ಸಾಂಸ್ಕೃತಿಕ ಕಲಾ ಮೇಳ ಯಶಸ್ವಿ
Cultural art fair a success
ಲೋಕದರ್ಶನ ವರದಿ
ಚಂದರಗಿ 21: ದಿ. 19 ಹಾಗೂ 20ರಂದು ರಾತ್ರಿ 08 ಗಂಟೆಗೆ ಶ್ರೀ ಗ್ರಾಮದೇವಿ ನಾಟಕ ಹಾಗೂ ಭಜನಾ ಕಲಾವಿದರ ಸಂಘ, ಎಮ್. ಚಂದರಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಎಮ್. ಚಂದರಗಿ ಗ್ರಾಮದಲ್ಲಿ “ಸಾಂಸ್ಕೃತಿಕ ಕಲಾ ಮೇಳ” ವನ್ನು ಹಮ್ಮಿಕೊಂಡು ಯಶಸ್ವಿಗೊಳಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹಣಮಂತ ಬಸಪ್ಪ ಭಜನ್ನವರ, ಗ್ರಾಮ ಪಂಚಾಯತ ಹಿರಿಯರು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಬಸಪ್ಪ ಅಕ್ಕಿಸಾಗರ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾರುತಿ ಭರಮಪ್ಪ ಕರಿಗಾರ, ಉದ್ದಪ್ಪ ರಾಮಪ್ಪ ಕೌಜಲಗಿ, ಈರ್ಪ ಗಿರೆಪ್ಪ ಮಲ್ಲಾಡಿ ಗೌಡಪ್ಪ ಯ ಕರಿಗೌಡ್ರ ಚನಬಸಪ್ಪ ರಾಮವ್ವ ಅಕ್ಕಿಸಾಗರ, ಇವರು ಭಾಗವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಬಸಪ್ಪ ಅಕ್ಕಿಸಾಗರ ಇವರು ಮಾತನಾಡಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸುವುದರಿಂದ ಹಲವಾರು ಕಲಾವದರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಅವರ ಜೀವನಕ್ಕೂ ಒಂದು ದಾರಿಯಾದಂತೆ ಆಗುತ್ತದೆ ಎಂದು ಹೇಳಿದರು. ಈ ಆಧುನಿಕ ಯುಗದಲ್ಲಿ ಜಾನಪದ ಕಲೆಯನ್ನು ಉಳಿಸಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಾನಪದ ಸಂಗೀತ, ಸೋಬಾನ ಪದ, ಬಿಸುವಕಲ್ಲಿನ ಪದ, ಚರ್ಮವಾದ್ಯ, ಕೋಲಾಟ, ಜಾನಪದ ನೃತ್ಯ, ಕರಡಿ ಮಜಲು, ಡೊಳ್ಳಿನ ಪದಗಳು, ಹಂತಿ ಪದಗಳು, ಶ್ರೀಕೃಷ್ಣ ಪಾರಿಜಾತ, ರಾದ ಾ ಕೃಷ್ಣಾ, ಸಂಗ್ಯಾ-ಬಾಳ್ಯಾ ಸಣ್ಣಾಟ, ನಿಜಗುಣಿ ಶಿವಯೋಗಿ,ಹಾಗೂ ಭಜನಾ ಪದಗಳು ಜರುಗಿದವು. ಸ್ವಾಗತವನ್ನು ಬಸಪ್ಪ ಅಕ್ಕಿಸಾಗರ ಹಾಗೂ ವಂದಣಾರೆ್ಣಯನ್ನು ಅಕ್ಕಮಹಾದೇವಿ ಮಾದರ ಮಾಡಿದರು.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 