ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ: ಬಸವಣ್ಣನವರು
Couples' reconciliation in court
ಸಿಂದಗಿ 29; ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುವ ರೀತಿಯಲ್ಲಿ 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಮದುವೆಯನ್ನುವುದು ಎರಡು ಜೀವಗಳು ಅನ್ಯೂನ್ಯವಾದ ಬಾಂಧವ್ಯಗಳನ್ನು ಹೊಂದಿ ಸಮಾಜಕ್ಕೆ ದಾರೀದೀಪವಾಗಿ ಜೀವಿಸುವುದು ಎನ್ನುವ ಕಲ್ಪನೆಯಲ್ಲಿ ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸಬೇಕು ಅದನ್ನು ಅರ್ಧಕ್ಕೆ ನಿಲ್ಲಿಸುವುದು ತಪ್ಪು ಅದಕ್ಕೆ ರಾಜಿ ಸಂದಾನ ಮಾಡುವ ಮೂಲಕ ಸತಿಪತಿಗಳನ್ನು ಒಂದು ಮಾಡಿದ ತೃಪ್ತಿ ನಮ್ಮಲ್ಲಿದೆ ಎಂದು ಹೆಚ್ಚುವರಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾದೀಶರಾದ ಎ.ಆರ್.ಎ ಮುಲ್ಲಾ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ ಸಿಂದಗಿ ವತಿಯಿಂದ ಹೆಚ್ಚುವರಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಲಯದಲ್ಲಿ ವೈವಾಹಿಕ ಪ್ರಕರಣ ಸಂಖ್ಯೆ:.43/2025ಸದರಿ ಪ್ರಕರಣದಲ್ಲಿ ನ್ಯಾಯಾದೀಶರಾದ ಎ ಆರ್ ಎ ಮುಲ್ಲಾ ಗೌರವಾನ್ವಿತ ನ್ಯಾಯಾಧೀಶರವರ ನ್ಯಾಯಾಲಯದಲ್ಲಿ ದಂಪತಿಗಳನ್ನು ರಾಜೀಸಂಧಾನದ ಮೂಲಕ ಗೌರವಾನ್ವಿತ ಹೆಚ್ಚುವರಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾದೀಶರ ಸಮ್ಮುಖದಲ್ಲಿ ಪುಪ್ಪ ಮಾಲೆಯನ್ನು ಬದಲಾವಣೆ ಮಾಡುವ ಮೂಲಕ ಸತಿ ಪತಿಗಳನ್ನು ಒಂದುಗೂಡಿಸಿಲಾಯಿತು.
ಸದರಿ ಪ್ರಕರಣದ ನ್ಯಾಯಾಂಗ ಸಂಧಾನಕಾರರಾಗಿ ಎ.ಕೆ.ಕನ್ನೂರು ವಕೀಲರು ಹಾಗೂ ಅರ್ಜಿದಾರರ ಪರ ವಕೀಲರು ಆರ್.ಐ.ಮೋಗಲಾಯಿ ಮತ್ತು ಎದುರುದಾರ ಪರ ವಕೀಲರಾದ ಎನ್.ಎಸ್.ಮನಗೂಳಿ ಮತ್ತು ಜಿ.ಸಿ.ಭಾವಿಕಟ್ಟಿ, ಐ.ಎಸ್.ಹೀರೆಮಠ, ಜಿ.ವೈ.ಬಾಣಿ, ವಕೀಲರು ಇತರ ವಕೀಲರು ಹಾಜರು ಇದ್ದರು, ಮತ್ತು ನ್ಯಾಯಾಲಯದ ಸಿಬ್ಬಂದ್ದಿಯಾದ ಎ.ಎಲ್.ಮುಲ್ಲಾ ಪ್ರಥಮ ದರ್ಜೆ ಸಹಾಯಕರು ಮತ್ತು ಬೆರಳಚ್ಚುಗಾರ ಬಸವರಾಜ ಮೊಕಾಶಿ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯಿ ಸಿಬ್ಬಂದ್ದಿ ಶ್ರೀಕಾಂತ ಕಟ್ಟಮನಿ ಉಪಸ್ಥೀತರಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 