ಶಿಕ್ಷಕರ ಬಹುದಿನದ ಬೇಡಿಕೆಯನ್ನು ಡಿಡಿಪಿಐ ಈಡೇರಿಸಿದ್ದಾರೆ
DDPI fulfills teachers' long-standing demand
ರಾಯಬಾಗ 27: ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಮನವಿಗೆ ಸ್ಪಂದಿಸಿ ಚಿಕ್ಕೋಡಿಯಲ್ಲಿ ಎಸ್.ಎಸ್.ಎಲ್.ಸಿ. ಮೌಲ್ಯಮಾಪನ ಕೇಂದ್ರ ಮಂಜೂರು ಮಾಡಿರುವ ಡಿಡಿಪಿಐ ಸೀತಾರಾಮ ಅವರ ಕಾರ್ಯ ಸ್ವಾಗತಾರ್ಹ ಎಂದು ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿನೇಂದ್ರ ನಿಲಜಗಿ ತಿಳಿಸಿದರು.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘದ ಮನವಿಗೆ ಸ್ಪಂದಿಸಿ, ಶಿಕ್ಷಕರ ಬಹುದಿನದ ಬೇಡಿಕೆಯನ್ನು ಡಿಡಿಪಿಐ ಅವರು ಈಡೇರಿಸಿದ್ದಾರೆ.ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿದ ನಂತರ ಮೌಲ್ಯಮಾಪನಕ್ಕಾಗಿ ಮೌಲ್ಯಮಾಪನ ಕೇಂದ್ರಗಳನ್ನು ಈ ಹಿಂದೆ ನಿಪ್ಪಾಣಿಯಲ್ಲಿ ವ್ಯವಸ್ಥೆ ಮಾಡಲಾಗುತ್ತಿತ್ತು.
ಬೇಸಿಗೆ ಬಿಸಿಲಿನ ಧಗೆಯ ಮಧ್ಯದಲ್ಲಿ ಅಥಣಿ ತಾಲೂಕಿನ ಕೊನೆಯ ಹಳ್ಳಿಗಳಿಂದ ಮತ್ತು ಹುಕ್ಕೇರಿ ತಾಲೂಕಿನ ಕೊನೆಯ ಹಳ್ಳಿಗಳಿಂದ ಗೋಕಾಕ ಹಾಗೂ ಮೂಡಲಗಿ ತಾಲೂಕಿನಿಂದ ಶಿಕ್ಷಕರು ಬೆಳಿಗ್ಗೆ 7 ಘಂಟೆಗೆ ಮನೆ ಬಿಟ್ಟಾಗ ಮಾತ್ರ ಮುಂಜಾನೆ 9.30 ರಿಂದ 10 ಘಂಟೆಯ ಒಳಗಾಗಿ ಮೌಲ್ಯಮಾಪನ ಕೇಂದ್ರವನ್ನು ತಲುಪಲು ಸಾಧ್ಯವಾಗುತ್ತಿತ್ತು.ಸಾಯಂಕಾಲದ 5:30 ಕ್ಕೆ ಮೌಲ್ಯಮಾಪನ ಕೇಂದ್ರದಿಂದ ನಿರ್ಗಮಿಸಿದ ಶಿಕ್ಷಕರು ತಡ ರಾತ್ರಿ 8 ಘಂಟೆಗೆ ಮನೆ ತಲುಪುತ್ತಿದ್ದರು. ಇದರಿಂದ ಶಿಕ್ಷಕರು ಮಾನಸಿಕಕಿರಿಕಿರಯ ಜೊತೆಗೆ ಅವಸರದಿಂದ ಕರ್ತವ್ಯ ನಿರ್ವಹಿಸುವದರಿಂದ, ಹಲವಾರು ತಪ್ಪುಗಳ ಜೊತೆಗೆಗಡಿಬಿಡಿಯಿಂದ ತೆರಳುವಾಗ ಅಪಘಾತಗಳಾಗಿ ಶಿಕ್ಷಕರಿಗೆ ತುಂಬಾ ತೊಂದರೆಯಾಗುತ್ತಿದ್ದವು.
ಈ ವಿಷಯವನ್ನು ಹಲವಾರು ಶಿಕ್ಷಕರು ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘಕ್ಕೆ ಮನವಿ ಮಾಡಿಕೊಂಡಿದ್ದರು. ಸಂಘಟನೆಯವರು ಸದರಿ ವಿಷಯವನ್ನು ಉಪನಿರ್ದೇಶಕರ ಗಮನಕ್ಕೆ ತಂದು ಮನವಿ ಸಲ್ಲಿಸಿದ್ದರು, ಮತ್ತು ಕಳೆದ ಬಾರಿ ಮೌಲ್ಯಮಾಪನ ಕೇಂದ್ರಕ್ಕೆ ಉಪನಿರ್ದೇಶಕರು ಭೇಟಿ ಕೊಟ್ಟಾಗ ಮುಂದಿನ ಬಾರಿ ಚಿಕ್ಕೋಡಿಯಲ್ಲಿ ಮೌಲ್ಯಮಾಪನ ಕೇಂದ್ರ ಮಾಡುವದಾಗಿ ಭರವಸೆ ನೀಡಿದ್ದರು.
ಉಪನಿರ್ದೇಶಕ ಸೀತಾರಾಮ, ಶಿಕ್ಷಣಾಧೀಕಾರಿ ಆರಿಫ್ ಬಿರಾದರ ಮತ್ತು ನೊಡಲ್ ಅಧಿಕಾರಿ ಶ್ರೀಹರಿ ಕಾಡೆ ಮತ್ತು ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿನೇಂದ್ರನಿಲಜಗಿಯವರ ನೇತ್ರತ್ವದಲ್ಲಿ ಚಿಕ್ಕೋಡಿಯಲ್ಲಿ ಲಭ್ಯವಿರುವ ಶಾಲೆಗಳಿಗೆ ಭೇಟಿ ನೀಡಿ ಮುಖ್ಯೋಪಾಧ್ಯಾಯರ ಹಾಗೂ ಆಡಳಿತ ಮಂಡಳಿಯವರ ಮನವಲಿಸಿ ಚಿಕ್ಕೋಡಿಯಲ್ಲಿ ಮೌಲ್ಯಮಾಪನ ಕೇಂದ್ರಗಳನ್ನು ರಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಶಿಕ್ಷಕರಿಗೆ ಅನುಕೂಲ ಮಾಡಿದಉಪನಿರ್ದೇಶಕರಿಗೆ ಶಿಕ್ಷಕರ ಸಂಘದ ಪ್ರತಿನಿಧಿಗಳು ಹಾಗೂ ಜಿಲ್ಲೆಯ ಎಲ್ಲ ಶಿಕ್ಷಕರು ಅಭಿನಂದನೆ ಸಲ್ಲಿಸಿರುವುದಾಗಿ ಹೇಳಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 