ತಹಸಿಲ್ದಾರ್‌ರ ಏಕಪರ ನೀತಿ ಖಂಡೀನೀಯ ದಲಿತ ಮಿತ್ರ ಮೇಳ
Dalit Mitra Mela condemns Tahsildar's one-sided policy
ತಹಸಿಲ್ದಾರ್‌ರ ಏಕಪರ ನೀತಿ ಖಂಡೀನೀಯ ದಲಿತ ಮಿತ್ರ ಮೇಳ
ಗದಗ 07 : ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ಪ್ರದೇಶದಲ್ಲಿ ಬರುವ ಶ್ರೀ ಕಪ್ಪತ್ತ ಮಲ್ಲೇಶ್ವರ ದೇವಸ್ಥಾನವು ವಂಶ ಪಾರಂಪರಿಕವಾಗಿದ್ದು ಇದರ ವಾರಸುದಾರರರಾದ ಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀಕಾಂತ ಸ್ವಾಮಿಗಳಿಗೆ ಸಮಾನ ಹಕ್ಕು ಹೊಂದಿದ್ದು. ಸದ್ಯದ್ದ ಪರಿಸ್ಥಿತಿಯಲ್ಲಿ ಈ ಕೆಲ ಭಕ್ತರ ಸರಕಾರಿ ಅಧಿಕಾರಿಗಳ ಮೇಲೆ ಒತ್ತಡಕ್ಕೆ ಹೇರಿ ಮಲ್ಲಿಕಾರ್ಜುನ ಸ್ವಾಮಿಗಳಿಗೆ ಮಾತ್ರ ಸೇರಿದ್ದು ಅಂತ ಹೇಳಿಸುತ್ತಿದ್ದಾರೆ ಇದಕ್ಕೆ ಕಾಕತಾಳೀಯವಂತೆ ತಹಸಿಲ್ದಾರ್ ಅಧಿಕಾರಿಗಳು ಅವರ ಪರವಾಗಿ ಮಾತನಾಡುತ್ತಿದ್ದು. ಹಾಗೂ ಮಲ್ಲಿಕಾರ್ಜುನ ಸ್ವಾಮಿಗಳ ಅನುಯಾಯಿಗಳು ಶ್ರೀಕಾಂತ ಸ್ವಾಮಿಗಳ ಹಾಗೂ ಅವರ ಮಾತೋಶ್ರೀಯವರ ಮೇಲೆ 30 ಕ್ಕೂ ಅಧಿಕ ಏಕ ಪರ ಭಕ್ತರು ಹಲ್ಲೆ ಮಾಡಲೂ ಪ್ರಯತ್ನಿಸಿ ದಬ್ಬಾಳಿಕೆ ಮಾಡಿತ್ತಿದ್ದಾರೆ. ದಿನಾಂಕ 14.08.2025 ರಂದು ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವವಿದ್ದು ಈ ಕಾರ್ಯಕ್ಕೆ ಕೆಲ ಭಕ್ತರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ ಕಾರಣ ಸರಿದಾರಿ ತೋರಿ ಮುನ್ನಡೆಸಬೇಕಾದ ತಹಸಿಲ್ದಾರರು ಒಬ್ಬರ ಪರವಾಗಿ ನಿಂತಿರುವುದಕ್ಕೆ ನಮ್ಮ ವಿರೋದವಿದೆ ಎಂದು ದೂರಿ ಜಿಲ್ಲಾಧಿಕಾರಿಗಳು ಮನವಿ ಸಲ್ಲಿಸಿ ತಾವು ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಬಗ್ಗೆ ಹರಿಸಿ ಇಬ್ಬರಿಗೂ ಸಮ ಬಾಳು ಸಮ ಪಾಲು ನೀಡಿ ಜಾತ್ರಾ ಮಹೋತ್ಸವವನ್ನು ನಡೆಸಲು ಅನೂಕೂಲ ಮಾಡಿಕೊಂಡಬೇಕೆಂದು ದಲಿತ ಮಿತ್ರ ಮೇಳದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ದಲಿತ ಮಿತ್ರ ಮೇಳದ ಅಧ್ಯಕ್ಷರು ಕುಮಾರ್ ನಡಗೇರಿ, ಹುಲಗಪ್ಪ ವಾಲ್ಮೀಕಿ ಸದಾನಂದಸಿಂಗ್ ಗುರುಲಹೂಸುರ್, ಮಂಜುನಾಥ್ ಬಂಡಿವಡ್ಡರ್ ವಿಶಾಲ್ ಗೋಕಾವಿ, ಕೃಷ್ಣಾ ಹುಯಿಲಗೋಳ, ಪಂಚಾಕ್ಷರಿ ಸಾಲಿಮಠ ನಿಖಿಲ್ ಕೋಟಿ, ರವಿ ಬಂಡಿವಡ್ಡರ ಆನಂದ ಹುಡೇದ, ಪ್ರಭು ಭಂಗಿ, ಪ್ರವೀಣ ಹುಡೇದ, ಶಿವು ಬಂಗರಿ, ಅಕ್ಷಯ್ ವಡ್ಡರ ಮುಂತಾದವರು ಹಾಜರಿದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 