ನಕಲಿ ಅಂಕಪಟ್ಟಿ ಸೃಷ್ಟಿಸಿ ನೌಕರಿ: ನಾಲ್ವರ ಬಂಧನ

ಧಾರವಾಡ 02: ನಕಲಿ ಅಂಕಪಟ್ಟಿ ಸೃಷ್ಟಿಸಿ ಕೆಪಿಟಿಸಿಎಲ್ನಲ್ಲಿ ನೌಕರಿ ಗಿಟ್ಟಿಸಿದ್ದ ವ್ಯಕ್ತಿ ಹಾಗೂ ಇದಕ್ಕೆ ಸಹಕರಿಸಿದ ಮೂವರು ಆರೋಪಿಗಳನ್ನು ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ಹಾದ್ರಿಹಳ್ಳಿ ಗ್ರಾಮದ ಸಿದ್ದಪ್ಪ ಹೊನ್ನಪ್ಪ ಬೆಳಕಿನಕೊಂಡ ಬಂಧಿತ ಆರೋಪಿ. ನವೆಂಬರ್ 27ರಂದು ಕೆಪಿಟಿಸಿಎಲ್ ಹುಬ್ಬಳ್ಳಿ ವಿಭಾಗದ ಕಾರ್ಯನಿರ್ವಾ ಹಕ ಅಭಿಯಂತರರು ನೀಡಿದ ದೂರಿನ ಹಿನ್ನಲೆಯಲ್ಲಿ ಪೊಲೀಸರು ತನಿಖೆ ನಡೆಸಿದಾಗ ಈತ 2017ನೇ ಸಾಲಿನಲ್ಲಿ ನಡೆದ ಜ್ಯೂನಿಯರ್ ಲೈನ್ಮನ್ ನೇಮಕಾತಿಯಲ್ಲಿ ಎಸ್ಸೆಸ್ಸೆಲ್ಸಿಯ ನಕಲಿ ಅಂಕಪಟ್ಟಿ ಸಲ್ಲಿಸಿ ಉದ್ಯೋಗ ಗಿಟ್ಟಿಸಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.

ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ 2008ನೇ ಸಾಲಿನಲ್ಲಿ ಹುಲ್ಲತ್ತಿ ಸರ್ಕಾ ರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.52ರಷ್ಟು ಅಂಕ ಪಡೆದಿರುವುದು ತಿಳಿದುಬಂದಿದೆ. ಅದೇ ಗ್ರಾಮದ ಶಿವಕುಮಾರ ಉಪ್ಪಾರ ಎಂಬಾತ ತನಗೆ ಪರಿಚಿತರಾದ ಜೇವರ್ಗಿ ಯ ಕರಣಪ್ಪಗೌಡ ಪೊಲೀಸಪಾಟೀಲ ಹಾಗೂ ಕಲಬುಗರ್ಿಯ ಶಿವಶರಣಪ್ಪ ಪಾಟೀಲ ಎಂಬುವವರಿದ್ದು, ಹೆಚ್ಚಿನ ಅಂಕ ಹಾಕಿಸಿ ನಕಲಿ ಅಂಕಪಟ್ಟಿ ತಯಾರಿಸಿಕೊಟ್ಟು ಕೆಪಿಟಿಸಿಎಲ್ನಲ್ಲಿ ಉದ್ಯೋಗ ಕೊಡಿಸುತ್ತಾರೆಂದು ಸಿದ್ದಪ್ಪನಿಗೆ ನಂಬಿಸಿ ಜೇವಗರ್ಿ ಹಾಗೂ ಕಲಬುರ್ಗಿ ಗೆ ಕರೆದುಕೊಂಡು ಹೋಗಿ ಆತನಿಂದ 3.80 ಲಕ್ಷ ರೂಪಾಯಿ ಪಡೆದು ಶೇ.94ರಷ್ಟು ಅಂಕಗಳುಳ್ಳ ನಕಲಿ ಅಂಕಪಟ್ಟಿ ತಯಾರಿಸಿಕೊಟ್ಟು ಕೆಪಿಟಿಸಿಎಲ್ನಲ್ಲಿ ನೌಕರಿ ಪಡೆಯಲು ನೆರವು ನೀಡಿದ್ದಾರೆ. ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

   ಎಸ್ಪಿ ಆರ್.ದಿಲೀಪ, ಉಪಪೊಲೀಸ್ ಆಯುಕ್ತ ಡಿ.ಎಲ್.ನಾಗೇಶ, ಸಹಾಯಕ ಪೊಲೀಸ್ ಆಯುಕ್ತ ಎಂ.ವಿ. ಮಲ್ಲಾಪುರ ಇವರ ಮಾರ್ಗದರ್ಶನದಲ್ಲಿ ಹಳೇಹುಬ್ಬಳ್ಳಿ ಠಾಣೆಯ ಪಿಎಸ್ಐ ಮಾರುತಿ ಗುಳ್ಳಾರಿ ಹಾಗೂ ಸಿಬ್ಬಂದಿ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.