ಡ್ರೋನ್ ಮೂಲಕ ಗೋವಿನ ಜೋಳದ ಬೆಳೆಗೆ ಡಿಎಪಿ ಸಿಂಪಡಣೆ
DAP spraying of cowpea crop through drone
ಡ್ರೋನ್ ಮೂಲಕ ಗೋವಿನ ಜೋಳದ ಬೆಳೆಗೆ ಡಿಎಪಿ ಸಿಂಪಡಣೆ
ಬ್ಯಾಡಗಿ 06: ಕೃಷಿ ಇಲಾಖೆ ಬ್ಯಾಡಗಿ ಹಾಗೂ ಇಫ್ಕೊ ಸಂಸ್ಥೆಯ ಸಹಭಾಗಿತ್ವದಲ್ಲಿ ಡ್ರೋನ್ ಮೂಲಕ ನ್ಯಾನೋ ಯೂರಿಯೂ ಹಾಗೂ ನ್ಯಾನೊ ಡಿಎಪಿ ಸಿಂಪಡಣಿಯ ಪ್ರಾತ್ಯಕ್ಷಿಕೆ ಬ್ಯಾಡಗಿ ಸಮೀಪದ ರೈತರ ಜಮೀನಿನಲ್ಲಿ ಗುರುವಾರ ನಡೆಯಿತು. ಡ್ರೋನ್ಗೆ ಸಂಪರ್ಕಿಸಲ್ಪಟ್ಟ 10 ಲೀಟರ್ ಕ್ಯಾನ್ನಲ್ಲಿ 9 ಲೀಟರ್ ನೀರು ಮತ್ತು ಅರ್ಧ ಲೀಟರ್ ನ್ಯಾನೋ ಯೂರಿಯಾ ಮತ್ತು ಅರ್ಧ ಲೀಟರ್ ನ್ಯಾನೋ ಡಿ ಎ ಪಿ ಗೊಬ್ಬರ ಹಾಕಿ ಗೋವಿನಜೋಳದ ಬೆಳೆಗೆ ಸಿಂಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕರಾದ ಕರಿಯಲ್ಲಪ್ಪ ಡಿ ಕೊರಚರ ಮಾತನಾಡಿ,ನ್ಯಾನೋ ಗೊಬ್ಬರಗಳ ನಿಖರ ಮತ್ತು ಉದ್ದೇಶಿತ ಬಳಕೆ ಪರಿಸರಕ್ಕೆ ಹಾನಿಯಾಗದಂತೆ ಬೆಳೆಗಳ ಸಾರಜನಕದ ಅಗತ್ಯವನ್ನು ಪೂರೈಸುತ್ತದೆ. ನ್ಯಾನೋ ಗೊಬ್ಬರಗಳನ್ನು ಎಲೆಗಳ ಮೇಲೆ ಸಿಂಪಡಿಸುವುದರಿಂದ ಪೋಷಕಾಂಶದ ಸದ್ಬಳಕೆಯಾಗುತ್ತದೆ. ಪೋಷಕಾಂಶಗಳ ಪೋಲಾಗುವಿಕೆ ಕಡಿಮೆಯಾಗುತ್ತದೆ ಹಾಗೂ ಸಾಮಾನ್ಯ ರಸಗೊಬ್ಬರ ಬಳಕೆಯಿಂದಾಗುವ ಮಣ್ಣು ಮತ್ತು ನೀರಿನ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು. ಬೆಳೆ ಬೆಳವಣಿಗೆಯ ಹಂತಗಳಲ್ಲಿ ಇವುಗಳನ್ನು ಸಿಂಪಡಿಸುವುದರಿಂದ ಮೇಲುಗೊಬ್ಬರವಾಗಿ ಬಳಸುವ ಯೂರಿಯ ಗೊಬ್ಬರವನ್ನು 50ಅ ವರೆಗೆ ಕಡಿಮೆ ಮಾಡಬಹುದು.
ಬಹಳಷ್ಟು ರೈತರು ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಹರಳು ಯೂರಿಯೂ ಗೊಬ್ಬರವನ್ನು ಕೈಯಿಂದ ಹಾಕುತ್ತಾರೆ. ಕೈಯಿಂದ ಗೊಬ್ಬರ ಹಾಕುವುದರಿಂದ ಶೇ 30ಅ ರಷ್ಟು ಮಾತ್ರ ಬೆಳೆಗಳಿಗೆ ಬಳಕೆಯಾಗುತ್ತದೆ. ಆದರೆ ನ್ಯಾನೋ ಯೂರಿಯಾ/ ಡಿ ಎ ಪಿ ಡ್ರೋನ್ ಮೂಲಕ ಅಥಾವ ಸ್ಪ್ರೇಯರ್ ಮೂಲಕ ಸಿಂಪಡಿಸಿದರೆ ಶೇ 80ಅ ರಷ್ಟು ಬೆಳೆಗಳಿಗೆ ತಲುಪುತ್ತದೆ. ಅಲ್ಲದೆ ಇದು ಕಡಿಮೆ ಅವಧಿಯಲ್ಲಿ ಕಡಿಮೆ ಖರ್ಚು ಮತ್ತು ಕಡಿಮೆ ಶ್ರಮದ ಮೂಲಕ ಹೆಚ್ಚು ಬೆಳೆಗಳಿಗೆ ತಲುಪುತ್ತದೆ" ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕೃಷಿಕ ಸಮಾಜ ಜಿಲ್ಲಾ ಪ್ರತಿನಿಧಿ ಗಂಗಾಧರ ಎಲಿ ಮಾತನಾಡಿರೈತರು ರೂಢಿಗತವಾಗಿ ಬಿತ್ತನೆ ಮಾಡುವಾಗ ಡಿ.ಎ.ಪಿ ಮಳೆ ಬಂದಾಗ ಯೂರಿಯ ಬಳಸುತ್ತಿದ್ದು, ನ್ಯಾನೋ ಯೂರಿಯಾ ಹಾಗೂ ಲಘು ಪೋಷಕಾಂಶಗಳ ಬಳಕೆ ಬಗ್ಗೆ ರೈತರಲ್ಲಿ ಅರಿವು ಮೂಡಿಸುವುದು ಅವಶ್ಯಕವಾಗಿರುತ್ತದೆ ಎಂದರು.ಕಾರ್ಯಕ್ರಮದಲ್ಲಿ ಕೃಷಿಕ ಸಮಾಜ ಅಧ್ಯಕ್ಷರಾದ ಶ್ರೀ ಮಂಜುನಾಥ ಬೆನಕನಕೊಂಡ ,ಕೃಷಿಕ ಸಮಾಜದ ಸದಸ್ಯರಾದ ಶಂಕರಗೌಡ ಪಾಟೀಲ್, ಚಿಕ್ಕಪ್ಪ ಛತ್ರದ, ಇಫ್ಕೊ ಸಂಸ್ಥೆಯ ಪ್ರಶಾಂತ್, ಕೃಷಿ ಅಧಿಕಾರಿ ನಾಗರಾಜ ಬನ್ನಿಹಟ್ಟಿ, ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 