ಮುಂಡಗೋಡದಲ್ಲಿ “ಮಾನಸಂದ್ರ ಮುನಿಯಪ್ಪ ಹಾಗೂ ಬಸವಮೂರ್ತಿ ಸ್ವಾಮೀಜಿಗೆ” ದಲಿತ ಸಂಘರ್ಷ ಸಮಿತಿಯಿಂದ ಸನ್ಮಾನ
Dalit Sangharsh Samiti felicitates “Manasandra Muniyappa and Basavamurthy Swamiji” in Mundagoda
ಮುಂಡಗೋಡ 13 : ಪರಮಪೂಜ್ಯ 14ನೇ ದಲಾಯಿ ಲಾಮಾರವರ ದರ್ಶನಕ್ಕಾಗಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಅಧ್ಯಕ್ಷರಾದ ಮಾನಸಂದ್ರ ಮುನಿಯಪ್ಪ ಅವರು ಸೋಮವಾರ ಮುಂಡಗೋಡಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಎಸ್. ಪಕ್ಕೀರ್ಪ ಹಾಗೂ ಅವರ ತಂಡವು ಅವರಿಗೆ ಆತ್ಮೀಯ ಸ್ವಾಗತ ಕೋರಿತು. ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಮಾನಸಂದ್ರ ಮುನಿಯಪ್ಪ ಅವರು, ಅವರ ಸಂಗಡಿಗರು ಹಾಗೂ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಅಂಬೇಡ್ಕರ್ ಓಣಿಯಲ್ಲಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರೆ್ಣ ಮಾಡಿ ಗೌರವ ಸಲ್ಲಿಸಿದರು.
ನಂತರ ಟಿಬೇಟಿಯನ್ ಕ್ಯಾಂಪಿಗೆ ತೆರಳಿದ ಮಾನಸಂದ್ರ ಮುನಿಯಪ್ಪ ಅವರು, ಚಿತ್ರದುರ್ಗದ ಮಾದರ ಚನ್ನಯ್ಯ ಗುರುಪೀಠದ ಪರಮಪೂಜ್ಯ ಬಸವಮೂರ್ತಿ ಸ್ವಾಮೀಜಿ ಅವರೊಂದಿಗೆ ಪರಮಪೂಜ್ಯ 14ನೇ ದಲಾಯಿ ಲಾಮಾರವರಿಗೆ ಸನ್ಮಾನ ಸಲ್ಲಿಸಿ ಆಶೀರ್ವಾದ ಪಡೆದರು. ಅನಂತರ ಮುಂಡಗೋಡ ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್.) ವತಿಯಿಂದ ರಾಜ್ಯ ಸಂಘಟನಾ ಸಂಚಾಲಕರಾದ ಎಸ್. ಪಕ್ಕೀರ್ಪ ಅವರ ನೇತೃತ್ವದಲ್ಲಿ ಗೋಮಾಂಗ ಬೌದ್ಧ ಮಂದಿರದಲ್ಲಿ ಮಾನಸಂದ್ರ ಮುನಿಯಪ್ಪ ಅವರಿಗೆ ಹಾಗೂ ಮಾದರ ಚನ್ನಯ್ಯ ಗುರುಪೀಠದ ಪರಮಪೂಜ್ಯ ಬಸವಮೂರ್ತಿ ಸ್ವಾಮೀಜಿಯವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಸ್. ಡಿ. ಮುಡೆಣ್ಣವರ, ಎಚ್. ವೈ. ಕಟ್ಟಿಮನಿ, ಗೋಪಾಲ್ ನಡಕಿನಮನಿ, ಸಂತೋಷ್ ಕಟ್ಟಿಮನಿ, ಲಕ್ಷ್ಮಣ ಭೋವಿವಡ್ಡರ, ಜೂಜೆ ಸಿದ್ದಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 