ಮಾಸ್ಕೋ, ಫೆ 12 : ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಾಣು ಸೋಂಕಿಗೆ ಚೀನಾಧ ಹುಬೈ ಪ್ರಾಂತ್ಯದಲ್ಲಿ ಬಲಿಯಾದವರ ಸಂಖ್ಯೆ 1068 ಕ್ಕೆ ಏರಿಕೆಯಾಗಿದೆ.
ಪ್ರಾದೇಶಿಕ ಆರೋಗ್ಯ ಸಮಿತಿ ಬುಧವಾರ ಈ ಅಂಕಿ ಅಂಶ ನೀಡಿದೆ.
ಈ ಪ್ರಾಂತ್ಯದಲ್ಲಿ ಕೊರೊನಾ ವೈರಾಣು ಸೋಂಕು ಪೀಡಿತರ ಸಂಖ್ಯೆ 33,366 ಕ್ಕೆ ಏರಿಕೆಯಾಗಿದೆ. ಒಟ್ಟು 2,639 ರೋಗಿಗಳು ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಯಿಂದ ವಾಪಸ್ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.