ಕೊರೋನಾ ಸೋಂಕಿನ ಬಗ್ಗೆ ಜನಜಾಗೃತಿ ಕಾರ್ಯಕ್ರಮ; ಮಾಸ್ಕ್‌ಗಳ ವಿತರಣೆ

ಮಡಿಕೇರಿ, ಕೊಡ್ಲಿಪೇಟೆ ಏಪ್ರಿಲ್ 15, ಕೊಡ್ಲಿಪೇಟೆ  ವಿದ್ಯಾಸಂಸ್ಥೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಇಲ್ಲಿನ ಪದವಿಪೂರ್ವ ಕಾಲೇಜು ಆವರಣದಲ್ಲಿ ಬುಧವಾರ ಕೊರೋನಾ ಸೋಂಕಿನ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತುನೋವೆಲ್ ಕೊರೋನಾ ವ್ಯೆರಸ್  ಕುರಿತು ಕರಪತ್ರ ವಿತರಣೆ, ಕೊರೋನಾ ಗೀತೆಯನ್ನು ಹಾಡುವ  ಮೂಲಕ  ಸೋಂಕಿನ ದುಷ್ಪರಿಣಾಮ ಮತ್ತು ಅದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು. ಇದೇ ವೇಳೆ ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಗೂ ಹಿರಿಯ ವಕೀಲ ಎಚ್.ಎಸ್.  ಚಂದ್ರಮೌಳಿ ಅವರು ಕಳುಹಿಸಿದ ಉಚಿತ ಮಾಸ್ಕ್ ಗಳನ್ನು  ಸಾರ್ವಜನಿಕರಿಗೆ ವಿತರಿಸಲಾಯಿತು.ವಿದ್ಯಾಸಂಸ್ಥೆಯಿಂದ ಆರಂಭಗೊಂಡ ಜನಜಾಗೃತಿ ವಾಹನ  ಹ್ಯಾಂಡ್ ಪೋಸ್ಟ್ ಜಂಕ್ಷನ್  ಮೂಲಕ ದೊಡ್ಡಾಕುಂದ ಕೆರಗನಹಳ್ಳಿ, ಕಡೇಪೇಟೆ, ಕೊಡ್ಲಿಪೇಟೆಯ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಸಮಾಪ್ತಿಗೊಂಡಿತು.ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಮಾಸ್ಕ್‌ ಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದುದ್ದಕ್ಕೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷರಾದ ಎಸ್.ಎಸ್.ನಾಗರಾಜ್, ಉಪಾಧ್ಯಕ್ಷರಾದ ಶಂಬುಲಿಂಗಪ್ಪ, ಖಜಾಂಜಿ ಡಾ.ಉದಯ್ ಕುಮಾರ್, ಕಾರ್ಯದರ್ಶಿ ಪರಮೇಶ್, ನಿರ್ದೇಶಕರಾದ ಯತೀಶ್ .ಬಿ.ಕೆ, ಕೊಡ್ಲಿಪೇಟೆ ಹೋಬಳಿ ಉಪ ತಹಶಿಲ್ದಾರ್ ಪುರುಶೋತ್ತಮ್ , ಪೊಲೀಸ್ ಉಪಠಾಣೆ ಆರಕ್ಷಕ ನಿರೀಕ್ಷಕರಾದ ಶ್ರಿನಿವಾಸ್, ಹೆಡ್ ಕಾನ್ಸ್ ಟೇಬಲ್ ಡಿಂಪಲ್ , ಪದವಿ ಕಾಲೇಜಿನ  ಪ್ರಾಂಶುಪಾಲರಾದ ನಿರಂಜನ್. ಪದವಿಪೂರ್ವ ಕಾಲೇಜಿನ  ಜಗದೀಶ್ ಬಾಬು, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಅಬ್ದುಲ್ ರಬ್ಬ್, ಶಿಕ್ಷಕರಾದ ಅಭಿಲಾಷ್, ಯು‌.ಡಿ.ಮಂಜುನಾಥ್, ಸಿಬ್ಬಂದಿ ಗಳಾದ ಶಾಂತಕುಮಾರ್, ಮಂಜೇಗೌಡ, ಪ್ರಮುಖರಾದ ಹನೀಪ್ ಬ್ಯಾಡಗೊಟ್ಟ ಮತ್ತಿತರ ಗಣ್ಯರು ಹಾಜರಿದ್ದರು.