ಕೊರೊನಾವೈರಸ್ ಉಲ್ಬಣ ಹಿನ್ನೆಲೆ: ಚೀನಾದಿಂದ ರಷ್ಯಾ ನಾಗರಿಕರ ಸ್ಥಳಾಂತರಿಸಲು ಯೋಜನೆ

ಬೀಜಿಂಗ್, ಜ 28, ಕರೋನ ವೈರಸ್ ಕೇಂದ್ರಬಿಂದುವಾಗಿರುವ ಹುಬೈ ಪ್ರಾಂತ್ಯದಿಂದ ರಷ್ಯಾದ ನಾಗರಿಕರನ್ನು ಸ್ಥಳಾಂತರಿಸುವ ಬಗ್ಗೆ ಬೀಜಿಂಗ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯು ಚೀನಾದೊಂದಿಗೆ ಚರ್ಚಿಸುತ್ತಿದೆ.  ಹುಬೈ ಪ್ರಾಂತ್ಯದ ವುಹಾನ್‌ನಿಂದ 140 ರಷ್ಯಾದ ನಾಗರಿಕರನ್ನು ಸ್ಥಳಾಂತರಿಸುವ ಬಗ್ಗೆ ರಷ್ಯಾ ಸರ್ಕಾರ ಚೀನಾದೊಂದಿಗೆ ಕೆಲಸ ಮಾಡುತ್ತಿದೆ ಎಂದು ಶನಿವಾರ  ಚೀನಾದ ರಷ್ಯಾ ರಾಯಭಾರ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಾರ್ಜಿ ಎಗೊರೊವ್ ಹೇಳಿದರು.

 ‘ಹೊಸ ಕರೋನವೈರಸ್ 2019-ಎನ್ ಸಿಒವಿ ಹರಡುವಿಕೆ ತಡೆಯುವ ಹೋರಾಟದ ಭಾಗವಾಗಿ, ಚೀನಾ ಅಧಿಕಾರಿಗಳು ಹುಬೈನಲ್ಲಿ ಜನರ ಓಡಾಟಕ್ಕೆ ನಿರ್ಬಂಧಗಳನ್ನು ಹೇರಿದ್ದು, ಈ ಪ್ರಾಂತ್ಯದಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಚೀನಾದಲ್ಲಿನ ರಷ್ಯಾ ರಾಯಭಾರ ಕಚೇರಿಯು ಚೀನಾದೊಂದಿಗೆ ಸಂಪರ್ಕದಲ್ಲಿದೆ.’ ಎಂದು ಪ್ರಕಟಣೆ ತಿಳಿಸಿದೆ“ಸದ್ಯ, ಈ ಪ್ರಾಂತ್ಯದಲ್ಲಿ ಉಳಿದುಕೊಂಡಿರುವ ವಿದೇಶಿಯರಿಗೆ ಎಲ್ಲ ರೀತಿಯ ಸಹಾಯ ಒದಗಿಸುವುದಾಗಿ  ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ವೈರಸ್‍ ಹರಡುವಿಕೆ ತಡೆಯಲು ಸರ್ಕಾರ ಮಟ್ಟದಲ್ಲಿ ಎಲ್ಲ ರೀತಿಯಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.’ಎಂದು ಅವರು ಹೇಳಿದ್ದಾರೆ ಸ್ಥಳೀಯ ಅಧಿಕಾರಿಗಳು ಹುಬೈ ಪ್ರಾಂತ್ಯದ ನಿವಾಸಿಗಳಿಗೆ ಆಹಾರ, ಅಗತ್ಯ ವಸ್ತುಗಳು ಮತ್ತು ಇತರ ದಿನಬಳಕೆ ವಸ್ತುಗಳನ್ನು ನಿರಂತರವಾಗಿ ಪೂರೈಸುತ್ತಿದ್ದಾರೆ, ವಿದೇಶಿ ಪ್ರಜೆಗಳು ತಾವು ಉಳಿದುಕೊಂಡಿರುವ ಸ್ಥಳಗಳಲ್ಲೇ ಉಳಿಯುವಂತೆ ಸಲಹೆ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.