ಸಾಸುವೆ ಕಾಳು ಗಣಪತಿ ವೇದಿಕೆಯಲ್ಲಿ ಸಾಂಸ್ಕೃತಿಕ ವೈಭವ - 39 ಕಲಾ ತಂಡಗಳಿಂದ ಪ್ರದರ್ಶನ

ಸಾಸುವೆ ಕಾಳು ಗಣಪತಿ ವೇದಿಕೆಯಲ್ಲಿ ಸಾಂಸ್ಕೃತಿಕ ವೈಭವ - 39 ಕಲಾ ತಂಡಗಳಿಂದ ಪ್ರದರ್ಶನ  Cultural splendor at Sasuve Kalu Ganapati Vedike - Performances by 39 art groups

ವಿಜಯನಗರ 15: ವಿಶ್ವವಿಖ್ಯಾತ ಹಂಪಿಯ ಸಾಸುವೆ ಕಾಳು ಗಣಪತಿ ವೇದಿಕೆಯಲ್ಲಿ ವಿಜಯನಗರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.  

ಕಾರ್ಯಕ್ರಮಕ್ಕೆ ಹರ​‍್ಪನಹಳ್ಳಿ ತಹಶೀಲ್ದಾರ ಗೀರೀಶ್ ಬಾಬು ಅವರು ಜ್ಯೋತಿ ಬೆಳಗುವ ಮುಖಾಂತರ  ಚಾಲನೆ ನೀಡಿದರು.  

ಈ ಬಾರಿಯ ವೇದಿಕೆಯಲ್ಲಿ ಒಟ್ಟು 39 ಕಲಾ ಕಾರ್ಯಕ್ರಮಗಳನ್ನು ಏರಿ​‍್ಡಸಲಾಗಿತ್ತು. ನೆರೆದಿದ್ದ ಪ್ರೇಕ್ಷಕರಿಗೆ ಕಲೆಯ ರಸದೌತಣವನ್ನು ಉಣಬಡಿಸಿದ ಪ್ರಮುಖ ಕಾರ್ಯಕ್ರಮಗಳೆಂದರೆ, ವಚನ ಗಾಯನ, ರಂಗಗೀತೆಗಳ ಗಾಯನ, ಜಾನಪದ ಗೀತೆ, ಹಿಂದೂಸ್ತಾನ ಗಾಯನ, ಭರತನಾಟ್ಯ, ಸುಗಮ ಸಂಗೀತ, ತಬಲಾ ವಾದನ, ಶಾಸ್ತ್ರೀಯ ನೃತ್ಯ, ನೃತ್ಯ ರೂಪಕ, ಬಯಲಾಟ ಪದಗಳು, ತತ್ವಪದ ಗಾಯನ, ವಿಶು ಕಲೆ ಪ್ರದರ್ಶನ, ಮಿಮಿಕ್ರಿ, ದಾಸರ ಪದಗಳ ಗಾಯನ, ಸಾಮೂಹ ನೃತ್ಯ ರೂಪಕ, ವಚನ ಸಂಗೀತ, ಚೌಡ್ಕಿ ಪದಗಳ ಗಾಯನ, ಇನ್ನೂ ಹಲವಾರು ತಂಡಗಳಿಂದ ಬಗೆ ಬಗೆಯ ಕಾರ್ಯಕ್ರಮಗಳ ನಡೆದವು. ಇದೇ ವೇಳೆ ಎಲ್ಲಾ ಕಲಾವಿದರಿಗೆ ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.  

ಈ ಸಂದರ್ಭದಲ್ಲಿ ಪರಿಶಿಷ್ಟ ಪಂಗಡದ ಉಪ ನಿರ್ದೇಶಕ ರವಿಕುಮಾರ್ ಸೇರಿದಂತೆ ಹಲವು ಗಣ್ಯರು, ಸಾರ್ವಜನಿಕರು ಭಾಗವಹಿಸಿದ್ದರು. ಬಸವರಾಜ ಅಮಾತಿ ಮತ್ತು ಶ್ವೇತಾ ಅಂಗಡಿ ಅವರು ಕಾರ್ಯಕ್ರಮ ನಿರೂಪಿಸಿದರು.