ಆರಿವರ್ಕನಿಂದ ವಸ್ತ್ರವಿನ್ಯಾಸ ಉದ್ಯಮ ಪ್ರಾರಂಭಗೊಂಡಿವೆ : ಭರತ ಬೊಮ್ಮಾಯಿ
Costume design industry started from Arivarka: Bharata Bommai
ಶಿಗ್ಗಾವಿ 19 : ವಿಶ್ವದಲ್ಲಿ ಮಹಿಳೆಯರ ಹಣ ಕ್ರೂಡೀಕರಣದ ಹಿನ್ನೆಲೆಯಲ್ಲಿ ಬ್ಯಾಂಕುಗಳು ಸ್ಥಾಪನೆಯಾದದ್ದು ಅಲ್ಲದೇ ಆರಿವರ್ಕನಿಂದ ದೊಡ್ಡ ಮಟ್ಟದ ವಸ್ತ್ರವಿನ್ಯಾಸ ಉದ್ಯಮಗಳು ಪ್ರಾರಂಭಗೊಂಡಿವೆ ಎಂದು ಭಾಜಪ ಮುಖಂಡ ಭರತ ಬೊಮ್ಮಾಯಿ ಹೇಳಿದರು.
ಪಟ್ಟಣದ ಸವಣೂರ ರಸ್ತೆ ಹೊರವಲಯದ ಬಸವರಾಜ ಬೊಮ್ಮಾಯಿ ಅವರ ನಿವಾಸದ ಸಭಾಂಗಣದಲ್ಲಿ ನಡೆದ ವಿಶ್ವ ದಾಖಲೆಗಾಗಿ ಭಾರತ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಾಂಪಿಟೇಶನ್ ಪೆಸ್ಟಿವಲ್ ಉದ್ದೇಶಿಸಿ ಮಾತನಾಡಿದ ಅವರು ಭಾರತ ದೇಶದಲ್ಲಿ ಮೊದಲಿಗೆ ಆರಿವರ್ಕ, ಟೈಲರಿಂಗ್, ಕ್ರೋಶಾ, ಕುಚ್ಚು ಉದ್ಯಮವು ಮನೆಯಲ್ಲಿ ಪ್ರಾರಂಭವಾಗಿ ಈಗ ಉನ್ನತ ಮಟ್ಟದ ಉದ್ಯಮಗಳಾಗಿ ಕಾರ್ಯನಿರ್ವಹಿಸುತ್ತಿವೆ ಅದಕ್ಕೆ ಮಹಿಳೆಯರ ಕಲೆ ಹಾಗೂ ಕೌಶಲ್ಯ ಕಾರಣ ಎಂದರು.
ಅಧ್ಯಕ್ಷತೆವಹಿಸಿ ಡಾ. ಕೀರ್ತನಾ ಮಾತನಾಡಿ ಮಹಿಳೆಯರು ಅಬಲೆಯರಲ್ಲ ಸಬಲೆಯರು ಇತ್ತೀಚಿನ ದಿನಮಾನದಲ್ಲಿ ಸ್ವಾವಲಂಬನೆ ಜೀವನ ನಿರ್ವಹಿಸಲು ಅವರ ಉದ್ಯೋಗ ಪ್ರಮುಖವಾಗಿದೆ ಆದ್ದರಿಂದ ಭಾರತ ದೇಶದ ವಿವಿಧ ರಾಜ್ಯದಲ್ಲಿ ವಸ್ತ್ರ ಉದ್ಯಮಗಳು ಬಹೃತ ಪ್ರಮಾಣದಲ್ಲಿ ಪ್ರಾರಂಭ ಗೊಂಡಿವೆ ಅದರಲ್ಲಿ ಶೇ 95 ರಷ್ಷು ಮಹಿಳೆಯರು ದುಡಿದು ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಡಾ. ಅರವಿಂದ ಲಕ್ಷ್ಮೀ ನಾರಾಯಣ, ಕಾರ್ಯಕ್ರಮ ಆಯೋಜಕಿ ಲಕ್ಷ್ಮೀ ಕಾಡಪ್ಪನವರ, ಭಾಜಪ ಅಧ್ಯಕ್ಷ ವಿಶ್ವನಾಥ ಹರವಿ, ಶಿವಾನಂದ ಮ್ಯಾಗೇರಿ, ಡಾ ಶೋಬಾ ನಿಸ್ಸಿಮಗೌಡ್ರ,ಡಾ. ವಿಜಯಲಕ್ಷ್ಮೀ ಗೇಟಿ, ಉಷಾ ಬಿಳಿಕುದರಿ, ರೂಪಾ ಬನ್ನಿಕೊಪ್ಪ, ನಿರ್ಮಲಾ ಯಡೆಪ್ಪನವರ ಸೇರಿದಂತೆ ನೂರಾರು ಮಹಿಳೆಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 