ಜನರ ಸಲಹೆಗಳನ್ನು ವಿಸ್ತೃತ ಯೋಜನೆಯಲ್ಲಿ ಅಳವಡಿಸಲು ಡಿಸಿ ಸಲಹೆ

ಹಾವೇರಿ24: ಹಾವೇರಿಯಿಂದ ಶಿರಸಿವರೆಗೆ ಚತುಸ್ಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಸಕರ್ಾರ ನಿರ್ಧರಿಸಿದೆ. ಜಿಲ್ಲೆಯ ಆಥರ್ಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಈ ಹೆದ್ದಾರಿ ಹೆಚ್ಚು ಅನುಕೂಲಕರವಾಗಲಿದೆ. ಈ ಯೋಜನೆಗೆ ಯೋಜನಾ ವ್ಯಾಪ್ತಿಯ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಮನವಿ ಮಾಡಿಕೊಂಡರು.

    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಭಾರತೀಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ ಉದ್ದೇಶಿತ ಹಾವೇರಿಯಿಂದ ಶಿರಸಿವರೆಗಿನ ಚತುಸ್ಪಥ ರಸ್ತೆ ಮಾರ್ಗದ ಯೋಜನಾ ವ್ಯಾಪ್ತಿಯ ಸಾರ್ವಜನಿಕರೊಂದಿಗೆ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಭೆಯಲ್ಲಿ ಸಾರ್ವಜನಿಕರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ವಿಸ್ತೃತ ಯೋಜನೆ ತಯಾರಿಸುವಾಗ ಅಳವಡಿಸಿಕೊಳ್ಳುವಂತೆ ಯೋಜನಾ ನಿದರ್ೆಶಕರಿಗೆ ಸೂಚಿಸಿದರು.

   75 ಕಿ.ಮೀ.ಉದ್ದದ ಪ್ರಸ್ತುತವಿರುವ ದ್ವಿಪಥ ರಸ್ತೆ ಚತುಸ್ಪಥ ರಸ್ತೆಯಾಗಿ ಮೇಲ್ದಜರ್ೆಗೇರಿಸಲು ಉದ್ದೇಶಿಸಲಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ.  ಗೋವಾ ಮತ್ತು ಬೇಲಿಕೆರೆ ಬಂದರ್ಗೆ ಸಮೀಪದ ಮಾರ್ಗವಾಗುವ ಈ ರಸ್ತೆ ಹಾವೇರಿಗೆ ಭವಿಷ್ಯದ ದಿನಗಳಲ್ಲಿ ರಸ್ತೆಗಳ ಅಭಿವೃದ್ಧಿ, ಸಾಮಾಜಿಕವಾಗಿ ಆಥರ್ಿಕವಾಗಿ ಜಿಲ್ಲೆಯ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಹೇಳಿದರು.

   ರಸ್ತೆ ಹಾದುಹೋಗುವ ಮಾರ್ಗದಲ್ಲಿ 14 ಗ್ರಾಮಗಳಲ್ಲಿ ಬೈಪಾಸ್ ರಸ್ತೆಗಳನ್ನು ನಿಮರ್ಾಣ ಮಾಡಬೇಕು. ಸಾರ್ವಜನಿಕರಿಗೆ ಉಂಟಾಗುವ ನಷ್ಟವನ್ನು ಕಡಿಮೆಗೊಳಿಸಬೇಕು. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಲ್ಲಿ ಕೆಳ ಸೇತುವೆಗಳನ್ನು ನಿಮರ್ಿಸಿಕೊಡಬೇಕು. ಮರಗಿಡಗಳನ್ನು ಉಳಿಸಲು ಆದ್ಯತೆ ನೀಡಬೇಕು. ಪಯರ್ಾಯವಾಗಿ ರಸ್ತೆಯ ಇಕ್ಕೆಲಗಳಲ್ಲಿ ಮರಗಿಡಗಳನ್ನು ನೆಡುವ ಕುರಿತಂತೆ ಕ್ರಮವಹಿಸಬೇಕು. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ಭೂಸ್ವಾಧೀನ ಅಧಿಸೂಚನೆ ಪ್ರಕಟಗೊಂಡ ನಂತರ ತ್ವರಿತವಾಗಿ ರೈತರಿಗೆ ಪರಿಹಾರ ಹಣ ನೀಡಬೇಕು ಎಂದು ತಿಳಿಸಿದರು.

        ಈ ಯೋಜನೆಗೆ ಭೂಮಿ ಕಳೆದುಕೊಂಡವರಿಗೆ ಯೋಜನಾ ನಿರಾಶ್ರಿತರೆಂದು ಪ್ರಮಾಣಪತ್ರ ನೀಡಲಾಗುವುದು. ಇದರಿಂದ ಸಕರ್ಾರಿ ನೌಕರಿ ಇತರ ಸಕರ್ಾರದ ಯೋಜನೆಗಳ ಮಂಜೂರಾತಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. 

ಹಾನಗಲ್ ಶಾಸಕರಾದ ಸಿ.ಎಂ.ಉದಾಸಿ ಅವರು ಮಾತನಾಡಿ ಶಿರಸಿ-ಹಾನಗಲ್   ಹಾವೇರಿ ಮಾರ್ಗವಾಗಿ ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಮಾರ್ಗ ಪ್ರಸ್ತಾವದಲ್ಲಿದೆ. ಇದಕ್ಕೆ ಮೊದಲೇ  ಹಾವೇರಿಯಿಂದ ಶಿರಸಿ ಮಾರ್ಗವನ್ನು ನಾಲ್ಕು ಪಥದ ಮಾರ್ಗವಾಗಿ ಉನ್ನತೀಕರಿಸಲಾಗುತ್ತಿದೆ. ಮುಂದಿನ 10 ವರ್ಷಗಳ ಜನದಟ್ಟಣೆ ಹಾಗೂ ಸಂಚಾರಿ ದಟ್ಟಣೆಯನ್ನು ಗಮನದಲ್ಲಿರಿಸಿಕೊಂಡು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಮಾರ್ಗಸೂಚಿಯಂತೆ ಕಾಮಗಾರಿಯನ್ನು ನಡೆಸುತ್ತದೆ. ಜಿಲ್ಲೆಯ ಆಥರ್ಿಕ ಮತ್ತು ಸಾಮಾಜಿಕ ಬೆಳವಣಿಗೆಯ ದೃಷ್ಟಿಯಿಂದ ಈ ಹೆದ್ದಾರಿ ಹೆಚ್ಚು ಅನುಕೂಲಕರವಾಗಿದೆ. ಈ ದೃಷ್ಟಿಯಿಂದ ಎಲ್ಲರೂ ಸಹಕಾರ ಕೊಡುವುದು ಅಗತ್ಯವಾಗಿದೆ ಎಂದು ಮನವಿ ಮಾಡಿಕೊಂಡರು.

 ಸಭೆಯಲ್ಲಿ ಜನರು ಹಲವು ಬಯಕೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ವಿಷಯಗಳನ್ನು ವಿಸ್ತೃತವಾದ ಯೋಜನಾ ವರದಿಯನ್ನು ತಯಾರಿಸುವಾಗ ಭಾರತೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಅಳವಡಿಸಿಕೊಳ್ಳಬೇಕು. ಕೇಸಿಫ್ ರಸ್ತೆಗಳನ್ನು ಅಳತೆಮಾಡುವಾಗ ಮೋಸವಾಗಿದೆ ಹಾಗೂ ಪರಿಹಾರ ವಿಳಂಬವಾಗಿದೆ ಎಂಬ ಭಾವನೆ ಭೂಮಿ ಕಳೆದುಕೊಂಡವರಲ್ಲಿದೆ. ಹಾಗಾಗಿ ಈ ಹೆದ್ದಾರಿಯ ಅಭಿವೃದ್ಧಿ ಸಂದರ್ಭದಲ್ಲಿ ಸವರ್ೇ ಮಾಡುವಾಗ ಭೂ ಮಾಲಿಕರ ಸಮ್ಮುಖದಲ್ಲೇ ಸವರ್ೇ ಕಾರ್ಯ ಕೈಗೊಳ್ಳಬೇಕು ಹಾಗೂ ತ್ವರಿತವಾಗಿ ಪರಿಹಾರ ನೀಡಬೇಕು. ಈಗಾಗಲೇ ಪ್ರಸ್ತಾವಿಸಿದ ವತರ್ುಲ ರಸ್ತೆಯ ಹೊರತಾಗಿಯೂ ಸಮ್ಮಸಗಿ, ಹನುಮನಕೊಪ್ಪ, ಗುರುರಾಯಪಟ್ಟಣ, ಬಾಳಂಬೀಡ, ಶೀಗಿಹಳ್ಳಿ,, ಗೌರಾಪುರ, ಹೊಸಳ್ಳಿ, ದೇವಿಹೊಸೂರ ಕ್ರಾಸ್ಗಳಲ್ಲಿ ವತರ್ುಲ ರಸ್ತೆಗಳ ಅಗತ್ಯವಿದೆ. ಈ ಎಲ್ಲ ವಿಷಯಗಳನ್ನು ಅಳವಡಿಸಿಕೊಳ್ಳುವಂತೆ ಎನ್.ಎಚ್.ಎ.ಐ.ನ ಯೋಜನಾ ನಿದರ್ೆಶಕರಿಗೆ ಸೂಚಿಸಿದರು.

ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರು ಮಾತನಾಡಿ ರೈತರಿಗೆ ಪ್ರಸ್ತುತ ಮಾರುಕಟ್ಟೆ ದರ ನಿಗಧಿಪಡಿಸಿ ಪರಿಹಾರ ಹಣ ಒದಗಿಸಬೇಕು. ನೋಂದಣಿ ಇಲಾಖೆ ದರದಂತೆ ಪರಿಹಾರ ಒದಗಿಸಿದರೆ ತೊಂದರೆಯಾಗಲಿದೆ. ಈ ಕುರಿತಂತೆ ಗಮನಹರಿಸಲು ಸಭೆಯಲ್ಲಿ ಮನವಿ ಮಾಡಿಕೊಂಡರು.

  ಹೆದ್ದಾರಿ ಪ್ರಾಧಿಕಾರದ ಯೋಜನಾ ನಿದರ್ೆಶಕ ಕರ್ನಲ್ ಜಾನ್ಬಾಜ್ ಅವರು ಯೋಜನೆಯ ವಿವರವನ್ನು ಸಭೆಗೆ ನೀಡಿ ಸಾಗರಮಾಲಾ ಯೋಜನೆಯಡಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ಹಾವೇರಿಯಿಂದ ಶಿರಸಿವರೆಗಿನ ದ್ವಿಪಥ ರಸ್ತೆಯನ್ನು ಚತುಸ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಒಟ್ಟಾರೆ 75 ಕಿ.ಮೀ. ಉದ್ದದ ಈ ರಸ್ತೆ 70 ಮೀಟರ್ ಅಗಲ ಹೊಂದಿದೆ. ಪ್ರತಿ ಕಿ.ಮೀ.ಗೆ ಪರಿಹಾರ ಸೇರಿದಂತೆ 15 ಕೋಟಿ ರೂ. ಅಂದಾಜು ವೆಚ್ಚವನ್ನು ನಿಗಧಿಪಡಿಸಿದೆ.  ಹಾವೇರಿ ನಗರದೊಳಗೆ ಈ ರಸ್ತೆ ಹಾದುಹೋಗುವುದಿಲ್ಲ. ರಾಷ್ಟ್ರೀಯ ಹೆದ್ದಾರಿ 48 (ಹಳೆಯ ಎನ್.ಎಚ್.4)ರಿಂದ ಎನ್.ಎಚ್.66ಕ್ಕೆ ಸಂಪಕರ್ಿಸುತ್ತದೆ. ಎರಡು ಹೆದ್ದಾರಿಗಳನ್ನು ಸಂಪಕರ್ಿಸುವ ಯೋಜನೆ ಇದಾಗಿದೆ. ಬೇಲಿಕೆರೆ ಬಂದರ್ಗೆ ಸಂಪಕರ್ಿಸುತ್ತದೆ. ಬೆಂಗಳೂರಿನಿಂದ ಗೋವಾಕ್ಕೆ ಅತ್ಯಂತ ಸಮೀಪದ ಮಾರ್ಗ ಇದಾಗಿದೆ. ಬೇಲಿಕೆರೆ ಬಂದರ್ನಿಂದ ರಫ್ತು ಮತ್ತು ಆಮದು ವಹಿವಾಟಿಗೆ ಹೆಚ್ಚು ಅನುಕೂಲಕರವಾಗಲಿದೆ. ಈ ಮಾರ್ಗದಲ್ಲಿ ಶಿರಸಿ, ದಾಸನಕೊಪ್ಪ, ಕತ್ರಿಕೊಪ್ಪ, ಅಕ್ಕಿಆಲೂರು, ಬಾಳಂಬೀಡ, ಆಡೂರ, ಸಂಗೂರ, ಆಲದಕಟ್ಟಿ ಗ್ರಾಮಗಳಿಗೆ ವತರ್ುಲ ರಸ್ತೆ ಮೂಲಕ ರಸ್ತೆ ನಿಮರ್ಿಸಲಾಗುವುದು. 80 ರಿಂದ 100 ಮೀಟರ್ ವೇಗದಲ್ಲಿ ಚಲಿಸುವ ವೇಗ ಮಿತಿಯನ್ನು ಈ ಯೋಜನೆಯಲ್ಲಿ ಅಳವಡಿಸಲಾಗಿದೆ. ಭೂಸ್ವಾಧೀನ ಹಾಗೂ ಇತರ ಸವರ್ೇ ಕಾರ್ಯಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾವನ್ನು ಬಳಸಲಾಗುವುದು. ಅತ್ಯಂತ ಗುಣಮಟ್ಟದ ಕಾಮಗಾರಿ ಕೈಗೊಳ್ಳಲಾಗುವುದು. ಸ್ಥಳೀಯರ ಅಹವಾಲುಗಳನ್ನು ಸ್ವೀಕರಿಸಿ ಜನರ ಅಗತ್ಯತೆಗಳನ್ನು ಅಳವಡಿಸಿಕೊಂಡು ಅಂತಿಮವಾಗಿ ವಿಸ್ತೃತ ಯೋಜನೆಯನ್ನು ರೂಪಿಸಲಾಗುವುದೆಂದು ವಿವರಿಸಿದರು. 

ಸಾರ್ವಜನಿಕ ಅಭಿಪ್ರಾಯ: ಸಭೆಯಲ್ಲಿ ಭಾಗವಹಿಸಿದ ಜಿಲ್ಲಾ ಪಂಚಾಯತ ಸದಸ್ಯ ಈಟೇರ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ವಾಣಿಜ್ಯೋದ್ಯಮಿಗಳು ಹಾಗೂ ಸಾರ್ವಜನಿಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತ ಪ್ರಸ್ತಾವಿತ ಯೋಜನೆಯಲ್ಲಿ ಏಳು ವತರ್ುಲ ರಸ್ತೆಗಳನ್ನು ನಮೂದಿಸಲಾಗಿದೆ. ಆದರೆ ಹೆಚ್ಚು ದಟ್ಟಣೆ ಇರುವ ಹಳ್ಳಿಗಳಿಗೂ ವತರ್ುಲ ರಸ್ತೆ ಅಗತ್ಯವಿದ್ದು ಕನಿಷ್ಠ 14 ವತರ್ುಲ ರಸ್ತೆಗಳನ್ನು ರಚಿಸಬೇಕು. ರೈತರ ಬೇಡಿಕೆ ಅನುಸಾರವಾಗಿ ಕೆಳ ಸೇತುವೆಗಳನ್ನು ನಿಮರ್ಿಸಬೇಕು. ರಸ್ತೆಯ ಇಕ್ಕೆಲಗಳಲ್ಲಿ ನಾಲ್ಕು ಮೀಟರ್ ಅಗಲದ ರಸ್ತೆಗಳನ್ನು ನಿಮರ್ಿಸಬೇಕು. ಗಿಡ ಮರಗಳ ರಕ್ಷಣೆಗೆ ಆದ್ಯತೆ ನೀಡಬೇಕು. ಹಳೆಯ ಮರಗಳನ್ನು ಗದಗ ಮಾದರಿಯಲ್ಲಿ ಸ್ಥಳಾಂತರಿಸಬೇಕು. ರಸ್ತೆಗಳ ಬೌಂಡರಿಗಳನ್ನು ಗುರುತಿಸಲು ಬಾಂದಗಲ್ಗಳನ್ನು ಅಳವಡಿಸಿ ಒತ್ತುವರಿ ತಡೆಯಲು ಸಾಲು ಮರಗಳನ್ನು ಹಾಕಬೇಕು. ಫ್ಯಾಬ್ರಿಕ್ ಬಸ್ ಶೆಲ್ಟರ್ ಬದಲು ಕಾಂಕ್ರೀಟ್ ಶೆಲ್ಟರ್ಗಳನ್ನು ನಿಮರ್ಿಸಬೇಕು. ರಸ್ತೆ ಮಾರ್ಗದಲ್ಲಿ ಲಾರಿ, ಬಸ್ ಸೇರಿದಂತೆ ಭಾರಿ ವಾಹನಗಳ ನಿಲುಗಡೆ ಪಾಕರ್್ಗಳನ್ನು ಸ್ಥಾಪಿಸಬೇಕು.  ಅತೀ ಹೆಚ್ಚು ಮಳೆ ಪ್ರದೇಶವಾಗಿರುವುದರಿಂದ ಅತ್ಯಂತ ಗುಣಮಟ್ಟದ ರಸ್ತೆಯನ್ನು ನಿಮರ್ಿಸಬೇಕು. ಗ್ರಾಮದೊಳಗೆ ರಸ್ತೆ ಹಾದುಹೋಗುವುದನ್ನು ತಪ್ಪಿಸಿ ವತರ್ುಲ ರಸ್ತೆ ನಿಮರ್ಾಣ, ಹೆದ್ದಾರಿಗಾಗಿ ಜಮೀನು ಕಳೆದುಕೊಂಡವರಿಗೆ ತಕ್ಷಣದಲ್ಲಿ ಮಾರುಟಕ್ಟೆ ದರದಲ್ಲಿ ಪರಿಹಾರ ಹಣ ನೀಡಬೇಕು  ಎಂದು ಮನವಿ ಸಲ್ಲಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೊಟ್ರೇಶಪ್ಪ ಬಸೇಗಣ್ಣಿ, ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ನೆಹರು ಓಲೇಕಾರ ಇತರರು ಉಪಸ್ಥಿತರಿದ್ದರು.