ಚೀನಾ ಆರ್ಥಿಕಾಭಿವೃದ್ಧಿ ಮೇಲೆ ಕರೋನವೈರಸ್ ಪರಿಣಾಮ ಬೀರದು- ಟ್ರಂಪ್ ಗೆ ಜಿನ್ ಪಿಂಗ್ ಮಾಹಿತಿ

ಬೀಜಿಂಗ್, ಫೆ 7 ಕೊರೋನವೈರಸ್ ಚೀನಾದ ದೀರ್ಘಕಾಲೀನ ಆರ್ಥಿಕ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಡೊನಾಲ್ಡ್ ಟ್ರಂಪ್‌ಗೆ ಶುಕ್ರವಾರ ದೂರವಾಣಿ ಮೂಲಕ ತಿಳಿಸಿದ್ದಾರೆ. ‘ಸದ್ಯದ ಚೀನಾ ಆರ್ಥಿಕತೆ ಅಭಿವೃದ್ಧಿಯಲ್ಲಿನ ಸಕಾರಾತ್ಮಕ ಬೆಳವಣಿಗೆ ದೀರ್ಘಾವಧಿಯಲ್ಲಿ ಬದಲಾಗುವುದಿಲ್ಲ’ ಎಂದು ಕ್ಷಿ ಜಿನ್ ಪಿಂಗ್ ಹೇಳಿರುವುದಾಗಿ   ಸೆಂಟ್ರಲ್ ಟೆಲಿವಿಷನ್ ವರದಿ ಮಾಡಿದೆ.  ಕಳೆದ ಡಿಸೆಂಬರ್‌ನಲ್ಲಿ ಚೀನಾದ ಹುಬೈ ಪ್ರಾಂತ್ಯದ ವುಹಾನ್‌ನಲ್ಲಿ  ಕೊರೊನಾವೈರಸ್ ಸೋಂಕು ಮೊದಲ ಬಾರಿಗೆ ಪತ್ತೆಯಾಗಿತ್ತು. ಅಂದಿನಿಂದ ಮಾರಕ ಸೋಂಕು 25 ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದೆ. ಚೀನಾದಲ್ಲಿ ವೈರಸ್ ಸೋಂಕಿನಿಂದ ಇದುವರೆಗೆ 636 ಜನರು ಸತ್ತಿದ್ದು, 31,000 ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. ವೈರಸ್ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ  ಕಳೆದ ವಾರ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.