ದೇಶದ್ರೋಹ ಭಾಷಣದಿಂದ ಕುಖ್ಯಾತಿ ಗಳಿಸಿದ್ದ ಡಿಎಎಂ ಮುಖ್ಯಸ್ಥೆ ಅಸಿಯಾ ಅಂದ್ರಾಬಿ ಎನ್.ಐ.ಎ. ವಶಕ್ಕೆ

ದುಖತರಾನ್-ಏ-ಮಿಲತ್ ಸಂಘಟನೆ ಮುಖ್ಯಸ್ಥೆ ಆಸಿಯಾ ಅಂದ್ರಾಬಿ

ಲೋಕದರ್ಶನ ವರದಿ

ನವದೆಹಲಿ,ಜು.06 (ಹಿ.್ಮು ಮತ್ತು ಕಾಶ್ಮೀರದಲ್ಲಿ ದೇಶದ್ರೋಹದ ಭಾಷಣ ಮೂಲಕ ಕುಖ್ಯಾತಿ ಗಳಿಸಿದ್ದ ನಿಷೇಧಿತ ದುಖತರಾನ್-ಏ-ಮಿಲತ್ ಸಂಘಟನೆ ಮುಖ್ಯಸ್ಥೆ ಆಸಿಯಾ ಅಂದ್ರಾಬಿ ಇಂದು ಎನ್ ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆಸಿಯಾ ಅಂದ್ರಾಬಿಯೊಂದಿಗೆ ಆಕೆಯ ಇಬ್ಬರು ಸಹವತರ್ಿಗಳಾದ ಸೋಫಿ ಫಹ್ಮಿದಾ ಹಾಗು ನಹಿದಾ ನಸ್ರಿನ್ರನ್ನು ಕೂಡ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಏಪ್ರಿಲ್ನಲ್ಲಿ ದೇಶದ ವಿರುದ್ಧ ಯುದ್ಧ ಸಾರಿದ್ದ ಆಸಿಯಾಳನ್ನು ಶ್ರೀನಗರ ಕಾರಾಗೃಹದಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ. ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಆಸಿಯಾ ಪರ ವಕೀಲರು ಸಲ್ಲಿಸಿದ್ದ ಅಜರ್ಿಯನ್ನು ಕಾಶ್ಮೀರ ಹೈಕೋಟರ್್ ಕಳೆದ ತಿಂಗಳು ವಜಾಗೊಳಿಸಿತ್ತು. ಇದಕ್ಕೂ ಮೊದಲು ಕೇಂದ್ರ ಗೃಹಸಚಿವಾಲಯದ ಆದೇಶದ ಮೇರೆಗೆ ಅಂದ್ರಾಬಿ ಹಾಗೂ ಆಕೆಯ ಸಹವತರ್ಿಗಳ ಮೇಲೆ ವಿಧ್ವಂಸಕ ಕೃತ್ಯ(ತಡೆ) ಕಾಯಿದೆ 1967ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ದ್ವೇಷ ಭಾಷಣಗಳನ್ನು ನೀಡುವ ಮೂಲಕ ಭಾರತದ ಐಕ್ಯತೆ, ಸಮಗ್ರತೆ ಹಾಗು ಸರ್ವಭೌಮತೆಯನ್ನು ಅಪಾಯಕ್ಕೆ ಸಿಲುಕಿಸುವ ಕೆಲಸವನ್ನು ಅಂದ್ರಾಬಿ ಮಾಡುತ್ತಿದ್ದಾರೆ. ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಬೇಕೆಂದು ಬಹಿರಂಗವಾಗಿ ಹೇಳುವ ಆಸಿಯಾ, ದೇಶದ ವಿರುದ್ಧ ಹಿಂಸಾಚಾರ ನಡೆಸಲು ಜಿಹಾದ್ಗೆ ಕರೆ ನೀಡಿದ್ದಾಳೆ ಎಂದು ಆಕೆಯ ವಿರುದ್ಧದ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಈಕೆ ನಡೆಸುತ್ತಿರುವ ಸಂಘಟನೆ ಮೂಲಕ ಧಾಮರ್ಿಕ ಭಾವನೆಗಳನ್ನು ಕೆರಳಿಸಿ ವಿವಿಧ ಸಮುದಾಯಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುಲಾಗುತ್ತಿದ್ದು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ಕಷ್ಟವಾಗುತ್ತಿದೆ ಈ ಹಿಂದೆ ಗೃಹ ಸಚಿವಾಲಯಕ್ಕೆ ಕೆಲ ದೂರುಗಳು ಬಂದಿದ್ದವು. ಇನ್ನು ಭಯೋತ್ಪಾದಕ ನಾಯಕರೊಂದಿಗೆ ಆಸಿಯಾ ಅಂದ್ರಾಬಿ ನಿರಂತರವಾಗಿ ದೂರವಾಣಿ ಸಂಪರ್ಕದಲ್ಲಿದ್ದ ವಿಚಾರವು ಪೊಲೀಸ್ ತನಿಖೆಯಿಂದ ಹೊರಬಂದಿದೆ.