ಬೆಂಗಳೂರು, ಏ 13,ರಾಜ್ಯದಲ್ಲಿ 8, 14 ಹಾಗೂ 16 ವರ್ಷದ ಮಕ್ಕಳಲ್ಲಿ ಹೊಸದಾಗಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದೆ. ಭಾನುವಾರ ಸಂಜೆಯಿಂದ ಸೋಮವಾರ ಮಧ್ಯಾಹ್ನದವರೆಗೆ 15 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 247ಕ್ಕೇರಿಕೆಯಾಗಿದೆ. ಧಾರವಾಡದಲ್ಲಿ 4, ಮಳವಳ್ಳಿಯಲ್ಲಿ 3, ಬೀದರ್ ನಲ್ಲಿ 2, ಬಾಗಲಕೋಟೆಯಲ್ಲಿ 1, ಬೆಳಗಾವಿಯ ರಾಯಭಾಗದಲ್ಲಿ , ದೊಡ್ಡಬಳ್ಳಾಪುರದಲ್ಲಿ 1 ಹಾಗೂ ಬೆಂಗಳೂರು ನಗರದ 1 ಪ್ರಕರಣ ವರದಿಯಾಗಿದೆ. ಮಂಡ್ಯ ಮಳವಳ್ಳಿಯ 8 ವರ್ಷದ ಹೆಣ್ಣು ಮಗು, 18 ವರ್ಷದ ಯುವಕ ಮತ್ತು 60 ವರ್ಷದ ವೃದ್ಧ, ಹುಬ್ಬಳ್ಳಿ-ಧಾರವಾಡದ 55, 36 ವರ್ಷದ ಗಂಡು ಮತ್ತು 60 ವರ್ಷದ ಮಹಿಳೆ, ಬಾಗಲಕೋಟೆ ಮುಧೋಳದ 27 ವರ್ಷದ ಯುವಕ, ಬೀದರ್ ನಲ್ಲಿ 16 ಮತ್ತು 35 ವರ್ಷದ ಮಹಿಳೆ, ಬೆಳಗಾವಿಯ ರಾಯಭಾಗದಲ್ಲಿ 20,14,45 ವರ್ಷದ ವ್ಯಕ್ತಿಗಳು, ದೊಡ್ಡಬಳ್ಳಾಪುರದಲ್ಲಿ 39 ವರ್ಷದ ಗಂಡು, ಬೆಂಗಳೂರು ನಗರದ 62 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.