ವಾಷಿಂಗ್ಟನ್, ಮಾರ್ಚ್ 28, ಅಮೆರಿಕದಲ್ಲಿ ಕರೋನ ಹಾವಳಿ ಚೀನಾಕ್ಕಿಂತಲು ಹೆಚ್ಚಾಗಿದೆ ಈಗ 100,000 ಕ್ಕೂ ಹೆಚ್ಚು ( ಲಕ್ಷಕ್ಕೂ ಮಿಗಿಲಾದ) ಕೋವಿಡ್ -19 ಪ್ರಕರಣಗಳು ದೃ ಡಪಟ್ಟಿವೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಶನಿವಾರ ಪ್ರಕಟಿಸಿದೆ.ಜಗತ್ತಿನಾದ್ಯಂತ ಹೆಚ್ಚು ದೃಡಪಡಿಸಿದ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಅಮೆರಿಕವೇ ಎಲ್ಲರಿಗಿಂತ ಮುಂದೆ ಇದೆ ಎಂಬ ಅಚ್ಚರಿ ಮಾಹಿತಿ ಬಹಿರಂಗವಾಗಿದೆ.ಇಟಲಿ ಮತ್ತು ಚೀನಾವನ್ನು ಹಿಂದಿಕ್ಕಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಹೊಂದಿರುವ ದೇಶವಾಗಿ ಪರಿವರ್ತನೆಯಾಗಿದೆ .ಡೆನ್ವರ್ ಚಾನೆಲ್ ವರದಿಯ ಪ್ರಕಾರ, ಅಮೆರಿಕದ ಪ್ರಕರಣಗಳು ವಿಶ್ವದಾದ್ಯಂತ ದೃಡಪಡಿಸಿದ ಪ್ರಕರಣಗಳಲ್ಲಿ ಆರನೇ ಒಂದು ಭಾಗವನ್ನು ಪ್ರತಿನಿಧಿಸುತ್ತವೆ.