ವರ್ಷಪೂರ್ತಿ ಕೆಲಸ ನೀಡುವಂತೆ ಬೆಳೆ ಸಮೀಕ್ಷೆದಾರರ ಮನವಿ
Crop surveyors appeal for year-round employment
ವಿಜಯಪುರ ಸೆ.1: ಬೆಳೆ ಸಮೀಕ್ಷೆದಾರರಿಗೆ ವರ್ಷಪೂರ್ತಿ ಕೆಲಸ ನೀಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ರಾಜ್ಯ ಘಟಕದ ವತಿಯಿಂದ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ಆ.24ರಂದು ಬೆಂಗಳೂರಿನಲ್ಲಿ ಕೃಷಿ ಸಚಿವರನ್ನು ಭೇಟಿಯಾದ ಸಂಘದ ಪದಾಧಿಕಾರಿಗಳು, ಕಳೆದ 7ಹಿ8 ವರ್ಷಗಳಿಂದ ಸೀಮಿತ ಅವಧಿಗೆ ಮಾತ್ರ ಬೆಳೆ ಸಮೀಕ್ಷೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದಲ್ಲಿ ಸುಮಾರು 23,720 ಮಂದಿ ಈ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಸಂಘದ ಸದಸ್ಯರು ವಿದ್ಯಾವಂತ ಯುವಕರಾಗಿದ್ದು, ಅಗತ್ಯ ತರಬೇತಿ ಪಡೆದಿರುವುದರಿಂದ ಕೃಷಿ ಇಲಾಖೆಯಡಿ ಯಾವುದೇ ಕೆಲಸವನ್ನು ವರ್ಷಪೂರ್ತಿ ನೀಡಿದರೆ ಜವಾಬ್ದಾರಿಯಿಂದ ನಿರ್ವಹಿಸಲು ಸಿದ್ಧರಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸಂಘದ ರಾಜ್ಯ ಅಧ್ಯಕ್ಷ ಭೀಮಪ್ಪ ಲಕ್ಷ್ಮಣ ತಳವಾರ ಮಾತನಾಡಿ, ಬೆಳೆ ಸಮೀಕ್ಷೆದಾರರಿಗೆ ವರ್ಷಪೂರ್ತಿ ಉದ್ಯೋಗ ಒದಗಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮನವಿಗೆ ಸ್ಪಂದಿಸಿದ ಕೃಷಿ ಸಚಿವರು, ಈ ಕುರಿತು ಸಚಿವ ಸಂಪುಟದೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕರು ಹಾಗೂ ರಾಜ್ಯ ಗೌರವಾಧ್ಯಕ್ಷ ನರಸಪ್ಪ ನಾವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಪ್ರಬುದ್ಧಕರ, ರಾಜ್ಯ ಸಹ ಸಂಘಟನಾ ಕಾರ್ಯದರ್ಶಿಗಳಾದ ದೇವರಾಜ ಹಿರೇಹಡಗಲಿ, ಮೈಬುಬ ಖೋಜಗಿರ, ಪೀರಸಾಬ್ ಖೋಜಗಿರ, ಅರುಣ್ ತಳವಾರ, ಚಂದನ ಕೋಳಿ, ವಿಠ್ಠಲ ವಾಲಿಕಾರ, ಸಂದೀಪ್ ಸಿಂಗೆ, ದಾವಲಮಲಿಕ ಮೊಕಾಶಿ, ಪರಶುರಾಮ ಕಟಕದೊಂಡ, ಚಂದು ಬನಟ್ಟಿ, ದಾದಾಸಾಹೇಬ್ ಶಿಂಧೆ, ಸದಾಶಿವ ಚಲವಾದಿ, ಸಾಗರ್ ಕಿರಣಗಿ, ಕೆ. ನಾಗರಾಜ, ಟಿ. ಮಹೇಂದ್ರ, ಪಿ. ನಾಗರಾಜ ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 