ಪಕ್ಕಾ, ಕಚ್ಚಾ ಮನೆಗಳು, ಶೆಡ್‌ಗಳ ತೆರುವು: ನ್ಯಾಯಾಲಯ ಆದೇಶ

ಪಕ್ಕಾ, ಕಚ್ಚಾ ಮನೆಗಳು, ಶೆಡ್‌ಗಳ ತೆರುವು: ನ್ಯಾಯಾಲಯ ಆದೇಶ Court orders demolition of houses, sheds

ಸಿಂದಗಿ; ಮನೆ ತೆರವು ಕಾರ್ಯಾಚರಣೆ 

ಸಿಂದಗಿ: 84 ಕುಟುಂಭಗಳಿಗೆ ವಾಸಕ್ಕಾಗಿ ನಿವೇಶನ ಹಕ್ಕುಪತ್ರ ನೀಡಿದ ಪಟ್ಟಣದ ಪುರಸಭೆ ಸ.ನಂ. 842/2 ರಲ್ಲಿರುವ ಪಕ್ಕಾ, ಕಚ್ಚಾ ಮನೆಗಳು, ಶೆಡ್‌ಗಳನ್ನು ತೆರುವುಗೊಳಿಸಿ ಮೂಲ ಮಾಲಿಕನಿಗೆ ಆಸ್ತಿ ಸ್ವಾಧೀನತೆ ನೀಡಬೇಕು ಎಂದು ನ್ಯಾಯಾಲಯ ಆದೇಶ ಮಾಡಿದ ಹಿನ್ನಲೆಯಲ್ಲಿ ಪುರಸಭೆಯು ತಾಲೂಕಾ ಆಡಳಿತ ಹಾಗೂ ಪೋಲಿಸ್ ಇಲಾಖೆ ಭದ್ರತೆಯಲ್ಲಿ ಸೋಮವಾರ ತೆರುವು ಕಾರ್ಯ ನಡೆಸಿತು. 

ಪಟ್ಟಣದ ಪುರಸಭೆ ಸ.ನಂ. 842/2ರ 2 ಎಕರೆ10 ಗುಂಟೆ ಪ್ರದೇಶದಲ್ಲಿ 14ಪಕ್ಕಾ ಮನೆಗಳು, 20 ಕಚ್ಚಾ ಮನೆಗಳು, 41 ಸೆಡ್‌ಗಳು ಹಾಗೂ 9 ಖಾಲಿನಿವೇಶನಗಳಿವೆ. ಇವೆಲ್ಲವು ಪುರಸಭೆ ವತಿಯಿಂದ ಅಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ನೀಡಿದ್ದಾರೆ. ಆದರೆ ಈ ಜಾಗ ಬೆರೆಯವರ ಹೆಸರಿನಲ್ಲಿದ್ದು  ಆ ಜಾಗದ ಮಾಲಿಕ ಕಳೆದ 20 ವರ್ಷಗಳಿಂದ ಪುರಸಭೆ ವಿರುದ್ದ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದಾನೆ. ಅಂದಿನಿಂದ ಇಂದಿನ ವರೆಗಿನ ಪುರಸಭೆ ಆಢಳಿತ, ಮುಖ್ಯಾಧಿಕಾರಿಗಳ ನಿರ್ಲಕ್ಷದಿಂದ ಪುರಸಭೆ ವತಿಯಿಂದ ಮುಖ್ಯಾಧಿಕಾರಿ ಆಗಲಿ, ಪುರಸಭೆ ಪರ ವಕೀಲರಾಗಲಿ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಹೀಗಾಗಿ ಪುರಸಭೆ ಸ.ನಂ. 842/2ರ 2 ಎಕರೆ10 ಗುಂಟೆ ಪ್ರದೇಶ ಮರಿಯಂಬಿ ಅಬ್ದುಲಸಾಹೇಬ ಕರ್ಜಗಿ ಅವರಿಗೆ ಸೇರಿದ್ದು ಈ ಜಾಗದಲ್ಲಿ ಕಟ್ಟಲಾದ ಮನೆಗಳನ್ನು ತೆರವುಗೊಳಿಸಿ ಮೂಲ ಮಾಲಿಕನಿಗೆ ಆಸ್ತಿ ಸ್ವಾಧೀನತೆ ನೀಡಲು ನ್ಯಾಯಾಲಯ ಆದೇಶ ಮಾಡಿದ ಹಿನ್ನಲೆಯಲ್ಲಿ ತೆರವು ಕಾರ್ಯಾಚರಣೆ ಪ್ರಾರಂಭವಾಗಿತು. 

ಮನೆ ತೆರವುಗೊಳಿಸಲು ಪುರಸಭೆ ಅವರು ತೆರವು ಗೊಳಿಸಿದರೆ ಬಡ ನಿವಾಸಿಗಳು ಎಲ್ಲಿ ಹೋಗಬೇಕು.  ಎಂದು ಕಳೆದ 20 ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ಜನತೆ ಅಧಿಕಾರಿಗಳಲ್ಲಿ ತಮ್ಮ ಅಳನ್ನು ತೋಡಿಕೊಂಡರು. ಯಾವುದಕ್ಕೂ ಲೆಕ್ಕಿಸದೇ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಾಗುತ್ತದೆ ಎಂದು ಪುರಸಭೆ ಸಿಬ್ಬಂಧಿ ಪೋಲಿಸರ ಬಂದು ಬಸ್ತಿಯಲ್ಲಿ ತೆರವು ಕಾರ್ಯಾಚರಣೆ ಪ್ರಾರಂಭಿಸಿದರು. 

ಫಲಾನುಭವಿ ನಿರಾಶ್ರಿತರಿಗೆ ಪಟ್ಟಣದ ಅಲ್ಪಸಂಖ್ಯಾತರ ವಸತಿ ನಿಲಯ, ವೆಂಕಟೇಶ್ವರ ಕಲ್ಯಾಣ ಮಂಟಪ, ಸಾದಿಮಹಲ ಸೇರಿದಂತೆ ತಾತ್ಕಾಲಿಕ ವಸತಿ ಕಲ್ಪಿಸಲಾಗಿದೆ. 

ತೆರವು ಕಾರ್ಯಾಚರಣೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ರಾಜಶೇಖರ ಎಸ್‌. ಸೇರಿದಂತೆ ಅಧಿಕಾರಿಗಳು, 45 ಜನ ಪೌರಕಾರ್ಮಿಕರು, 25 ಜನ ನೀರು ಸರಬರಾಜು ಸಿಬ್ಬಂಧಿ ಭಾಗವಹಿಸಿದ್ದರು 15 ಟ್ಯಾಕ್ಟರ್ 2 ಜೆಜಿಬಿ ಬಳಸಲಾಗಿದೆ. ಪೋಲಿಸ್ ಇಲಾಖೆಯ 30 ಜನ ಮಹಿಳಾ ಪೋಲಿಸ್, 80 ಪೋಲಿಸ್ ಸಿಬ್ಬಂಧಿ, 6 ಜನ ಎಸೈ, ಇಬ್ಬರು ಇನ್ಪೆಕ್ಟರ್, ಒಂದು ಐಆರ್‌ಬಿ ಮತ್ತು 2 ಡಿಆರ್ ತಂಡ ಭಾಗವಹಿಸಿದ್ದರು.