ಮನುಷ್ಯನ ದೀರ್ಘಾಯುಷ್ಯ ಬದುಕಿಗೆ ನಿತ್ಯ ಯೋಗ ಅಗತ್ಯ: ಮೃತ್ಯುಂಜಯ ಎಂ.ಎಂ.

ಮನುಷ್ಯನ ದೀರ್ಘಾಯುಷ್ಯ ಬದುಕಿಗೆ ನಿತ್ಯ ಯೋಗ ಅಗತ್ಯ: ಮೃತ್ಯುಂಜಯ ಎಂ.ಎಂ. Daily yoga is essential for a long life: Mrityunjaya M.M.

ರಾಣೇಬೆನ್ನೂರು 28 :  ದೀರ್ಘಾಯುಷ್ಯ ಜೀವನ ಬದುಕಿಗೆ ಯೋಗ ಧ್ಯಾನ ಪ್ರಾಣಾಯಾಮ ಇಂದಿನ ಅಗತ್ಯವಾಗಿದೆ ಎಂದು ಬಿ.ಎ.ಜೆ.ಎಸ್‌.ಎಸ್‌. ಬಿಇ ಡಿ, ಕಾಲೇಜಿನ ಪ್ರಾಚಾರ್ಯ ಡಾ. ಎಂ. ಎಂ. ಮೃತ್ಯುಂಜಯ ಹೇಳಿದರು.

ಅವರು ಕಾಲೇಜು ಭವನದಲ್ಲಿ  ನಡೆದ11ನೇ ಅಂತರಾಷ್ಟ್ರೀಯ  ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಯೋಗದಿಂದ ರೋಗ ವಿಮುಕ್ತ, ಧ್ಯಾನದಿಂದ ಮಾನಸಿಕ ಶಾಂತಿ ನೆಮ್ಮದಿ ಪ್ರಾಪ್ತ. ನಿತ್ಯ ಯೋಗ ಧ್ಯಾನದಿಂದ ಸುದೀರ್ಘ ಆರೋಗ್ಯ  ಜೀವನ ಶಾಶ್ವತವಾಗಲಿದೆ ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ, ಶಿಕ್ಷಣ ಸಲಹೆಗಾರ ಪ್ರೊ, ಹೆಚ್‌.ಎ.ಭಿಕ್ಷಾರ್ತಿಮಠ ಅವರು, ನಮ್ಮ ಪೂರ್ವಜರು ಋಷಿಮುನಿಗಳು ದೀರ್ಘಾಯುಷ್ಯದ ಬದುಕನ್ನು ಸಾಧಿಸಬೇಕಾದರೆ ಅವರು ಅಂದು ತಮ್ಮ ನಿತ್ಯದ ಜೀವನ ಬದುಕಿನಲ್ಲಿ ಅನುಸರಿಸಿಕೊಂಡು ಬಂದಿರುವ "ಯೋಗ"ವೇ ಪ್ರಮುಖ ಕಾರಣವಾಗಿದೆ. ಇತಿಹಾಸದ ಪರಿಕಲ್ಪನೆಯಲ್ಲಿ ಯೋಗ ಸಾಧಕ, ಸಂತ ಬಾಬಾ ರಾಮದೇವ್ ಜಿ ಅವರು, ಭಗವಂತನ ಸ್ವರೂಪವಾಗಿ, ಆರೋಗ್ಯ ಭಾರತದ ನಿರ್ಮಾಣಕ್ಕಾಗಿ ಧರೆಗೆ ಬಂದಿರುವುದು ಯೋಗಾನು ಯೋಗವೇ ಸರಿ. ಎಂದರು ಪ್ರಾಸ್ತಾವಿಕವಾಗಿ ಮಾತನಾಡಿದ, ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿ ಪರಶುರಾಮ ಪವಾರ ಅವರು ವಿದ್ಯಾರ್ಥಿಗಳು ಮತ್ತು ಯೋಗ ಧ್ಯಾನ ಪ್ರಾಣಯಾಮ ಕುರಿತು ಮಾತನಾಡಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ  ಕಾರ್ಯಕ್ರಮದಲ್ಲಿ ಯೋಗ ತರಬೇತುದಾರ ರಾಜೀವ್ ಕೆ.ಎಂ., ಪ್ರಶಿಕ್ಷಣಾರ್ಥಿ  ಭಾರತಿ ಶೆಟ್ಟರ್ ಅವರು ಯೋಗ ಮಹತ್ವ ಕುರಿತು ಪ್ರಾತ್ಯಕ್ಷಕೆ ನೀಡಿದರು.

ವೇದಿಕೆಯಲ್ಲಿ, ಉಪನ್ಯಾಸಕರಾದ, ಶಿವಕುಮಾರ್ ಬಿಸಲಹಳ್ಳಿ, ಎ. ಶಂಕರ ನಾಯ್ಕ್‌, ಹೆಚ್‌. ಎ. ಬ್ಯಾಡಗಿ, ಶ್ರೀಕಾಂತಗೌಡ ಶಿವಣ್ಣನವರ, ಎಚ್‌.ಬಿ. ಪಟ್ಟಣಶೆಟ್ಟಿ, ಬಿ.ಕೆ. ಚೌಡಣ್ಣನವರ, ಮುತ್ತುರಾಜ ಸಿದ್ದಣ್ಣನವರ, ಬೀರ​‍್ಪ ಲಮಾಣಿ, ಲಕ್ಷ್ಮಿ ಹಣಚಿಕ್ಕಿ,   ಚಂದನ ಕಿಚಡಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪೂಜಾ ಹುಲ್ಲತ್ತಿ ಪ್ರಾರ್ಥಿಸಿ, ಅನುಷಾ ಸಿ.ಜಿ. ಸ್ವಾಗತಿಸಿದರು.   ರುಕ್ಮಿಣಿ ಎಸ್, ನಿರೂಪಿಸಿ, ಅಕ್ಷತಾ ಗಾಳಿ, ವಂದಿಸಿದರು.