ಮಾಲೆ ಹಾಕದಂತೆ ಡಿಕೆಶಿ ಮನವಿ
ಬೆಂಗಳೂರು, ಮಾ. 12, ಆರೋಗ್ಯದ ದೃಷ್ಟಿಯಿಂದ ಅಭಿಮಾನಿಗಳು ಹೂವಿನ ಮಾಲೆ ಹಾಕುವುದು ಬೊಕ್ಕೆಗಳನ್ನು ತಂದು ಅಲರ್ಜಿ ಉಂಟು ಮಾಡದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿಮಾನಿಗಳಿಗೆ ಕಾರ್ಯಕರ್ತರಿಗೆ ನನ್ನ ಮೇಲೆ ಪ್ರೀತಿ, ಅಭಿಮಾನ ಇದೆ. ಆದರೆ ಹೂವುಗಳ ಹಾರ ನನಗೆ ಆರೋಗ್ಯದ ದೃಷ್ಟಿಯಿಂದ ಅಲರ್ಜಿ ಯಾಗುತ್ತದೆ. ದಯವಿಟ್ಟು ಕಾರ್ಯಕರ್ತರು ಹಣವನ್ನು ದುಂದುವೆಚ್ಚ ಮಾಡಬೇಡಿ. ತಳಮಟ್ಟದಿಂದ, ಬೂತ್ ಮಟ್ಟದಿಂದ ನಾವು ಪಕ್ಷವನ್ನು ಕಟ್ಟಬೇಕಿದೆ, ಅದಕ್ಕಾಗಿ ನಿಮ್ಮ ಹಣವನ್ನು ಹೂವುಗಳಿಗಾಗಿ ವ್ಯರ್ಥ ಮಾಡಬೇಡಿ. ಸುಮ್ಮನೆ ಬಂದು ಸಿಹಿತಿಂಡಿ , ಕೇಕ್ ತಿನ್ನಿಸುವುದು ಎಲ್ಲ ಬೇಡ ಎಂದರು.ರಾಜ್ಯ ಕಾಂಗ್ರೆಸ್ ನಲ್ಲಿ ಸಮಸ್ಯೆ ಇದೆ ಎಂದು ಭಾವಿಸಿದರೆ ಅದು ಸಮಸ್ಯೆಯೇ. ಸಮಸ್ಯೆ ಇಲ್ಲ ಅಂದುಕೊಂಡರೆ ಸಮಸ್ಯೆ ಇಲ್ಲ. ನನಗೆ ಇದು ಯಾವುದೂ ಕಷ್ಟವಲ್ಲ, ಸಮಸ್ಯೆಯೂ ಅಲ್ಲ.ಹೇಗೆ ಪಕ್ಷ ಕಟ್ಟುತ್ತೇವೆ ನೋಡುತ್ತಾ ಇರಿ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 