ಕಲಬುರಗಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆ: ಶರತ್ ಬಿ ಸ್ಪಷ್ಟ

ಕಲಬುರಗಿ, ಏ.12, ದೇಶದಲ್ಲಿ ಮೊದಲ ಬಾರಿಗೆ ವೃದ್ಧ ನನ್ನು ಬಲಿ ಪಡೆದಿದ್ದ ಕಲಬುರಗಿಯಲ್ಲಿ ಇದೀಗ ಹೊಸ ಪ್ರಕರಣ ದೃಢಪಡುವ ಮೂಲಕ‌ ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆ ಕಂಡಿದೆ.
ಕೊರೋನಾ‌  ಸೋಂಕಿನಿಂದ ಕಳೆದ‌ ಏ.7ರಂದು‌ ಮೃತಪಟ್ಟಿದ ಕಲಬುರಗಿಯ 65 ವರ್ಷದ ವ್ಯಕ್ತಿಯ ನೇರ  ಸಂಪರ್ಕದಲ್ಲಿ ಬಂದಿರುವ 24 ವರ್ಷದ ಸೊಸೆಗೆ ಮತ್ತು ಸದರಿ ವ್ಯಕ್ತಿಗೆ ಚಿಕಿತ್ಸೆ‌ ನೀಡಿದ  ಬಹಮನಿ ಅಸ್ಪತ್ರೆಯಲ್ಲಿ ಆಯಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಲಬುರಗಿಯ ಆದರ್ಶ ನಗರದ 38  ವರ್ಷದ ಮಹಿಳೆಗೆ ರವಿವಾರ ಕೊರೊನಾ ಪಾಸಿಟಿವ್ ಎಂದು ವೈದ್ಯಕೀಯ ವರದಿಯಿಂದ ದೃಢವಾಗಿದೆ  ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಪ್ರಸ್ತುತ ಈ ಇಬ್ಬರು ಸೊಂಕಿತರು ಕಲಬುರಗಿ ಇ.ಎಸ್.ಐ.ಸಿ. ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ  ಜಿಲ್ಲೆಯಲ್ಲಿ ಇದೂವರೆಗೆ ಕೊರೊನಾ ಪಾಸಿಟಿವ್ ಸಂಖ್ಯೆ 12ಕ್ಕೆ ಏರಿದಂತಾಗಿದ್ದು,  ಇದರಲ್ಲಿ ಇಬ್ಬರು ವ್ಯಕ್ತಿಗಳು ನಿಧನರಾಗಿದ್ದು, ಇಬ್ಬರೂ ವ್ಯಕ್ತಿಗಳು ಕೊರೊನಾ  ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ  ತಿಳಿಸಿದ್ದಾರೆ.ತೀವ್ರ ಜ್ವರ,  ಕೆಮ್ಮು, ಉಸಿರಾಟದಿಂದ ಬಳಲುತ್ತಿದ್ದ ವೃದ್ಧ , ಮೊದಲು ಸ್ಟಾರ್‌ ಆಸ್ಪತ್ರೆ ನಂತರ   ಬಹಮನಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆರೋಗ್ಯ ತೀವ್ರ ಹದಗೆಟ್ಟ  ಪರಿಣಾಮ ನಂತರ ಖಾಸಗಿ ವೈದ್ಯರು ಅವರನ್ನು ನಗರದ ಇಎಸ್‌ಐ ಆಸ್ಪತ್ರೆಗೆ ರವಾನಿಸಿದ್ದರು.  ನಂತರ ದಾಖಲಾಗಿ ಚಿಕಿತ್ಸೆ ಪಡೆಯುವ ಹೊತ್ತಿಗೆ ವೃದ್ಧ ಕೊನೆಯುಸಿರೆಳೆದಿದ್ದರು.ಕೊರೊನಾ ಸೋಂಕಿನ ಲಕ್ಷಣಗಳಿದ್ದರೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ ಹಿನ್ನಲೆಯಲ್ಲಿಸ್ಟಾರ್, ಬಹಮನಿ ಎರಡು ಆಸ್ಪತ್ರೆಗಳನ್ನು   ಜಿಲ್ಲಾಡಳಿತ ಬಂದ್ ಮಾಡಿಸಿ,ಆಸ್ಪತ್ರೆಗಳ ಸಿಬ್ಬಂದಿಯ ಕ್ವಾರಂಟೇನ್ ನಲ್ಲಿಟ್ಟಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಆಯಾ ಹಾಗೂ ಮೃತನ ಸೊಸೆಗೆ ಕೊರೊನಾ ಸೋಂಕು ತಗುಲಿರುವುದರಿಂದ ಜನ ಇನ್ನಷ್ಟು ಆತಂಕಕ್ಕೀಡಾಗಿದ್ದಾರೆ.