ಯುವಕರಲ್ಲಿ ಶಿಸ್ತು, ಸಮಯಪ್ರಜ್ಞೆ ಬೆಳೆಸಿಕೊಳ್ಳಿ: ನಿವೃತ್ತ ಯೋಧ ಪ್ರಕಾಶ್ ಶೆಟ್ಟರ್

ಯುವಕರಲ್ಲಿ ಶಿಸ್ತು, ಸಮಯಪ್ರಜ್ಞೆ ಬೆಳೆಸಿಕೊಳ್ಳಿ: ನಿವೃತ್ತ ಯೋಧ ಪ್ರಕಾಶ್ ಶೆಟ್ಟರ್  Cultivate discipline and punctuality among the youth: Retired soldier Prakash Shettar


ರಾಣೆಬೆನ್ನೂರು 16 : ದೇಶದ ಯುವಜನತೆಯಲ್ಲಿ ದೇಶಾಭಿಮಾನ, ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಮೌಲ್ಯಗಳು ಕುಗ್ಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಯುವಕರಲ್ಲಿ ಶಿಸ್ತು ಮತ್ತು ಸಮಯಪ್ರಜ್ಞೆ ಬೆಳೆಸಿಕೊಳ್ಳುವುದು ಅಗತ್ಯ ಎಂದು ನಿವೃತ್ತ ಯೋಧ ಪ್ರಕಾಶ್ ಬಿ. ಶೆಟ್ಟರ್ ಹೇಳಿದರು. ನಗರದ ಪ್ರಿಯದರ್ಶಿನಿ ಚಿಕ್ಕ ಉದ್ಯಮದಾರರ ಸಂಘದ ವತಿಯಿಂದ ನಡೆದ 80ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಯುವಕರ ಪಾತ್ರ ಮಹತ್ವದ್ದಾಗಿದ್ದು, ಶಿಸ್ತು ಮತ್ತು ಸಮರೆ​‍್ಣಯೊಂದಿಗೆ ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಸಂಘದ ಅಧ್ಯಕ್ಷ ಮಿಥುನ್ ಟಿಕಾರೆ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಗಣ್ಯರು ಹಾಗೂ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.