಸೂತ್ರ ವಾಗಿದೆ ಎಂದು ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ರವಾನಿಸುತಿದ್ದಾರೆ. ಯಾವ ಕೊಳಚೆ ಪ್ರದೇಶಗಳಿಗೂ ಬೇಟೆ ಕೊಟ್ಟು ವಾಸ್ತವ ಅಂಶಗಳನ್ನು ಪರೀಶೀಲಿಸುತ್ತಿಲ್ಲ.  

ಸಾರ್ವಜನಿಕರ ಸಮಸ್ಯೆಗಳಿಗೆ ಲಭ್ಯವಿರುವುದಿಲ್ಲ. ನಾನು ಕೂಡ ಎಸ್ಸಿನೇ ಇದ್ದೇನೆ. ನನಗೆ ಯಾರು ಏನನ್ನು ಮಾಡಿಕೊಳ್ಳಲಾಗುವುದಿಲ್ಲ ಎಂದು ಹೇಳುತ್ತಾರೆ. ಅವರಿಗೂ ಮತ್ತು ನಮಗೂ ವೈಯಕ್ತಿಕ ಯಾವುದೇ ಹಗೆತನ ಇದ್ದಿರುವುದಿಲ್ಲ. ಆದರೆ ಸಾರ್ವಜನಿಕ ಸಮಸ್ಯೆಗಳು ಹೇಳಿಕೊಂಡರೂ ಉದ್ದಾಟತನ, ಸರ್ಕಾರಿ ಸೇವೆಗೆ ಮೋಸ, ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಆದುದರಿಂದ, ಸೇವಾ ಅಧಿನಿಯಮದನ್ವಯ ನೋಟಿಸ್ ಜಾರಿಗೊಳಿಸಿ, ಕೊಳಗೇರಿ ಜನರ ಕನಿಷ್ಠ ಬದುಕುವ ಹಕ್ಕುಗಳನ್ನು ರಕ್ಷಿಸಲು ಶಿಸ್ತು ಕ್ರಮ ಜರುಗಿಸಬೇಕೆಂದು ಕೋರಿದರು. ಪದಾಧಿಕಾರಿಗಳಾದ ಅಮೃತ್, ಪರಶುರಾಮ್, ಪ್ರಶಾಂತ್, ರಮೇಶ್, ಮೇಹಬೂಬ್, ಆದಿತ್ಯ ಹಳ್ಳಿ, ಉಮೇಶ್, ಚನ್ನು, ಸಾಗರ್, ಸುಭಾಶ್ಚಂದ್ರ, ತೋಫೀಕ್, ಇಮ್ರಾನ್ ಇತರರಿದ್ದರು.