ನಾಟಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರನ್ ಪೇರಿಸುವ ಒತ್ತಡದಲ್ಲಿದ್ದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ಅವರಿಗೆ ಕೌಂಟಿ ಕ್ರಿಕೆಟ್ ನೆರವಾಯಿತು ಎಂದು ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ರನ್ ಗಳಿಸಲು ಪರದಾಡಿದ ಪೂಜಾರ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ 72 ರನ್ ಬಾರಿಸಿದ್ದು ಇಂಗ್ಲೆಂಡ್ ವಾತಾವರಣಕ್ಕೆ ಹೊಂದಿಕೊಂಡು ಆಡಲು ನನಗೆ ಕೌಂಟಿ ಕ್ರಿಕೆಟ್ ನೆರವಾಯಿತು ಎಂದು ಹೇಳಿದ್ದಾರೆ.
ಕೌಂಟಿ ಕ್ರಿಕೆಟ್ ನಲ್ಲಿ ಆಡಿದ್ದು ನನಗೆ ಹೆಚ್ಚು ನೆರವಾಯಿತು. ನಾನು ಹೆಚ್ಚಾಗಿ ಕಲಿತುಕೊಂಡೆ. ನಾನು ಕೌಂಟಿ ಕ್ರಿಕೆಟ್ ನಲ್ಲಿ ಹೆಚ್ಚು ರನ್ ಪೇರಿಸಲು ಸಾಧ್ಯವಾಗದಿದ್ದರು. ಬೇರೆ ಬೇರೆ ಪಿಚ್ ಗಳಲ್ಲಿ ಆಡುವ ಸಾಮಥ್ರ್ಯ ಪಡೆದಿದ್ದೇನೆ ಎಂದರು.
ನೆಟ್ಸ್ ನಲ್ಲಿ ತರಬೇತಿ ಪಡೆಯುವಾಗ ನಾನು ಉತ್ತಮವಾಗಿ ಆಡುತ್ತೇನೆ ಎಂದು ಭಾವಿಸಿದ್ದೆ. ಆದರೆ ಇನ್ನಿಂಗ್ಸ್ ಪ್ರಾರಂಭಿಸುವಾಗ ಕೊಂಚ ಒತ್ತಡಕ್ಕೆ ಸಿಲುಕುತ್ತಿದ್ದೆ ಆದರೆ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ನಾನು ಯಾವುದೇ ಒತ್ತಡಕ್ಕೀಡಾಗಿರಲಿಲ್ಲ ಎಂದು ಹೇಳಿದ್ದಾರೆ.