ವೃದ್ಧಾಶ್ರಮದ ವೃದ್ಧರಿಗೆ ಉಪಹಾರ ನೀಡುವ ಮೂಲಕ ಡಿ.ಕೆ ಶಿವಕುಮಾರ್ ಹುಟ್ಟುಹಬ್ಬ ಆಚರಣೆ

ವೃದ್ಧಾಶ್ರಮದ ವೃದ್ಧರಿಗೆ ಉಪಹಾರ ನೀಡುವ ಮೂಲಕ ಡಿ.ಕೆ ಶಿವಕುಮಾರ್ ಹುಟ್ಟುಹಬ್ಬ ಆಚರಣೆ D.K. Shivakumar's birthday celebrated by serving breakfast to the elderly at the old age home

  ಲಕ್ಷ್ಮೇಶ್ವರ 16 : "ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಹುಟ್ಟು ಹಬ್ಬವನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಪಟ್ಟಣದ ಶಾಂತಿಧಾಮ ವೃದ್ಧಾಶ್ರಮದಲ್ಲಿಇರುವ ವೃದ್ಧರಿಗೆ ಬೆಳಗಿನ ಉಪಹಾರ ಸಿಹಿ ಬಾಳೆಹಣ್ಣು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು ವೃದ್ಧರಿಗೆ ಬೆಳಗಿನ ಉಪಹಾರ ವಿತರಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಅಂಬರೀಶತೆಂಬದಮನಿ ಅವರು ನುಡಿದಂತೆ ನಡೆಯದ ರಾಜ್ಯ ಕಾಂಗ್ರೆಸ್ ಸರ್ಕಾರದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಎಲ್ಲ ಪಕ್ಷದ ಮುಖಂಡರೊಂದಿಗೆ ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಬೆಳಗಿನ ಉಪಹಾರ ಸಿಹಿ ವಿತರಣೆ ಮಾಡುವ ಮೂಲಕ ಆಚರಿಸಲಾಗಿದ್ದು ಆ ದೇವರು ಡಿಕೆ ಶಿವಕುಮಾರ್ ಅವರಿಗೆ ಹೆಚ್ಚಿನ ಆರೋಗ್ಯ ಕೊಟ್ಟು ಇನ್ನು ರಾಜ್ಯದ ಜನತೆಯ ಹೆಚ್ಚಿನ ಸೇವೆ ಮಾಡುವ ಭಾಗ್ಯ ಕರುಣಿಸಲಿ ಎಂದರು  ಈ ಸಮಯದಲ್ಲಿ ನಗರ ಘಟಕದ ಕಾರ್ಯದರ್ಶಿ ಸಂತೋಷಿ ತೇಲಿ ಶರಣ ಗೋಡಿ ಮೋಹನ್ ನಂದೆಣ್ಣವರ ಯಲ್ಲಪ್ಪ ಹಂಜಿಗಿ ಪ್ರಶಾಂತ್ ಬಳ್ಳಾರಿ ಶಿವಾನಂದ ಲಿಂಗಶೆಟ್ಟಿ ಮುತ್ತಣ್ಣ ಶರಶೂರಿ ಶಾಂತಪ್ಪ ಗುಡಿಗೇರಿ ಹನುಮಂತಪ್ಪ ಶರಶೂರಿ ಸೇರಿದಂತೆ ಇನ್ನೂ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಯುವಕರು ಹಾಗೂ ಡಿಕೆ ಶಿವಕುಮಾರ ಅವರ ಅಭಿಮಾನಿಗಳು ಇದ್ದರು