ಪುಣೆ ಏ.12,ಮಹಾರಾಷ್ಟ್ರದಲ್ಲಿ ಭಾನುವಾರ 134 ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ವರದಿಯಾಗಿದ್ದು, ಈ ಸಂಖ್ಯೆ 1900 ಕ್ಕೆ ಮುಟ್ಟಿದೆ.ಮುಂಬೈನಲ್ಲಿ 118, ರಾಯಗಡ್, ಅಮರಾವತಿ, ಭಿವಾಂಡಿ, ಪಿಂಪ್ರಿ-ಚಿಂಚ್‌ವಾಡ್ ಗಳಲ್ಲಿ ತಲಾ 1, ಪುಣೆ 4, ಮೀರಾ ಭಾಯಂದರ್ 7 ಮತ್ತು ನವೀ ಮುಂಬೈ, ಥಾಣೆ ಮತ್ತು ವಸೈ ವಿರಾರ್ 2 ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.ಕೋವಿಡ್-19 ಪ್ರಕರಣಗಳು ನಿನ್ನೆ 1700 ರ ಗಡಿ ದಾಟಿದ್ದರಿಂದ ಮಹಾರಾಷ್ಟ್ರ ಸರ್ಕಾರ ಶನಿವಾರ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ಘೋಷಿಸಿತ್ತು. ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟಲು ಮುಂದಿನ ಕ್ರಮಗಳನ್ನು ನಿರ್ಧರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಸಭೆ ನಡೆಸಿದ ಕೂಡಲೇ ಈ ನಿರ್ಧಾರಕ್ಕೆ ಬರಲಾಗಿದೆ.