ಕೊರೊನಾ ಸೋಂಕು : ಚೀನಾದ ಹುಬೈ ಪ್ರಾಂತ್ಯದಲ್ಲಿ ಸಾವಿನ ಸಂಖ್ಯೆ ಶೇ 22 ರಷ್ಟು ಹೆಚ್ಚಳ

ಮಾಸ್ಕೋ, ಫೆ 13 :   ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಾಣು ಸೋಂಕಿಗೆ ಬಲಿಯಾದವರ ಸಂಖ್ಯೆ ಕಳೆದ 24 ಗಂಟೆಗಳಲ್ಲಿ ಚೀನಾದ ಹುಬೈ ಪ್ರಾಂತ್ಯದಲ್ಲಿ 1,310 ಕ್ಕೆ ಏರಿಕೆಯಾಗಿದೆ. 

  ಮೃತರ ಸಂಖ್ಯೆ 242 ರಿಂದ 1310 ಕ್ಕೆ ಏರಿಕೆಯಾಗಿದ್ದು ಸಾವಿನ ಸಂಖ್ಯೆ ಶೇ 22 ರಷ್ಟು ಹೆಚ್ಚಳವಾಗಿದೆ ಎಂದು ಅಲ್ಲಿನ ಪ್ರಾಂತೀಯ ಆಯೋಗ ಗುರುವಾರ ತಿಳಿಸಿದೆ.

  ಅಲ್ಲದೇ ಸೋಂಕಿತರ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಸೋಂಕಿತರ ಸಂಖ್ಯೆ 33,366 ರಿಂದ 48,206 ಕ್ಕೆ ಏರಿಕೆಯಾಗಿದ್ದು ಶೇ 44 ರಷ್ಟು ಹೆಚ್ಚಳ ಕಂಡಿದೆ. ಚಿಕಿತ್ಸೆ ನಂತರ 3,400 ಜನರನ್ನು ಆಸ್ಪತ್ರೆಯಿಂದ ವಾಪಸ್ ಮನೆಗೆ ಕಳುಹಿಸಲಾಗಿದೆ.

  ಚೀನಾದ ವುಹಾನ್ ಪ್ರಾಂತ್ಯದಲ್ಲಿ ಡಿಸೆಂಬರ್ ಕೊನೆಯಲ್ಲಿ ಹೊಸ ಮಾದರಿಯ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ನಂತರ 25 ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿತ್ತು.

  ಈ ಸೋಂಕು ವ್ಯಾಪಿಸಿದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯು ಎಚ್ ಒ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.