ಕಾರವಾರ, 25: ಪ್ರತಿ ತಿಂಗಳ ಎರಡನೇ ಭಾನುವಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜಾನಾಂಗಗಳ ಸಮಸ್ಯೆ, ದೂರು ಇತ್ಯರ್ಥಗಳ ಕುರಿತು ಎಲ್ಲ ಪೊಲೀಸ್ ಠಾಣೆಗಳಲ್ಲಿ``ದಲಿತರ ದಿನ"ಎಂದು ಆಚರಿಸಲು ಕಾರ್ಯಕ್ರಮರೂಪಿಸುವಂತೆ ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ಡಾ.ಹರೀಶ್ಕುಮಾರ್ ಕೆ. ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸೋಮವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಅಧ್ಯಕ್ಷತೆ ವಹಿಸಿ ಅವರು, ದಲಿತ ಸಮುದಾಯದಲ್ಲಿಆತ್ಮಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ಅವರ ಸಮಸ್ಯೆ ಆಲಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಸಂಬಂಧ ಪೊಲೀಸ್ ಇಲಾಖೆ ಪ್ರತಿ ತಿಂಗಳ ಎರಡನೇ ಭಾನುವಾರ ದಲಿತರ ದಿನ ಎಂದುಆಚರಿಸುವಂತೆ ಸಕರ್ಾರ ಆದೇಶಿಸಿದೆ. ಈ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಯಲ್ಲೂ ದಲಿತರ ದಿನ ಕಾರ್ಯಕ್ರಮ ರೂಪಿಸುಂವಂತೆ ಅವರು ಪೊಲೀಸ್ ಇಲಾಖೆಗೆ ಸೂಚಿಸಿದರು.
ಪ್ರತಿ ತಿಂಗಳ ಎರಡನೇ ಭಾನುವಾರ ಪೊಲೀಸ್ಠಾಣೆಯಲ್ಲಿದಲಿತರ ದಿನ ಕಾರ್ಯಕ್ರಮ ಏರ್ಪಡಿಸಿ ಆ ಭಾಗದದಲಿತ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಅವರ ಸಮಸ್ಯೆಗಳನ್ನು ಆಲಿಸಿ ಅಲ್ಲಿಯೇ ಇತ್ಯರ್ಥಪಡಿಸುವುದಾದಲ್ಲಿ ಕ್ರಮವಹಿಸುವುದು ಹಾಗೂ ಮೇಲಧಿಕಾರಿಗಳ ಮಟ್ಟದ್ದಾಗಿದ್ದರೆ ಠಾಣಾಧಿಕಾರಿ ಪೊಲೀಸ್ ಇಲಾಖೆಯ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ನಂತರ ತಿಂಗಳ ಕೊನೆಯ ಭಾನುವಾರ ನಡೆಯುವ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ವರದಿ ಕುರಿತು ಕ್ರಮಕ್ಕೆ ಪೊಲೀಸ್ ಇಲಾಖೆಯ ಮೇಲಧಿಕಾರಿಗಳ ಕ್ರಮ ವಹಿಸಬೇಕಿದೆ. ಆದ್ದರಿಂದ ಕೂಡಲೆ ಪೊಲೀಸ್ ಇಲಾಖೆ ಸಕರ್ಾರದ ಆದೇಶದಂತೆ ದಲಿತರ ದಿನ ಆಚರಣೆಗೆಕಾರ್ಯಕ್ರಮರೂಪಿಸಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.
ಉತ್ತರಕನ್ನಡ ಜಿಲ್ಲೆಯ ಸಮಾಜಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮಸ್ಯೆಗಳನ್ನು ಏಕಗವಾಕ್ಷಿ ಪದ್ಧತಿಯಲ್ಲಿದೂರು ಸ್ವೀಕರಿಸಿ ಬಗೆಹರಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಇಲಾಖೆಯಿಂದ ದೌರ್ಜನ್ಯ ತಡೆ ಕಾಯ್ದೆ ಕುರಿತು ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುವಂತೆ ಅವರು ತಿಳಿಸಿದರು.
ಸುಳ್ಳು ದಾಖಲೆ ಸೃಷ್ಟಿಸಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದ 49 ಜಾತಿ ಪ್ರಮಾಣ ಪತ್ರಗಳನ್ನು ಈಗಾಗಲೇ ರದ್ದುಪಡಿಸಲಾಗಿದೆ. ನ್ಯಾಯಾಲಯದ ವ್ಯಾಪ್ತಿಯಲ್ಲಿರುವ ಪ್ರಕರಣಗಳು ಇತ್ಯರ್ಥವಾದ ಬಳಿಕ ಇನ್ನುಳಿದ ಪ್ರಕರಣಗಳಲ್ಲಿಯೂ ಸೂಕ್ತ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ದೌರ್ಜನ್ಯ ನಿಯಂತ್ರಣಕಾಯ್ದೆ 1995 ನಿಯಮ 17ರಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಜಿಲ್ಲಾ ಮಟ್ಟದಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಗಿದ್ದು ಸಮಿತಿಯಲ್ಲಿ ಜಿಲ್ಲಾಧಿಕಾರಿಯವರುಅಧ್ಯಕ್ಷರಾಗಿರುತ್ತಾರೆ, ಜಿಲ್ಲೆಯಚುನಾಯಿತ ಸಂಸತ್ ಮತ್ತುರಾಜ್ಯ ವಿಧಾನಸಭಾ ಮತ್ತು ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪೊಲೀಸ್ ಆಧೀಕ್ಷಕರು, ಜಿಲ್ಲಾ ಸಕರ್ಾರಿ ಅಭಿಯೋಜಕರು, ಹಳಿಯಾಳ ತಾಲೂಕಿನ ದಿಯೋಗ ಸಿದ್ದಿ, ಕುಮಟಾತಾಲೂಕಿನ ಮಂಜುನಾಥಕುಮಾರ್ಅಗೇರ, ಮುಂಡಗೋಡ ತಾಲೂಕಿನಎಸ್.ಫಕೀರಪ್ಪ (ಸಣ್ಣ ಫಕೀರಪ್ಪ ಹರಿಜನ), ಶಿರಸಿ ತಾಲೂಕಿನ ಗೀತಾರಾಮಣ್ಣಾ ಭೋವಿ, ಡಿ.ಬಂಗಾರಪ್ಪ, ಡಾ.ವೆಂಕಟೇಶ್ ನಾಯ್ಕ್ (ಸಹ್ಯಾದ್ರಿ ಸಮುದಾಯಅಭಿವೃದ್ಧಿ ಮತ್ತು ಮಹಿಳಾ ಸಶಕ್ತಿಕರಣ ಸಂಸ್ಥೆ, ಶಿರಸಿ) ಹೊನ್ನಾವರ ತಾಲೂಕಿನ ತುಳಸೀದಾಸ ಗಣಪತಿ ಪಾವುಸ್ಕರ್, ಕಾರವಾರದ ಯಮುನಾಗಾಂವ್ಕರ್ (ರಾಜ್ಯ ಕಾರ್ಯದಶರ್ಿ, ಸಿಐಟಿಯು ಪೆನ್ಷನರ್ಸ್ ಹೋಮ್) ಸದಸ್ಯರಾಗಿದ್ದಾರೆ. ಸಮಾಜಕಲ್ಯಾಣ ಇಲಾಖೆ ಉಪನಿದರ್ೇಶಕ ಪುರುಷೋತ್ತಮ ಸದಸ್ಯ ಕಾರ್ಯದಶರ್ಿಯಾಗಿದ್ದು, ಚುನಾಯಿತ ಜನಪ್ರತಿನಿಧಿಗಳನ್ನು ಹೊರತು ಪಡಿಸಿ ಎಲ್ಲರೂ ಸಭೆಯಲ್ಲಿ ಉಪಸ್ಥಿತರಿದ್ದರು.