ಜಪಾನ್ ನಲ್ಲಿ ಹಗಿಬಿಸ್ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 39 ಕ್ಕೆ ಏರಿಕೆ

 ಟೋಕಿಯೋ, ಅ 14:      ಜಪಾನಿನಲ್ಲಿ ಹಗಿಬಿಸ್ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 39 ಕ್ಕೆ ಏರಿಕೆಯಾಗಿದೆ.   ಚಂಡಮಾರುತಕ್ಕೆ 189 ಜನರು ಗಾಯಗೊಂಡಿದ್ದು 17 ಮಂದಿ ಕಣ್ಮರೆಯಾಗಿದ್ದಾರೆ.   ಸ್ಥಳಾಂತರಗೊಳ್ಳುವಂತೆ ಜಪಾನಿನ ನಾಗರಿಕರಿಗೆ ಅಲ್ಲಿನ ಆಡಳಿತ ಸೂಚಿಸಿದೆ. 4,300 ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡೆತಗೊಂಡಿದೆ. ಅನೇಕ ನದಿಗಳು ಉಕ್ಕಿಹರಿದಿದ್ದು ಗ್ರಾಮೀಣ ಭಾಗಗಳಲ್ಲಿ ಭೂಕುಸಿತ ತೀವ್ರವಾಗಿ ಬಾಧಿಸಿದೆ.   ಅಲ್ಲದೇ ಅನೇಕ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ. ರೈಲು ಮತ್ತು ರಸ್ತೆ ಸಂಚಾರ ಕೂಡ ಸ್ತಬ್ಧವಾಗಿದೆ.