ವಿಮರ್ಶೆ ಪ್ರಜ್ಞೆಯಿಂದ ಸಾಹಿತ್ಯದ ಸೃಷ್ಠಿ: ಡಾ.ರಂಗನಾಥ
Creation of literature with a sense of criticism: Dr. Ranganath
ವಿಮರ್ಶೆ ಪ್ರಜ್ಞೆಯಿಂದ ಸಾಹಿತ್ಯದ ಸೃಷ್ಠಿ: ಡಾ.ರಂಗನಾಥ
ಬಾಗಲಕೋಟ 25: ವಿಮರ್ಶೆ ಪ್ರಜ್ಞೆ ಮತ್ತು ಬಂಡಾಯ ಮನೋಭಾವದಿಂದ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಆಯಾಮಗಳನ್ನು ತರಲು ಸಾಧ್ಯ. ಇತ್ತೀಚಿನ ಬರಹಗಾರರಲ್ಲಿ ಪ್ರಶ್ನಾತೀತ ಪ್ರಜ್ಞೆ ಕ್ಷೀಣಿಸುತ್ತಿರುವುದು ಕಳವಳಕಾರಿ ಸಂಗತಿ ಎಂದು ಸಾಹಿತಿ ಡಾ.ರಂಗನಾಥ ಕಂಟನಕುಂಟೆ ಹೇಳಿದರು. ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸಹಯೋಗ ದಲ್ಲಿ ಹಮ್ಮಿಕೊಂಡಿದ್ದ ಯುವ ಸಾಹಿತಿ ಸಾಹಿತ್ಯಾನುಸಂಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಕ್ಷಿಣ ಕರ್ನಾಟಕದಲ್ಲಿ ಬರಹಗಾರರು ಬೆಳೆಯುತ್ತಿದ್ದು ಉತ್ತರ ಕರ್ನಾಟಕದಲ್ಲಿ ಬರಹಗಾರರ ಸಂಖ್ಯೆ ಹೇರಳವಾಗಿದೆ. ಬುಜಬಲ, ಹಣಬಲಕ್ಕಿಂತ ಸಾಹಿತ್ಯದ ಶಕ್ತಿ ದೊಡ್ಡದು.ಅಧಿಕಾರ, ಸಂಪತ್ತಿನ ಹಿಂದೆ ಜಗತ್ತು ಓಡುತ್ತದೆಯಾದರೂ ಲೋಕಕ್ಕೆ ಬೇಡವಾದ ವಿಷಯವನ್ನು ಹುಡುಕುವ ಸಾಮರ್ಥ್ಯ ಸಾಹಿತಿಗಳಿಗೆ ಮತ್ತು ಸಾಹಿತ್ಯಕ್ಕಿದೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾದ ಆಕ್ರಮಣದಿಂದ ಓದಿನ ಆಸಕ್ತಿ ಕಳೆಗುಂದುತ್ತಿದೆ. ಪರೀಕ್ಷಾ ದೃಷ್ಟಿಯಿಂದ ಮಾತ್ರ ವಿದ್ಯಾರ್ಥಿಗಳು ಓದುತ್ತಿದ್ದು ವ್ಯಕ್ತಿತ್ವ ವಿಕಾಸಕ್ಕಾಗಿ, ದೇಶದ ಅಭಿವೃದ್ಧಿಯ ಅಸ್ತ್ರವಾಗಿ ಓದು ಬಳಕೆಯಾಗದಿರುವುದನ್ನು ಆತ್ಮಾವಲೋಕನ ಮಾಡಿಕೊಳ್ಳಿಬೇಕು ಎಂದರು.
ನೈತಿಕ ಪ್ರಜ್ಞೆ, ವೈಚಾರಿಕತೆ, ಸಂವಿಧಾನಿಕತೆಗೆ ವಿರುದ್ಧವಾಗಿ ಸಾಗುವ ಮನಸ್ಸುಗಳಿಂದ ವಿಮರ್ಶ ಪ್ತಜ್ಞೆ ಮತ್ತು ಸಾಹಿತ್ಯದ ಆಸಕ್ತಿ ಸಾಯುತ್ತದೆ. ಜನರನ್ನು ವಿಚಾರವಂತರನ್ನಾಗಿಸಲು ಜನರ ನಂಬಿಕೆಗಳನ್ನು ಪ್ರಶ್ನಿಸುವಂತಹ ಕೆಲಸವನ್ನು ಸಾಹಿತಿಗಳು ಮಾಡಬೇಕು. ಸಮಾಜಿಕ ಸವಾಲುಗಳನ್ನು ಸಹಜ ಪ್ರಕ್ರಿಯೆ ಎಂದು ಒಪ್ಪದರೆ ನೈತಿಕ ಪ್ರಜ್ಞೆಯನ್ನು ಕಳೆದುಕೊಂಡಂತೆ. ಇದರಿಂದ ಹೊಸ ಕಥೆ, ಸಾಹಿತ್ಯ ಲೇಖನಗಳು ಹುಟ್ಟಲು ಸಾಧ್ಯವಾಗದು. ಬಂಡಾಯ ಮನೋಭಾವ ಕಡಿಮೆಯಾಗಿರುವುದರಿಂರ ಹಲವಾರು ರಾಜ್ಯಗಳಲ್ಲಿ ಸಾಹಿತಿಗಳು ಮರೆಯಾಗುತ್ತಿದ್ದಾರೆ. ಶಿಕ್ಷಣ, ರಾಜಕೀಯ, ಸಮಾಜ, ಕುಟುಂಬದ ವ್ಯವಸ್ಥೆಯಲ್ಲಿ ವಿಮರ್ಶೆ ಪ್ರಜ್ಞೆಯನ್ನು ರೂಪಿಸಿಕೊಳ್ಳಬೇಕು ಅಂದಾಗ ಮಾತ್ರ ಹೊಸದನ್ನು ಸೃಷ್ಟಿಸಲು ಸಾಧ್ಯ. ಇದು ಕೃತಕ ಬುದ್ಧಿಮತ್ತೆಯ ಕಾಲವಾಗಿದೆ ಎಲ್ಲವನ್ನು ತಂತ್ರಜ್ಞಾನವೇ ಆವರಿಸುತ್ತಿದ್ದು ಇದರಲ್ಲಿ ಸಾಹಿತಿಗಳು, ಓದುಗರನ್ನು ಉಳಿಸಿಕೊಳ್ಳುದು ಹೇಗೆ ಎಂದು ಗಂಭೀರವಾಗಿ ಆಲೋಚಿಸಬೇಕು. ಲೇಖಕರಿಗೆ ಪ್ತಶಸ್ತಿಯಿಂದ ಅಲ್ಲ ಓದುಗರಿಂದ ಸಂತೃಪ್ತ ಭಾವ ಮೂಡುತ್ತದೆ. ಸಾಹಿತ್ಯವನ್ನು ಉಳಿಸಲು ಓದುವ ಮತ್ತು ಓದುಗರನ್ನು ಹೆಚ್ಚಿಸುವುದು ಕೆಲಸ ಮಾಡಬೇಕು. ಯುವ ತಲೆಮಾರಿನಲ್ಲಿ ಕಥೆಗಾರರು ಮತ್ತು ಕವಿಗಳ ಸಂಖ್ಯೆ ಹೆಚ್ಚುತ್ತಿದ್ದ ಅನಿಲ್ ಗುನ್ನಾಪುರ ರಚಿತ ಕಥಾಸಂಕಲನಗಳು ಬದುಕಿನ ನೈತಿಕತೆಯನ್ನು ಚಿಂತಿಸುವ ಮತ್ತು ಮನುಷ್ಯನ ಮನುಷ್ಯತ್ವವನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತವೆ ಎಂದರು.
ಕವಿಯತ್ರಿ ಮತ್ತು ರಂಗಭೂಮಿ ಕಲಾವಿದೆ ಜಯಲಕ್ಷ್ಮೀ ಪಾಟೀಲ್ ಮಾತನಾಡಿ ಓದು ಮತ್ತು ಸಾಹಿತ್ಯದ ರುಚಿ ರೂಡಿಸಿಕೊಂಡರೆ ಯುವ ಪ್ರತಿಭೆಗಳು ಬೆಳೆಯಲು ಸಾಧ್ಯ. ಕಥೆಗಾರ್ತಿ ಮಲ್ಲಮ್ಮ ಜೊಂಡಿ ರಚಿತ ದಿಡಗು ಕಥಾಸಂಕಲನ ಕುರಿತು ಮಾತನಾಡಿ ಪುರುಷ ಪ್ರಧಾನ ಶೋಷಣೆಯನ್ನು ಅಚ್ಚುಕಟ್ಟಾಗಿ ಈ ಪುಸ್ತಕ ಕಟ್ಟಿಕೊಟ್ಟಿದೆ. ಮದುವೆ, ಮಕ್ಕಳು, ಸಂಸಾರದ ಭಯಕೆಗಳು ಈಡೇರದ ಹುಡುಗಿಯೊಬ್ಬಳ ಜೀವನ ಕಥೆ ಮಹಿಳೆಯರ ಬದುಕಿಗೆ ಹಿಡಿದ ಕೈಗನ್ನಡಿಯಾಗಿದೆ. ಪುಸ್ತಕದಲ್ಲಿರುವ ಕವಿತ್ವ ಭಾಷೆಯು ಹಿತಮಿತವಾಗಿದ್ದು ಓದುಗರ ಭಾವನೆಯನ್ನು ತೆರೆದಿಡುತ್ತದೆ. ಮಹಿಳೆಯನ್ನು ಕಟ್ಟಿ ಆಳುವ ಪ್ರಯತ್ನ ಕಡಿಮೆಯಾಗಬೇಕು. ಬರವಣಿಗೆಯ ಕ್ಷೇತ್ರದಲ್ಲಿಯೂ ರಾಜಕೀಯವಿದ್ದು ಅದನ್ನು ಮೆಟ್ಟಿ ನಿಲ್ಲುವ ಕೆಲಸವನ್ನು ಬರಹಗಾರರು ಮಾಡಬೇಕು. ಮಹಿಳಾ ಶೋಷಣೆ ಲೈಂಗಿಕ ದೌರ್ಜನ್ಯದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರು ಅಂತಹ ಕ್ರೂರ ಪ್ರಕರಣಗಳು ಹೆಚ್ಚುತ್ತಿರುವುದು ಪುರುಷ ಕ್ರೌರ್ಯತೆಯನ್ನು ಎತ್ತಿ ತೋರಿಸುತ್ತಿವೆ ಎಂದರು. ಪ್ರಾಚಾರ್ಯರಾದ ಎಸ್.ಆರ್ ಮುಗನೂರಮಠ ಅಧ್ಯಕ್ಷೀಯವಾಗಿ ಮಾತನಾಡಿ ಕೃತಿಹಳು ಓದುಗರಿಗೆ ಮುಟ್ಟದಿದ್ದರೆ ಅದು ವ್ಯರ್ಥವಾಗುತ್ತದೆ. ಬರಹಗಾರರ ಅದೆಷ್ಟೋ ಪುಸ್ತಕಗಳ ಪರಿಚಯವನ್ನು ಬಸವೇಶ್ವರ ಕಲಾ ಮಹಾವಿದ್ಯಾಲಯ ಪರಿಚಯಿಸಿರುವುದು ಸಂತಸದ ಸಂಗತಿ. ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಶಕ್ತಿ ಭಾಷೆಗಿದ್ದು ಅದನ್ನು ತುಂಬವ ಕೆಲಸವನ್ನು ಬರಹಗಾರರು ಮಾಡಬೇಕು ಎಂದರು. ಕಥೆಗಾರರಾದ ಅನಿಲ್ ಗುನ್ನಾಪುರ, ಮಲ್ಲಮ್ಮ ಜೊಂಡಿ ಅಭಿಪ್ರಾಯ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು, ಬರಹಗಾರರು, ಯುವ ಸಾಹಿತಿಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 