ಬೆಂಗಳೂರು,ಡಿ.29-ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ವಿಧಾನಸಭೆಯ ಕಾರ್ಯದಶರ್ಿ ಎಸ್.ಮೂತರ್ಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಎಸ್.ಮೂತರ್ಿ ನಡೆಸಿರುವ ಭ್ರಷ್ಟಾಚಾರ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಯಾಗುವಂತೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯ ಕಾರ್ಯದಶರ್ಿಯವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
2016-17ನೇ ಸಾಲಿನಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನಕ್ಕೆ ಮಾಡಲಾದ ಖಚರ್ು-ವೆಚ್ಚಗಳಲ್ಲಿ ಸಾಕಷ್ಟು ಆರೋಪಗಳು ಕೇಳಿಬಂದಿತ್ತು. ಸಕರ್ಾರದ ಬೊಕ್ಕಸಕ್ಕೆ ಸುಮಾರು 10ರಿಂದ 12 ಕೋಟಿ ಅನಗತ್ಯ ಹೊರೆಯಾಗಿದೆ ಎಂದು ಹಣಕಾಸು ಇಲಾಖೆ ಸಂಶಯ ವ್ಯಕ್ತಪಡಿಸಿತ್ತು.
ಎಸ್.ಮೂತರ್ಿ ಅವರ ವಿರುದ್ಧ ತನಿಖೆ ನಡೆಸಲು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಹೆಚ್ಚುವರಿ ನಿದರ್ೇಶಕ ಶಿವರುದ್ರಪ್ಪ ನೇತೃತ್ವದ ಐವರು ಅಧಿಕಾರಿಗಳ ತಂಡ ತನಿಖೆ ನಡೆಸಿ ರಾಜ್ಯ ಸಕರ್ಾರದ ಮುಖ್ಯ ಕಾರ್ಯದಶರ್ಿ ಟಿ.ಎಂ.ವಿಜಯಭಾಸ್ಕರ್ ಮತ್ತು ವಿಧಾನಸಭೆಯ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರಿಗೆ ವರದಿ ನೀಡಿತ್ತು.
ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಊಟೋಪಚಾರ, ಪೆಂಡಾಲ್ ನಿಮರ್ಾಣ, ಸುವರ್ಣಸೌಧದ ಸುಣ್ಣಬಣ್ಣ, ಶೌಚಾಲಯ ನಿಮರ್ಾಣ, ಸೊಳ್ಳೆ ಪರದೆಗಳ ಖರೀದಿ ಸೇರಿದಂತೆ ಮತ್ತಿತರ ವೆಚ್ಚಗಳಿಗೆ 10ರಿಂದ 12 ಕೋಟಿ ವೆಚ್ಚವಾಗಿದೆ ಎಂದು ಎಸ್.ಮೂತರ್ಿ ಸಕರ್ಾರಕ್ಕೆ ಮಾಹಿತಿ ನೀಡಿದ್ದರು.
ಎಸ್.ಮೂತರ್ಿ ನೀಡಿದ್ದ ಲೆಕ್ಕಕ್ಕೂ, ಲೆಕ್ಕ ಪರಿಶೋಧನಾ ತಂಡ ನೀಡಿದ ವರದಿಗೂ ಸಾಕಷ್ಟು ವ್ಯತ್ಯಾಸವಾಗಿದ್ದರಿಂದ ಮೂತರ್ಿಯನ್ನು ಅಮಾನತು ಮಾಡಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಪೆಂಡಾಲ್ ನಿಮರ್ಾಣಕ್ಕೆ 9.32 ಕೋಟಿ, ಸುವರ್ಣ ಸೌಧಕ್ಕೆ ಸುಣ್ಣಬಣ್ಣ ಬಳಿಯಲು 2.48 ಕೋಟಿ, ಸೊಳ್ಳೆ ಪರದೆ ಬಾಡಿಗೆ 1.84 ಕೋಟಿ, ಕೆಮಿಕಲ್ ಶೌಚಾಲಯಕ್ಕೆ 2.42 ಕೋಟಿ, ಗಣ್ಯರು ಹಾಗೂ ಊಟದ ಬಿಲ್ಗೆ 45.48 ಲಕ್ಷ ಹಣವನ್ನು ಖಚರ್ು ಮಾಡಲಾಗಿದೆ ಎಂದು ಎಸ್.ಮೂತರ್ಿ ನೇತೃತ್ವದ ತಂಡ ಸಕರ್ಾರಕ್ಕೆ ವರದಿಯನ್ನು ಕೊಟ್ಟಿತ್ತು.ಈ ವರದಿಗೆ ಸಾಕಷ್ಟು ಆಕ್ಷೇಪಗಳು ಕೇಳಿಬಂದಿದ್ದರಿಂದ ತನಿಖೆ ನಡೆಸಲು ಹಣಕಾಸು ಇಲಾಖೆ ಸೂಚನೆ ಕೊಟ್ಟಿತ್ತು.ಇದೀಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂತರ್ಿಯವರನ್ನು ಅಮಾನತು ಮಾಡಲಾಗಿದೆ.