ಡಿ.ಎಸ್‌.ಎಸ್‌. ವತಿಯಿಂದ ಪೂರ್ವಭಾವಿ ಸಭೆ; ಪ್ರೊ. ಕೃಷ್ಣಪ್ಪ ಜಯಂತಿ ಆಚರಣೆಗೆ ತೀರ್ಮಾನ

ಡಿ.ಎಸ್‌.ಎಸ್‌. ವತಿಯಿಂದ ಪೂರ್ವಭಾವಿ ಸಭೆ; ಪ್ರೊ. ಕೃಷ್ಣಪ್ಪ ಜಯಂತಿ ಆಚರಣೆಗೆ ತೀರ್ಮಾನ DSS holds preliminary meeting; Decision taken to celebrate Prof. Krishnappa Jayanti

ಬಳ್ಳಾರಿ 21:  ನಗರದ ಸ್ನೇಹ ಸಂಪುಟ ಹಾಲ್ನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ಪೂರ್ವಭಾವಿ ಸಭೆ ನಡೆಯಿತು.ಸಭೆಗೆ ಸಂಘಟನಾ ಸಂಸ್ಥಾಪಕರಾದ ಪರುಶುರಾಮ ನೀಲನಾಯಕ್ ಆಗಮಿಸಿ ಮಾರ್ಗದರ್ಶನ ನೀಡಿದರು. ಮುಂದಿನ ತಿಂಗಳು ಬೆಂಗಳೂರಿನ ಟೌನ್ ಹಾಲ್ನಲ್ಲಿ ನಡೆಯಲಿರುವ ಪ್ರೊ. ಕೃಷ್ಣಪ್ಪ ಅವರ 88ನೇ ಜಯಂತಿ ಹಾಗೂ ಃ. ಖ. ಅಂಬೇಡ್ಕರ್ ಅವರ ‘ಮೂಕನಾಯಕ’ ಪತ್ರಿಕೆಯ ಪುನಾರಂಭ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ಓಂಕಾರ​‍್ಪ ಕಪ್ಪಗಲ್ಲು, ರಾಜ್ಯ ಖಜಾಂಚಿ ಈ ನಾಗರಾಜ, ಜಿಲ್ಲಾ ಸಂಚಾಲಕರಾದ ಸಿ. ಲಿಂಗಪ್ಪ,ಚಂದ್ರ ಶೇಖರ್ ಗೊಟೂರು, ಹಾಗೂ ಮಹಿಳಾ ಸಂಚಾಲಕಿ ತಿಮ್ಮಲಾಪುರ ಮಲ್ಲಮ್ಮ, ಚಂದ್ರ​‍್ಪ ಲಿಂಗದೇವನಹಳ್ಳಿ,  ಕಪ್ಪಾಗಲ್ಲು ಸುರೇಶ್, ನಾಗೇಂದ್ರ ಮೋಕಾ, ರಾಘವೇಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.