ಡಿಎಂಎಫ್ ಅಭಿವೃದ್ಧಿ 55 ಕೋಟಿ ರೂ.ಬಳಕೆ: ಕಾರಜೋಳ
ಬಾಗಲಕೋಟೆ: ಜಿಲ್ಲೆಯಲ್ಲಿ ಖನಿಜ ಉತ್ಪಾದಿಸುವ ಪ್ರದೇಶಗಳ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಮೂಲಭೂತ ಅಭಿವೃದ್ಧಿಗಾಗಿ 55 ಕೋಟಿ ರೂ.ಗಳ ಡಿ.ಎಂ.ಎಫ್ (ಜಿಲ್ಲಾ ಖನಿಜ ಪ್ರತಿಷ್ಠಾನ) ಹಣವನ್ನು ಉಪಯೋಗಿಸಲಾಗುವುದೆಂದು ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಡಿ.ಎಂ.ಎ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ಜಿಲ್ಲೆಯಲ್ಲಿ ವಿವಿಧ ಖನಿಜಗಳ ಉತ್ಪಾದನೆಗಾಗಿ ಒಟ್ಟು 55 ಕೋಟಿ.ರೂ.ಗಳ ಕರ ಸಅಂಗ್ರಹವಾಗಿದ್ದು, ಈ ಅನುದಾನವನ್ನು ಜಿಲ್ಲೆಯ ಎಲ್ಲ ಮತಕ್ಷೇತ್ರಗಳ ಖನಿಜ ಉತ್ಪಾದಿಸುವ ಗ್ರಾಮಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲಾಗುವುದು ಎಂದು ತಿಳಿಸಿದರು.
ಈ ಕರದಲ್ಲಿ ಈಗಾಗಲೇ 7 ಕೋಟಿ ರೂ. ಖಚರ್ಾಗಿದ್ದು, ಉಳಿದ ಹಣವನ್ನು ಬಳಕೆ ಮಾಡಲಾಗುವುದು. ಬಾದಾಮಿ ತಾಲೂಕಿನಲ್ಲಿ 1.67ಕೋಟಿ ರೂ, ಬಾಗಲಕೋಟೆಯಲ್ಲಿ 1,55ಕೋಟಿ ರೂ, ಬೀಳಗಿಯಲ್ಲಿ 32ಲಕ್ಷರೂ, ಹುನಗುಂದ 13.83 ಕೋಟಿ ರೂ. ಜಮಖಂಡಿ 8.ಕೋಟಿ, ಮುಧೋಳದಲ್ಲಿ 35 ಕೋಟಿ ಹಾಗೂ ತೇರದಾಳದಲ್ಲಿ 7 ಲಕ್ಷ ರೂ .ಸಂಗ್ರಹವಾಗಿದೆ. ಈ ಅನುದಾನವನ್ನು ಗ್ರಾಮಗಳ ರಸ್ತೆ, ಚರಂಡಿ, ನೀರು. ಶಾಲೆಗಳಲ್ಲಿ ಸ್ಮಾಟರ್್ ಕ್ಲಾಸ್ ಮುಂತಾದವುಗಳಿಗೆ ಬಳಸಲಾಗುವುದು. ದೇವಸ್ಥಾನ ಕಟ್ಟಡ ಮಾರ್ಗಸೂಚಿಯಡಿ ಅವಕಾಶವಿಲ್ಲವೆಂದು ಸಚಿವರು ತಿಳಿಸಿದರು.
ಕಲಬುಗರ್ಿಯಲ್ಲಿ ಸೂರ್ಯ ಗ್ರಹಣ ಸಂದರ್ಭದಲ್ಲಿ ಅಂಗವಿಕಲ ಮಗುವನ್ನು ಮಣ್ಣಿನಲ್ಲಿ ಅರ್ಧ ಮುಚ್ಚಿದ ಪ್ರಕರಣದ ಕುರಿತು ಮಾತನಾಡಿದ ಅವರು ಮೂಢನಂಬಿಕೆ ಹಾಗೂ ಕಂದಾಚಾರಗಳ ವಿರುದ್ಧ ಬಸವಣ್ಣನ ಕಾಲದಿಂದಲೂ ಸಮಾಜದಲ್ಲಿ ಅರಿವು ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಕೆಲವೆಡೆ ಇನ್ನು ಚಾಲ್ತಿಯಲ್ಲಿವೆ. ಜನರು ಸಾಕ್ಷರಸ್ತರಾಗುವವರೆಗೂ ಇಂತಹ ಪ್ರಕರಣಗಳು ಸಮಾಜದಲ್ಲಿ ಕಾಣುವುದು ಸಹಜ. ಮೂಢನಂಬಿಕೆಗಳಿಗೆ ಕಡಿವಾಣ ಹಾಕುವುದರ ಜೊತೆಗೆ ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ ಬಾಗಲಕೋಟೆ ನಗರಕ್ಕೆ 24*7 ನಿರಂತರ ಕುಡಿಯುವ ನೀರು ಸರಬರಾಜಿಗೆ 60ಕೋಟಿ ರೂ.ಗಳ ಹೆರಕಲ್ ಯೋಜನೆಯನ್ನು ಇದೇ ಮಾಚರ್್ ಒಳಗಾಗಿ ಪೂರ್ಣಗೊಳಿಸಲಾಗುವುದು. ಬರುವ ಏಪ್ರಿಲ್ ಮೊದಲವಾರದಿಂದ ನೀರು ಸರಬರಾಜು ಮಾಡಲಾಗುವುದು. ಈಗಾಗಲೇ ಅರಣ್ಯ ಇಲಾಖೆಯವರ ಅನುಮತಿಯೂ ದೊರಕಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಂಸದರಾದ ಪಿ.ಸಿ ಗದ್ದಿಗೌಡರ. ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ. ಎಸ್ಪಿ ಲೋಕೇಶ ಜಗಲಾಸರ ಸೇರಿದಂತೆ ಗಣಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 