ಮೊಳಕೆ ಒಡೆಯದ ಗೋವಿನ ಜೋಳ: ಪರಿಹಾರಕ್ಕೆ ಕೃಷಿ ನಿರ್ದೇಶಕರಿಗೆ ಮನವಿ
Cowpeas that do not sprout: Appeal to the Director of Agriculture for relief
ರಾಣೇಬೆನ್ನೂರು 26: ಕಳಪೆ ಬಿತ್ತನೆ ಬೀಜ ಪೂರೈಕೆ ಇದರಿಂದ ಸಾವಿರಾರು ರೈತರು ಮೊಳಕೆ ಒಡೆಯದೆ, ಕಂಗಾಲಾಗಿದ್ದಲ್ಲದೆ ಲಕ್ಷಾಂತರ ರೂಪಾಯಿಗಳ ನಷ್ಟವನ್ನು ಅನುಭವಿಸುವಂಥಾಗಿದೆ ಇದಕ್ಕೆ ಯಾರು ಹೊಣೆ? ಎಂದು ಬಲವಾಗಿ ಪ್ರಶ್ನಿಸಿರುವ ಅಖಿಲ ಕರ್ನಾಟಕ ರಾಜ್ಯ ರೈತ ಕಿಸಾನ್ ಜಾಗೃತಿ ಸಂಘದ ಅಧ್ಯಕ್ಷ ನಾಗರಾಜ ಕುದುರಿಹಾಳ ಅವರು, ಈ ಕೂಡಲೇ ಸೂಕ್ತ ಪರಿಹಾರ ಕೊಡಲು ತಾಲೂಕ ಆಡಳಿತ ಮತ್ತು ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಸಹಾಯಕ ಕೃಷಿ ನಿರ್ದೇಶಕರಾದ ಶಾಂತಮಣಿ ಜಿ.ಅವರಿಗೆ ತಮ್ಮ ಮನವಿ ಸಲ್ಲಿಸಿ ಒತ್ತಾಯಿಸಿದರು.
ತಾಲೂಕಿನಲ್ಲಿ ಕಳಪೆ ಗೋವಿನ ಜೋಳ ವಿತರಣೆಯಾಗಿದೆ ಇದು ಯಾರು ವಿತರಿಸುತ್ತಾರೆ ಯಾರು ಮಾರಾಟ ಮಾಡುತ್ತಾರೆ ಎನ್ನುವುದು ಕೃಷಿ ಇಲಾಖೆಗೆ ಗೊತ್ತಿಲ್ಲವೇ?. ಈಗಾಗಲೇ ಬೀಜಗಳು ಮೊಳಕೆ ಓಡೆದಿಲ್ಲ ಎನ್ನುವುದು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಹ ಗೊತ್ತಿದೆ. ಆದರೂ ಕೃಷಿ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲವೇಕೆ? ಎಂದು ಇಲಾಖೆ ಬಗ್ಗೆ, ಕಿಡಿ ಕಾರಿ ದ ನಾಗರಾಜ್ ಅವರು ಇಲಾಖೆಯ ಅಧಿಕಾರಿಗಳು ಕಣ್ಣೆಜಜಣ ಕುರುಡರಂತೆ ವರ್ತಿಸುವುದು ಸರಿಯಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ತಾವು, ತಮ್ಮ ತಾಲೂಕಿನ ಬಹಳಷ್ಟು ರೈತರು ಮೇ ತಿಂಗಳು ಕೊನೆಯ ವಾರದಲ್ಲಿ ಮೆಕ್ಕೆಜೋಳವನ್ನು ಖರೀದಿಸಿದ್ದಾರೆ.ಜೂನ್ ಮೊದಲ ವಾರದಲ್ಲಿ ಬೀಜವನ್ನು ಬಿತ್ತನೆ ಮಾಡಿದ್ದಾರೆ.
ಆದರೆ 15 ದಿವಸಗಳಾದರೂ ಮೊಳಕೆ ಓಡೆದಿಲ್ಲ ಇದರಿಂದ ರೈತರಿಗೆ ಲಕ್ಷಾಂತರ ರೊಷ್ಟು ನಷ್ಟವಾಗಿದೆ, ಇದರಿಂದ ಸಾಕಷ್ಟು ರೈತರು ಅಪಾರ ಹಾನಿ ಅನುಭವಿಸಿದ್ದಾರೆ ಕಳಪೆ ಬೀಜ ವಿತರಿಸಿದವರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು, ರೈತರಿಗೆ ಸೋಕ್ತ ಪರಿಹಾರ ಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಕೃಷಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆಗೆ ಮುಂದಾಗುವುದು ಅನಿವಾರ್ಯವಾಗುತ್ತದೆ ಎಂದು ಅವರು ಸಲ್ಲಿಸಿರುವ ಮನವಿ ಯಲ್ಲಿ ಎಚ್ಚರಿಸಿದ್ದಾರೆ. ಮನವಿ ಸಲ್ಲಿಕೆ ಮುಂಚೂಣಿಯಲಿ ಸಂಘಟನೆಯ ಉಪಾಧ್ಯಕ್ಷ ಪ್ರಕಾಶ್ ಕೊಂಬಳಿ, ಜಿಲ್ಲಾ ಕೋಶಾಧ್ಯಕ್ಷ ಹನುಮಂತಪ್ಪ ಮಕ್ರಿ, ರಟ್ಟಿಹಳ್ಳಿ ತಾಲೂಕ ಅಧ್ಯಕ್ಷ ಮಂಜುನಾಥ ಬಣಕಾರ್, ಸೇರಿದಂತೆ ತಾಲೂಕಿನ ವಿವಿಧ ಗ್ರಾಮ ಘಟಕಗಳ ಅಧ್ಯಕ್ಷರು ಮುಖಂಡರು, ರೈತರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 