ದಾಂಡೇಲಿಯ ಕಾಳಿನದಿಯಲ್ಲಿ ಮೊಸಳೆ: ಆತಂಕದಲ್ಲಿ ಜನರು
Crocodile in Dandeli's Kali River: People in panic
ಲೋಕದರ್ಶನ ವರದಿ
ದಾಂಡೇಲಿ 14 : ದಾಂಡೇಲಿಯ ಲೋಕೋಪಯೋಗಿ ಪ್ರವಾಸಿ ಮಂದಿರದ ಬಳಿ ಕಾಳಿನದಿಯ ದಂಡೆಯ ಪೊದೆಯಲ್ಲಿ ಮೊಸಳೆಯೊಂದು 40 ಮೊಟ್ಟೆಗಳನ್ನಿಟ್ಟು ಮರಿ ಮಾಡಿ ಪೋಶಿಸುತ್ತಿರುವ ಘಟನೆ ಜರುಗಿದೆ. ಇಲ್ಲಿಯ ಕಾಳಿನದಿಯಲ್ಲಿ ಸಾಕಷ್ಟು ಮೊಸಳೆಗಳಿದ್ದು ಅವು ಈಗಾಗಲೆ ಐವರನ್ನು ಬಲಿ ಪಡೆದಿದೆ. ಹಲವರನ್ನು ಗಾಯಗೊಳಿಸಿದೆ.
ಊರಗಲ್ಲಿಗಳಲ್ಲಿ ಕೂಡಾ ಮೊಸಳೆ ಆಗಾಗ ಪ್ರತ್ಯಕ್ಷವಾಗಿ ಜನರನ್ನು ಆತಂಕಕ್ಕಿಡು ಮಾಡಿದೆ. ಒಂದು ಮೊಸಳೆ 40 ಮರಿಗಳನ್ನು ಮಾಡಿ ಮರಿಗಳನ್ನು ರಕ್ಷಣೆ ಮಾಡಿ ಕಾಯುತ್ತಿದೆ. ಇದೇ ರೀತಿ ಮೊಸಳೆಗಳು ಮೊಟ್ಟೆ ಇಟ್ಟು ಮರಿ ಮಾಡಿದರೆ ಕಾಳಿನದಿ ಎಲ್ಲ ಮೊಸಳೆಗಳಿಂದ ತುಂಬಿ ಜನವಸತಿ ಪ್ರದೇಶದತ್ತ ಸಂಚರಿಸತೊಡಗಿದೆ. ಅವುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ವೃದ್ದಿಸಲಿದೆ.
ದಾಂಡೇಲಿಯ ಕಾಳಿನದಿಯಲ್ಲಿ ಅಳಿವಿನಂಚಿನಲ್ಲಿರುವ ಮಾರ್ಷ ಮಗ್ಗರ್ ಜಾತಿಯ ಮೊಸಳೆಗಳಿವೆ. ಅವುಗಳ ವಾಸಸ್ಥಾನವನ್ನು ಅಭಿವೃದ್ದಿಯ ಹೆಸರಿನಲ್ಲಿ ದಂಡೆಗುಂಟ ನಿರ್ಮಾಣ ಕೆಲಸಗಳನ್ನು ಮಾಡುತ್ತಿರುವದರಿಂದ ಮೊಸಳೆಗಳು ಕಾಳಿ ನದಿಯ ಜನವಸತಿ ಪ್ರದೇಶದ ದಂಡೆಗಳಲ್ಲಿ ಸುರಕ್ಷಿತ ಸ್ಥಳವನ್ನರಸಿ ಮೊಟ್ಟೆ ಇಟ್ಟು ಮರಿ ಮಾಡುತ್ತಿದೆ. ಬರುವ ದಿನಗಳಲ್ಲಿ ಮೊಸಳೆ ಮರಿಗಳ ಸಂಖ್ಯೆ ಎರಿದಲ್ಲಿ ಜನವಸತಿ ಪ್ರದೇಶಗಳಲ್ಲಿ ಮೊಸಳೆ ಮರಿಗಳ ಉಪದ್ರವ ತಪ್ಪಿದ್ದಲ್ಲ. ಜನ ಆತಂಕದಲ್ಲೇ ಬದುಕಬೇಕಿದ್ದು ಸಂಭಧಿಸಿದ ಇಲಾಖೆ ಈ ಕುರಿತು ಚಿಂತನೆ ಮಾಡಬೇಕಿದೆ.
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ 