ಬಗರ್ ಉಕ್ಕಂ ಭೂಮಿಯನ್ನು ವಿಲೇವಾರಿ ಮಾಡಲು ಡಿಎಸ್‌ಎಸ್ ಪ್ರತಿಭಟನೆ

ಬಗರ್ ಉಕ್ಕಂ ಭೂಮಿಯನ್ನು ವಿಲೇವಾರಿ ಮಾಡಲು ಡಿಎಸ್‌ಎಸ್ ಪ್ರತಿಭಟನೆ DSS protests against disposal of Bagar Ukkam land

ಬಳ್ಳಾರಿ 18: ನಗರದಲ್ಲಿ ಪರಿಶಿಷ್ಟಜಾತಿ ಹಾಗೂ ದಲಿತ ತಳ ಸಮುದಾಯಗಳು ಉಳಿಮೆ ಮಾಡುತ್ತಿರುವ ಬಗರ್ ಉಕ್ಕಂ ಭೂಮಿಯ 50,53,57, ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿಎಂದುತಾಲೂಕ ಕಚೇರಿಯ ಮುಂಭಾಗದಲ್ಲಿ ಕರ್ನಾಟಕದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ವತಿಯಿಂದಧರಣಿ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. 

ರಾಜ್ಯ ಸಂಘಟನಾ ಸಂಚಾಲಕರುಎಚ್‌. ಹುಸೇನಪ್ಪರವರು ಮಾತನಾಡಿ, ಭೂಮಿ ಉಳ್ಳವರಿಗೆ ಸಾಮಾಜಿಕ ಘನತೆಯನ್ನು ಹಾಗೂ ಆಳುವ ವರ್ಗವಾಗಿ ಸಮಾಜವನ್ನು ನಿಯಂತ್ರಿಸುವ ಅಧಿಕಾರವನ್ನು ನೀಡುತ್ತದೆ. ವೈದಿಕ ಧರ್ಮ ಅರ್ಥಾತ್ ಬ್ರಾಹ್ಮಣ ಧರ್ಮತಲೆ ತಲಾಂತರಗಳಿಂದ ದಲಿತರನ್ನು ಭೂಮಿ ಹಾಗೂ ನೈಸರ್ಗಿಕ ಸಂಪತ್ತಿನಿಂದ ವಂಚಿಸುತ್ತಾ ಬಂದಿದೆ. ಬಾಬಾ ಸಾಹೇಬರ ಸೈದ್ಧಂತಿಕ ನೆಲೆಯಲ್ಲಿದಲಿತ ಚಳುವಳಿ ಭೂಮಿ, ಶಿಕ್ಷಣ,ಉದ್ಯೋಗ,ಮುಂತಾದ ಮನುಷ್ಯನ ಮೂಲಭೂತಅವಶ್ಯಕತೆಗಾಗಿ ಅಳುವ ಪ್ರಭುತ್ವದೊಂದಿಗೆ ನಿರಂತರ ಸಂಘರ್ಷ ನಡೆಸುತ್ತಾ ಬಂದಿದೆ.  

ಕಳೆದ ನಾಲ್ಕು ದಶಕಗಳಿಂದ ದಲಿತರ ಭೂಮಿ ಹಕ್ಕಿಗಾಗಿ ನಡೆಸಿದ ಹೋರಾಟದಲ್ಲಿದರಕಸ್ತುಜಮೀನು ಮಂಜೂರು ಮಾಡುವಕಾಯಿದೆಜಾರಿಗೆತಂದಿತ್ತು. 70ರ ದಶಕದಲ್ಲಿ ಮಾನ್ಯ ಬಿ ಬಸವಲಿಂಗಪ್ಪನವರದೂರದೃಷ್ಟಿಯ ಫಲವಾಗಿ ಪಿ ಟಿ ಸಿ ಎಲ್‌ಕಾಯ್ದೆಜಾರಿಗೆ ಬಂದಿದ್ದರೂ ಸಹ ಜಾತಿವಾದಿಗಳ ಹಾಗೂ ಅಧಿಕಾರ ಶಾಹಿಯ ಮಸಲತ್ತಿನಿಂದ ಮತ್ತು ಸರ್ಕಾರಗಳ ಕುತಂತ್ರದಿಂದ ಪಿ ಟಿ ಸಿ ಎಲ್ ಜಮೀನುಗಳ ಪ್ರಕರಣಗಳಲ್ಲಿ ದಲಿತ ಸಮುದಾಯಗಳು ಕೋಟಿಗಳಿಗೆ ಅಲೆಯುತ್ತ ವಂಚನೆಗೆ ಒಳಗಾಗಿದ್ದಾರೆ ಎಂದುಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಸಂಚಾಲಕರಾದಎಚ್‌.ಚಿಕ್ಕ ಗಾದಿಲಿಂಗಪ್ಪರವರು ಮಾತನಾಡಿ, ಈ ನಮ್ಮರಾಜ್ಯ ಸಮಿತಿ  "ಹೆಂಡ ಬೇಡ - ಭೂಮಿ ಬೇಕು" ಎನ್ನುವಘೋಷಣೆಯನ್ನು 80ರ ದಶಕದಲ್ಲಿ ಮೊಳಗಿಸಿತ್ತು. ಅದೇರೀತಿ ಬಗರು ಹುಕ್ಕಂ ಸಾಗುವಳಿ ಮಾಡುತ್ತಿರುವದಲಿತರನ್ನುಅರಣಭೂಮಿ ಸಾಮಾಜಿಕಅರಣ್ಯೀಕರಣ ಗೋವುಗಳ ಗೋಮಾಳಗಳಿಗೆ ಒಕ್ಕಲ್‌ಎಬ್ಬಿಸುವುದನ್ನುಖಂಡಿಸುತ್ತೇವೆ.ಹಾಗೂ ಈ ಬಗ್ಗೆ ಸರ್ಕಾರವನ್ನುಎಚ್ಚರಿಸಲು ಹಾಗೂ ದಲಿತರ ಭೂಮಿ ವಸತಿ ಹಕ್ಕು ಮತ್ತುಇತರೆ ಅಕ್ಕು ಒತ್ತಾಯಗಳಿಗೆ ಆಗ್ರಹಿಸಿ ಇಂದುರಾಜ್ಯದ ಪ್ರತಿಯೊಂದುಜಿಲ್ಲೆ ಹಾಗೂ ತಾಲೂಕುಗಳಲ್ಲಿ ಎಲ್ಲಾತಾಲೂಕು ಕಚೇರಿಗಳ ಮುಂದೆ ಭೂಮಿ ಮಂಜೂರಾತಿಗೆಕರ್ನಾಟಕದಲಿತ ಸಂಘರ್ಷ ಸಮಿತಿಅಂಬೇಡ್ಕರ್ ವಾದ ಆಗ್ರಹಿಸಿ  ಪ್ರತಿಭಟನಾಧರಣಿ ಮಾಡುತ್ತಿದ್ದೇವೆ. ನಮ್ಮ ಹೋರಾಟ ಈ ಧರಣೀಯ ಪ್ರತಿಕಾರವಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ರಾಜ್ಯ ಸರ್ಕಾರಕ್ಕೆಎಚ್ಚರಿಕೆ ನೀಡಿದರು. ಹಾಗೂ ಹುಲುಗಪ್ಪಎಸ್ ಎಂ, ಸುಂಕಣ್ಣ, ಚಿಗುರು ಕಲಾ ತಾಂಡದಿಂದಡಾಽಽ ಅಂಬೇಡ್ಕರ್‌ರವರಕ್ರಾಂತಿ ಗೀತೆಗಳನ್ನು ಹಾಡಿದರು. 

ಈ ಸಂದರ್ಭದಲ್ಲಿ ಪಿ ತಾಯಪ್ಪರಾಜಸಂಜೆ ಸದಸ್ಯರು, ಎ. ಕೆ.ಗಂಗಾಧರ ವಿಭಾಗೀಯ ಸಂಘಟನಾ ಸಂಚಾಲಕರು, ಈರಪ್ಪ ಜಿಲ್ಲಾ ಸಂಘಟನಾ ಸಂಚಾಲಕರು, ಲಾಲೆಪ್ಪ, ಎಂ ರಾಜೇಶ್ವರಿ, ಬಿ ರಾಜಶೇಖರ, ರಾಚೋಟಪ್ಪ, ಬಸವರಾಜ್‌ಅಮರಾಪುರ ,ಆಂಜನೇಯ, ವೆಂಕಪ್ಪ ಗಾದಿಲಿಂಗ, ಹೊನ್ನೂರಪ್ಪ , ದೇವೇಂದ್ರ, ಚಿದಾನಂದಪ್ಪ ಸಿದ್ದರಾಜು, ಭೂಮಿ ವಂಚಿತದಲಿತರು ಸಂಘದ ಸದಸ್ಯರುಇತರರು ಉಪಸ್ಥಿತರಿದ್ದರು.