ವ್ಯಕ್ತಿಯೊರ್ವನಿಗೆ ಚಾಕು ಇರಿದು, ಮೈಮೇಲೆ ಪೆಟ್ರೋಲ್ ಸುರಿದು ಕೊಲೆ
Crime News-Jamakhandi
ಲೋಕದರ್ಶನ ವರದಿ
ಜಮಖಂಡಿ 21: ತಾಲ್ಲೂಕಿನ ಕನ್ನೊಳಿ ಗ್ರಾಮದ ಬಸ್ ನಿಲ್ದಾಣದ ನಡುರಸ್ತೆಯಲ್ಲಿ ವ್ಯಕ್ತಿಯೊರ್ವನಿಗೆ ಚಾಕುವಿನಿಂದ ಇರಿದು. ಮೈಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ.
ಕೊಲೆಯಾದ ವ್ಯಕ್ತಿ ಸೋಮಲಿಂಗ ಪಡಸಲಗಿ (36) ಸ್ವೀಪ್ಟ್ ಡಿಜೆರ್ ಹೊಸ ಕಾರು ತೆಗೆದುಕೊಂಡು ಪೂಜೆ ಮುಗಿಸಿ. ಮರಳಿ ಕನ್ನೋಳಿ ಗ್ರಾಮದ ಬಸ್ ನಿಲ್ದಾಣದ ನಡುರಸ್ತೆಯಲ್ಲಿ ನಿಂತುಕೊಂಡ ಸಮಯದಲ್ಲಿ ಆರೋಪಿಗಳಾದ ಸದಾಶಿವ ಪಡಸಲಗಿ ಹಾಗೂ ರವಿ ಪಾಟೀಲ ಮತ್ತು ನಾವಿ ಎಂಬ ಮೂವರು ಸೇರಿಕೊಂಡು ಸೋಮಲಿಂಗ ಪಡಸಲಗಿ ಆತನಿಗೆ ಚಾಕುವಿನಿಂದ ಇರಿದು. ನಂತರ ಪೆಟ್ರೋಲ್ ಮೈಮೇಲೆ ಸುರಿದು ಹಾಗೂ ಸ್ವೀಪ್ ಡಿಜೇರ್ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಯನ್ನು ಮಾಡಲಾಗಿದೆ.
ಕೊಲೆಯಾದ ವ್ಯಕ್ತಿಯ ಸೋಮಲಿಂಗ ಪಡಸಲಗಿ ಇತನು ಕೊಲೆಗೈದ ಆರೋಪಿ ಹೆಂಡತಿಯ ಜೊತೆ ಅನೈತಿಕ ಸಂಬಂಧ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಹಳೆಯ ವೈಷಮ್ಯ ಕಾರಣದಿಂದ ಕೊಲೆ ನಡೆದಿದ್ದು. ಕೊಲೆ ನಡೆದ ಸ್ಥಳದಲ್ಲಿಯೇ ಮೂವರು ಆರೋಪಗಳನ್ನು ವಶಕ್ಕೆ ಪಡೆಯಲಾಗಿದ್ದು. ಘಟನಾ ಸ್ಥಳಕ್ಕೆ ಬಾಗಲಕೋಟ ಜಿಲ್ಲಾ ಎಸ್.ಪಿ.ಸಿದ್ದಾರ್ಥ ಗೋಯಲ್ ಭೇಟಿ ನೀಡಿ ಮಾಹಿತಿಯನ್ನು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿಎಸ್‌ಪಿ. ಸೈಯದ್ ರೋಷನ್ ಜಮೀರ, ಸಿಪಿಐ ಮಲ್ಲಪ್ಪ ಮಡ್ಡಿ, ಸಾವಳಗಿ ಪಿಎಸ್‌ಐ. ಅಪ್ಪಣ್ಣ ಐಗಳಿ, ಜಮಖಂಡಿ ಪಿಎಸ್‌ಐ ಅನೀಲ ಕುಂಬಾರ ತಂಡ ಸೇರಿದಂತೆ ತನಿಖೆಯನ್ನು ಮುಂದುವರಿಸಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 