ಶತಮಾನೋತ್ಸವದ ಹೊಸ್ತಿಲಲ್ಲಿ ಶ್ರೀ ಉಮಾ ವಿದ್ಯಾಲಯಕ್ಕೆ ಸಂಕಷ್ಟ

ಶತಮಾನೋತ್ಸವದ ಹೊಸ್ತಿಲಲ್ಲಿ ಶ್ರೀ ಉಮಾ ವಿದ್ಯಾಲಯಕ್ಕೆ ಸಂಕಷ್ಟ  Crisis for Sri Uma Vidyalaya on the threshold of its centenary

ಲಕ್ಷ್ಮೇಶ್ವರ  30: ಪಟ್ಟಣದ ಇತಿಹಾಸದಲ್ಲಿ ತನ್ನದೇ ಆದ ಅಚ್ಚಳಿಯದ ಶೈಕ್ಷಣಿಕ ಕೊಡುಗೆ ನೀಡಿರುವ ಶ್ರೀ ಉಮಾ ವಿದ್ಯಾಲಯ ಪುರಸಭೆಯ ಪ್ರೌಢಶಾಲೆ, ಸೆಪ್ಟೆಂಬರ್ 1ರಂದು ನೂರು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಅಳಿವು-ಉಳಿವಿನ ಹೋರಾಟ ನಡೆಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.  

ನೂರು ವರ್ಷಗಳ ಕಾಲ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದ ಈ ವಿದ್ಯಾಸಂಸ್ಥೆ ಇಂದು ಅನುದಾನದ ಕೊರತೆ, ಶಿಕ್ಷಕರ ನೇಮಕಾತಿಯ ಅಡಚಣೆ ಹಾಗೂ ಆಡಳಿತಾತ್ಮಕ ನಿರ್ಲಕ್ಷ್ಯದಿಂದ ಸಂಕಷ್ಟಕ್ಕೆ ಸಿಲುಕಿದೆ. ಶತಮಾನೋತ್ಸವದ ಸಂಭ್ರಮದ ಕಳೆ ಶಾಲೆಯಲ್ಲಿ ಕಾಣಿಸದಿರುವುದು ಶಿಕ್ಷಣ ಪ್ರೇಮಿಗಳು ಹಾಗೂ ಹಳೆ ವಿದ್ಯಾರ್ಥಿಗಳಿಗೆ ನೋವು ತಂದಿದೆ.  

ಪ್ರಸ್ತುತ ಕೇವಲ 4 ಕಾಯಂ ಹಾಗೂ 3 ಅರೆಕಾಲಿಕ ಶಿಕ್ಷಕರ ನೆರವಿನಿಂದ 224 ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ಶಾಲೆ ನಿರ್ವಹಿಸುತ್ತಿದೆ. ಪಟ್ಟಣದ ಇತರ ಶಾಲೆಗಳು ಕಡಿಮೆ ಅವಧಿಯ ಸಂಭ್ರಮಗಳನ್ನೂ ಅದ್ಧೂರಿಯಾಗಿ ಆಚರಿಸುತ್ತಿರುವಾಗ, ನೂರು ವರ್ಷಗಳ ಭವ್ಯ ಪರಂಪರೆ ಹೊಂದಿರುವ ಈ ವಿದ್ಯಾದೇವಸ್ಥಾನಕ್ಕೆ ಸೂಕ್ತ ಗಮನ ದೊರೆಯದಿರುವುದು ದುರಂತವೇ ಸರಿ.  

ಶಾಲೆಗೆ ಮರುಜೀವ ನೀಡಲು ತುರ್ತು ಕ್ರಮ ಅಗತ್ಯ ಹಳೆ ವಿದ್ಯಾರ್ಥಿಗಳ ಒಕ್ಕೂಟ: ದೇಶ-ವಿದೇಶಗಳಲ್ಲಿ ನೆಲೆಸಿರುವ ಹಳೆ ವಿದ್ಯಾರ್ಥಿಗಳು ಒಂದಾಗಿ ಶಾಲೆಯ ಪುನರುಜ್ಜೀವನಕ್ಕೆ ಆರ್ಥಿಕ ಹಾಗೂ ನೈತಿಕ ಬೆಂಬಲ ನೀಡಬೇಕು.  ಸಮುದಾಯದ ಸಹಭಾಗಿತ್ವ: ದಾನಿಗಳು, ಶಿಕ್ಷಣ ಪ್ರೇಮಿಗಳು ಹಾಗೂ ಸಾರ್ವಜನಿಕರು ಮೂಲಸೌಕಯ