7ನೇ ವೇತನ ಬೇಡಿಕೆ ಈಡೇರಿಸುವಂತೆ ಪಾಲಿಕೆ ನೌಕರರ ಪ್ರತಿಭಟನೆ

7ನೇ ವೇತನ ಬೇಡಿಕೆ ಈಡೇರಿಸುವಂತೆ ಪಾಲಿಕೆ ನೌಕರರ ಪ್ರತಿಭಟನೆ Corporation employees' protest to fulfill the 7th salary demand

ಬೆಳಗಾವಿ 08: ರಾಜ್ಯ ಸರಕಾರಿ ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯವನ್ನು  ವಿಸ್ತರಿಸುವಂತೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳಿಗೆ ವಿಸ್ತರಿಸುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಯ ನೌಕರರ ಸಂಘದ ಪದಾಧಿಕಾರಿಗಳು ಬೆಳಗಾವಿ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.   

ರಾಜ್ಯದ ಮಹಾನಗರ ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿ ಮಾಡಿ ಕರಡು ಅಧಿ ಸೂಚನೆಯನ್ನು ಪ್ರಕಟಿಸಬೇಕು. ರಾಜ್ಯ ಸರಕಾರಿ ನೌಕರರಿಗೆ ಜಾರಿ ಮಾಡಿರುವ ಕೆಜಿಐಡಿ, ಜಿಪಿಎಫ್ ಸೌಲಭ್ಯವನ್ನು ಮಹಾನಗರ ಪಾಲಿಕೆಯ ಅಧಿಕಾರಿ, ನೌಕರರಿಗೆ ಜಾರಿ ಮಾಡಬೇಕೆಂದು ಆಗ್ರಹಿಸಿದರು.     

ಸರಕಾರಿ ನೌಕರರಿಗೆ ಜಾರಿಗೊಳಿಸಿರುವ ಆರೋಗ್ಯ ಸೌಲಭ್ಯದ ಜ್ಯೋತಿ, ಆರೋಗ್ಯ ಸಂಜೀವಿನಿಯನ್ನು ಪಾಲಿಕೆಯ ಅಧಿಕಾರಿಗಳಿಗೂ ಅನ್ವಯವಾಗಬೇಕು ಹಾಗೂ ಮಹಾನಗರ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುವ ಹಿರಿಯ ನೌಕರರಿಗೆ ಮುಂಬಡ್ತಿ ನೀಡಬೇಕೆಂದು ಆಗ್ರಹಿಸಿದರು.   ಈ ಸಂದರ್ಭದಲ್ಲಿ ಗುಂಡಪ್ಪನವರ, ಸುರೇಶ ದ್ಯಾವಣ್ಣವರ ಸೇರಿದಂತೆ ಪಾಲಿಕೆಯ ನೌಕರರು ಉಪಸ್ಥಿತರಿದ್ದರು.