ಲೋಕದರ್ಶನ ವರದಿ
ಬ್ಯಾಡಗಿ08:ಮೋಟೆಬೆನ್ನೂರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ದ್ರೋಣ ಕ್ಯಾಮರಾ ಮೂಲಕ ಮಾನವರಹಿತ ಆಧುನಿಕ ತಂತ್ರಜ್ಞಾನ ಬಳಸಿ ಬೆಳೆ ಸಮೀಕ್ಷೆ ನಡೆಸಲಾಯಿತು.
ಮೋಟೆಬೆನ್ನೂರ ಗ್ರಾಮದಲ್ಲಿ ಮೊದಲು ಪ್ರಾಯೋಗಿಕವಾಗಿ ಬೆಳೆ ಪರಿಸ್ಥಿತಿ ಬೆಳೆ ಸಮೀಕ್ಷೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮೆಕ್ಕೆಜೋಳ, ಹತ್ತಿ ಮುಂತಾದ ಬೆಳೆಗಳ ಬೆಳೆ ಸಮೀಕ್ಷೆ ನಡೆಸಿ ಫೋಟೋ ತೆಗೆದು ದಾಖಲಿಸಿಕೊಳ್ಳಲಾಯಿತು.
ಸಿಬ್ಬಂದಿ ಹೊರೆ ಇಳಿಕೆ: ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿದರ್ೇಶಕರಾದ ಎನ್.ಇ.ಅಮೃತೇಶ್ವ ಮಾತನಾಡಿ, ಇಲ್ಲಿಯರೆಗೂ ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಪಂಚಾಯತ್ರಾಜ್ ಇಲಾಖೆಯ ಸಿಬ್ಬಂದಿಗಳನ್ನು ಬಳಸಿಕೊಂಡು ಬೆಳೆ ಸಮೀಕ್ಷೆಯನ್ನು ಮೊಬೈಲ್ ಯಾಪ್ ಬಳಸಿ ಆಯಾಗ್ರಾಮದ ಪ್ರತಿಯೊಂದು ಸವರ್ೆ ನಂಬರಗೂ ತೆರಳಿ ಫೋಟೊ ದಾಖಲಿಸುವುದರ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗುತ್ತಿತ್ತು. ಇದು ಸಮಯವನ್ನು ಹೆಚ್ಚು ತೆಗೆದುಕೊಳ್ಳುತ್ತಿತ್ತಲ್ಲದೇ ಅನೇಕ ನ್ಯೂನ್ಯತೆಗಳು ಕಂಡು ಬಂದು ನಿಖರತೆ ಕಷ್ಟಕರವಾಗುತ್ತಿತ್ತು. ಆದರೆ ಪ್ರಸ್ತುತ ಡ್ರೋನ್ನ್ನು ಬಳಸಿ ಬೆಳೆ ಸಮೀಕ್ಷೆ ನಡೆಸುವುದರಿಂದ ಗ್ರಾಮವಾರು, ಬೆಳೆವಾರು, ಸವರ್ೆ ನಂಬರವಾರು ಅತೀ ಸುಲಭವಾಗಿ ಬೆಳೆ ಮಾಹಿತಿ ಪಡೆಯಬಹುದಾಗಿದೆ.ಬೆಳೆಯ ವಿಧ, ಬೆಳೆಯ ಹಂತ ಹಾಗೂ ಬೆಳೆಯ ಪರಿಸ್ಥಿತಿ ಕುರಿತು ನಿಖರವಾದ ಮಾಹಿತಿ ಫೋಟೋ ದಾಖಲೀಕರಣ ಮತ್ತು ಆಧುನಿಕ ತಂತ್ರಜ್ಞಾನದಿಂದ ಅತಿಕಡಿಮೆ ಸಮಯದಲ್ಲಿ ಕ್ಷಿಪ್ರಗತಿಯಲ್ಲಿ ಹಾಗೂ ನಿಖರವಾಗಿ ಬೆಳೆ ಸಮೀಕ್ಷೆ ನಡೆಸಬಹುದಾಗಿದೆ ಎಂದರು.
ಈ ಸಮಯದಲ್ಲಿ ಕೃಷಿ ಅಧಿಕಾರಿಗಳಾದ ಆರ್. ಮಂಜುನಾಥ, ಹೆಚ್.ಬಿ.ಗೌಡಪ್ಪಳವರ, ಸಿಬ್ಬಂದಿಯವರಾದ ಚಂದ್ರಶೇಖರ ಹಾಗೂ ಸುರೇಶ ನಾಯ್ಕ, ರೈತ ಮುಖಂಡ ಮಲ್ಲಿಕಾಜರ್ುನ ಬಳ್ಳಾರಿ, ವಿಜಯಕುಮಾರ ಬಳ್ಳಾರಿ, ಗುಡ್ಡಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.