ಬೀಜಿಂಗ್, ಜನವರಿ 30 ಕೊರೊನಾ ವೈರಸ್ ಚೀನಾಕ್ಕೆ ಮಾರಕ ಪರಿಸ್ಥಿತಿ ತಂದಿದ್ದು, ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 132ಕ್ಕೆ ಏರಿಕೆಯಾಗಿದೆ. ಇದರ ನಡುವೆಯೇ ಹಲವು ದೇಶಗಳ ವಿಮಾನ ಯಾನ ಸಂಸ್ಥೆಗಳು, ಚೀನಾದ ನಗರಗಳಿಗೆ ವಿಮಾನ ಸಂಚಾರವನ್ನೇ ಸದ್ಯಕ್ಕೆ ಸ್ಥಗಿತಗೊಳಿಸಿವೆ. ದೇಶಾದ್ಯಂತ ಸೋಂಕಿತರ 6 ಸಾವಿರಕ್ಕೇರಿಕೆಯಾಗಿದೆ. ಮುಂದಿನ 10 ದಿನಗಳಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂಬ ಆತಂಕವೂ ಕಾಡುತ್ತಿದೆ ಎಂದೂ ಚೀನಾದ ಆರೋಗ್ಯ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ .ಸದ್ಯ 1,239 ಮಂದಿಯ ಸ್ಥಿತಿ ತೀರಾ ಗಂಭೀರವಾಗಿದೆ ಇದರ ನಡುವೆಯೇ ಸೋಂಕಿನಿಂದ ಗುಣಮುಖರಾದ 103 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ .